Wednesday, June 15, 2011

'ಲಂಚ'

ಬೇಕು ಕೋಟಿ ಬೇಕು
ಎಂದು ದೇವ ದೇವ ಗಳಿಗೆ ಕೋಟಿ ನೈವೆದ್ದೆಗಳ ವಿಶೇಷ!
ಬೇಕು ದರ್ಶನ ಬೇಕು
ಎಂದು ದೇವ ದೇವಾಲಯಗಳಿಗೆ ಕೋಟಿ ಕಾಣಿಕೆಗಳ ವಿಶೇಷ!
ದೇವರಿಗೆನೇ ಬೇಕು ... ಇನ್ನೂ ಹುಲು ಮಾನವನಿಗೆ ಬೇಡವೇ?
.
.
ಕೆಲಸ ಬೇಕು.... ಕೆಲಸ ಬೇಕು
ಎಂದು 'ಸರ್ಕಾರಿ'ದೇವರುಗಳಿಗೆ ಕೋಟಿ ಕೊಡುಗೆಗಳ ವಿಶೇಷ!
 ಲಂಚ ಲಂಚ ... ಲಂಚ!

Monday, May 2, 2011

'ಕಾಪ' ಪಂಚಾಯಿತಿ!


ಸುನೀತಾ(21) ಮತ್ತು 'ಜಸ್ಸಾ' ಉರ್ಫ್ ಜಸ್ಬೀರ್ ಸಿಂಗ(22) ಒಬ್ಬರನ್ನೊಬ್ಬರು ಪ್ರೀತಿಸಿ.. ’ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು’ ಅಂದು ಕೊಂಡು ಮನೆಯವರ ಮತ್ತು ಊರಿನವರ ವಿರೋಧದ ನಡುವೆ ಮದುವೆಯಾಗಿದ್ದರು! ತಮ್ಮ ಪುಟ್ಟ ಸಂಸಾರ, ಪುಟ್ಟ ಮನೆ ಮತ್ತೆ ತಮಗೆ ಒಂದು ಪುಟ್ಟ ಮಗುವಿನ ಬರುವಿಗೆ ಕಾಯ್ತಾ ಹಾಯಾಗಿದ್ದರು ಅಂದರೆ ಸುನೀತಾ ೫ ತಿಂಗಳ ಗರ್ಬಿಣಿ!.
ಹೀಗೆ ಎಲ್ಲವೂ ಚೆನ್ನಾಗಿರುವಾಗ ಒಂದು ದಿನ ಮುಂಜಾನೆ ಸುನಿತಾಳ ತಂದೆಯ ಮನೆ ಮುಂದೆ ಅತೀ ಕ್ರೂರತನಕ್ಕೆ ಸಾಕ್ಷಿಯಾಗಿ ಎರಡು ದೇಹಗಳು ಬಿದ್ದಿದ್ದವು! ಅಬ್ಬಾ ಎಂತಹ ರಾಕ್ಷಸರು ಅಂತೀರಾ ಗರ್ಬಿಣಿಯ ಹೊಟ್ಟೆಗೆ ಒದ್ದಿದ್ದರು, ಮುಖಕ್ಕೆ ಗುದ್ದಿದ್ದರು ಮತ್ತು ಎರಡು ದೇಹಗಳಿಗೆ ಇರಿದಿದ್ದರು!

ಇತ್ತೀಚಿಗ ನಮ್ಮ ಸರ್ವೋಚ್ಚ ನ್ಯಾಯಾಲಯ 'ಕಾಪ' ಪಂಚಾಯಿತಿಗಳನ್ನ ಬೇರು ಸಮೇತ ಕಿತ್ತುಹಾಕಿ ಅಂತಾ ಅತೀ ಕಠಿಣವಾದ ಎಚ್ಚರಿಕೆಯನ್ನ ಎಲ್ಲ District Magistrate ಮತ್ತು SP ಗಳಿಗೆ ಕೊಟ್ಟಿದೆ! ಅದಾಗ್ಯೂ ಇ 'ಕಾಪ' ಪಂಚಾಯತಿಗಳು ನಮ್ಮ ಸರ್ವೋಚ್ಚ ನ್ಯಾಯಾಲಯವೆ ತಪ್ಪು ಅನ್ನೋತರಹದಲ್ಲಿ ಹೇಳಿಕೆಗಳನ್ನು ನೀಡುತ್ತ ಇದ್ದಾವೆ. ಹಾಗಿದ್ದರೆ ಏನಿದು ಇ 'ಕಾಪ' ಪಂಚಾಯತಿಗಳ ಪಂಚಾಯಿತಿ?

ಉತ್ತರ ಭಾರತದ ರಾಜ್ಯಗಳಾದ ಹರ್ಯಾಣಾ, ಉತ್ತರ ಪ್ರದೇಶ, ರಾಜಸ್ತಾನ ಮುಂತಾದ ರಾಜ್ಯಗಳಲ್ಲಿ ಕಂಡು ಬರುವ 'ಕಾಪ್' ಪಂಚಾಯಿತಿಗಳು ಮೇಲ್ನೋಟಕ್ಕೆ ನಮ್ಮ ಹಿಂದಿನ ಕಾಲದಲ್ಲಿದ್ದ ಪಂಚಾಯತಿ ಕಟ್ಟೆಗಳ ತರಃ ಕೆಲಸ ಮಾಡುತ್ತವೆ. ಸುಮಾರು ೧೪ನೇ ಶತಮಾನದಿಂದ ನಡೆಯುತ್ತಾ ಬಂದಿರುವ 'ಕಾಪ' ಪಂಚಾಯತಿಗಳು ಜಾತಿ, ಗೋತ್ರ ಮತ್ತು ಸ್ಥಳಗಳಿಂದ ಒಗ್ಗೂಡಿದಂತ ಹಳ್ಳಿಗಳಲ್ಲಿ ಪ್ರಚಲಿತದಲ್ಲಿವೆ. ಹಿಂದಿನ ಕಾಲದಲ್ಲಿ ಮೇಲಾಗಿ ಉನ್ನತ ಜಾತಿಯವರು ತಮ್ಮ ಅಧಿಕಾರ ಮತ್ತು ಶಕ್ತಿಯ ಉಳಿವಿಗಾಗಿ ಇ ಪಂಚಾಯತಿಗಳನ್ನ ನಿರ್ಮಿಸಿದರು.
ಒಂದೇ ಗೊತ್ರಗಳನ್ನು ಹೊಂದಿರುವ ಹಳ್ಳಿಗಳ 'ಕಾಪ' ಪಂಚಾಯತಿಗಳ ಪ್ರಕಾರ ಆ ಹಳ್ಳಿಗಳಲ್ಲಿ ಇರುವ ಎಲ್ಲರೂ ಅಣ್ಣತಮ್ಮಂದಿರು ಮತ್ತು ಅಕ್ಕತಂಗಿಯರು. ಇಂತ ಪಂಚಾಯತಿಗಳ ಅಡಿಯೇಲ್ಲಿ ಬರುವ ಎಲ್ಲ ಹಳ್ಳಿಗಳಲ್ಲಿ Love marriage ಗಳು ನಿಶಿದ್ದ! ಇ ಪಂಚಾಯತಿಗಳ ಒಳಗೆ ಬರುವ ಬೇರೆ ಬೇರೆ ಹಳ್ಳಿಗಳ ನಡುವೆಯೂ ಮದುವೆ ನಿಶಿದ್ದ! ಇದನ್ನೆನಾದರು ಮೀರಿ ಯಾರಾದರು ನಡೆದುಕೊಂಡರೆ ಅವರಿಗೆ ಮೃತ್ಯುವೇ ಗತಿ!
ಇ 'ಕಾಪ' ಪಂಚಾಯತಿಗಳು ತಪ್ಪು ಮಾಡಿದವರಿಗೆ ಕೊಡುವ ಶಿಕ್ಷೆಗಳು ಅತೀಯಾದ ದಂಡ, ಸಮಾಜದಿಂದ ಬಹಿಷ್ಕಾರ ಮತ್ತು ಹೆಚ್ಚಾಗಿ ಕೊಲೆಗಳಿಂದ ಅಥವಾ ಆತ್ಮಹತ್ತೆ ಮಾಡಿಕೊಳ್ಳುವ ಹಾಗೆ ಒತ್ತಡದಿಂದ ಕೊನೆಗೊಳ್ಳುತ್ತವೆ.

ಸುನೀತಾ ಮತ್ತು ’ಜಸ್ಸಾ’ಗೂ ಆಗಿದ್ದು ಇದೆ! ಇಬ್ಬರನ್ನು ರಾತ್ರಿ ಮನೆಯಿಂದ ಹೊರಗೆಳೆದುಕೊಂಡು ಹೋಗಿ ಮುಂಜಾನೆ ಅವರ ದೇಹಗಳನ್ನು ಸುನಿತಾಳ ಮನೆಯ ಮುಂದೆ ಎಸೆದು ಹೋಗಿದ್ದರು ಯಾಕೆಂದರೆ ಅದೂ ಇಡೀ ಊರಿಗೆ ಗೊತ್ತಾಗಬೇಕು ಮತ್ತು ಉಳಿದವರಿಗೆ ಎಚ್ಚರಿಕೆ ಯಾಗಬೇಕು! ಅವರಿಬ್ಬರೂ ಮಾಡಿದ ತಪ್ಪು ಏನೆಂದರೆ ಒಂದೇ ಊರಿನವರಾಗಿ ಪ್ರೀತಿಸಿ ಮದುವೆಯಾಗಿದ್ದು!
ಇದು ನಡೆದದ್ದು ೨೦೦೮ ಮೇ ೯ ರಂದು ಹರ್ಯಾಣಾ ರಾಜ್ಯದ ಬಲ್ಲಾ ಎಂಬ ಹಳ್ಳಿಯೆಲ್ಲಿ! ವಿಚಿತ್ರ ಎಂದರೆ ಇ ಗಟನೆಗೆ ಇಡೀ ಹಳ್ಳಿಯೇ ಹೆಮ್ಮೆಯಿಂದ Support ಆಗೀ ನಿಂತಿತ್ತು... ಆದರೆ ಕೊಲೆಗಡುಕರ ಪರವಾಗಿ! ಇದೇ ಕಾಪ ಪಂಚಾಯತಿಗಳ ವಿಶೇಷ! ಇದೇ Honour Killing!
ಇ ಕಾಪ ಪಂಚಾಯತಿಗಳು ಇಂದಿಗೂ ಇಷ್ಟು ಬಲಿಷ್ಠವಾಗಿ ಬೆಳೆದಿವೆ ಅಂದರೆ ಇದಕ್ಕೆ ಮುಖ್ಯ ಕಾರಣ ನಮ್ಮ ದುರ್ಬಲ ಪಂಚಾಯತ್ ರಾಜ್ ವ್ಯವಸ್ತೆ ಅಂದರೆ ತಪ್ಪಾಗಲಾರದು. ಜನರು ಕಾಪ ಪಂಚಯತಿಗಳಲ್ಲಿ ವಿಶ್ವಾಸವೆಕೆ ಇಟ್ಟಿದ್ದಾರೆ ಅಂತ ಅದರ ಹಿಂದೆ ಹೋದರೆ
೧) ಇಲ್ಲಿ ಯಾವುದೇ ವ್ಯಾಜ್ಯಗಳನ್ನ ಪ್ರಮುಕರಾದ ೧೦ ರಿಂದ ೧೫ ಜನರು ಕುಳಿತಲ್ಲಿಯೇ ಒಂದೇ ದಿನದಲ್ಲಿ ಬಗೆ ಹರಿಸುತ್ತಾರೆ ... ಅದನ್ನ ನಮ್ಮ ಕೊರ್ಟಗಳಿಗೆ ಒಯ್ಯದರೆ ಕನಿಷ್ಠ ೪ ರಿಂದ ೫ ವರ್ಷ! ಅಥವಾ ಇನ್ನೂ ಹೆಚ್ಚು!
೨) ಕೊರ್ಟಗಳಿಗೆ ತಮ್ಮ ಕೆಲಸಗಳನ್ನ ಬಿಟ್ಟು ಅಲೆಯುದು ಮತ್ತು ಪೋಲಿಸರಿಂದ ಕಿರುಕಳ ಅನುಭವಿಸುವುದು ಇರುವುದಿಲ್ಲ.
ಆದರೆ ಇ ಕೆಲುವೊಂದು ಉಪಯೋಗಗಳನ್ನು ಬಿಟ್ಟರೆ ಇದೊಂದು ಅತೀ ಕ್ರೂರ ವ್ಯವಸ್ತೆಯೇ ಸರಿ ಇಲ್ಲಿ ಮಹಿಳೆಯರಿಗೆ ಯಾವುದೇ ಅಧಿಕಾರ ಇಲ್ಲಾ, ಕೆಲೋವೊಮ್ಮೆ ಗಂಡು ಮಕ್ಕಳಿಗೆ ಶಿಕ್ಷೆಯಿಂದ ವಿನಾಯತಿ ಸಿಗುತ್ತೆ ಆದರೆ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಸಿಗುವುದಿಲ್ಲ, ಇ ಪಂಚಾಯತಿಗಳ ವಿರುದ್ದ ಯಾರಾದರು ಮಕ್ಕಳಿಗೆ Support ಮಾಡಿದರೆ ಇಡೀ ಮನೆತನವನ್ನು ಬಹಿಸ್ಕಾರ ಮಾಡಲಾಗುತ್ತೆ ! ಲಕ್ಷಾಂತರ ರೂಪಾಯಿಗಳ ದಂಡವನ್ನು ವಿದಿಸಲಾಗುತ್ತೆ.

ದುರ್ದೈವದ ಸಂಗತಿ ಎಂದರೆ ಕಾಪ ಪಂಚಾಯತಿಗಳ ಅಡಿಯೇಲ್ಲಿ ಬರುವ ಎಲ್ಲ ಹಳ್ಳಿಗಳು ಇವುಗಳ ಮೇಲೆ ಪ್ರಶ್ನಾತೀತ ವಿಶ್ವಾಸವನ್ನು ಇಟ್ಟಿರುವುದು! ಮತ್ತು ಇವುಗಳಲ್ಲಿ ಮಹಿಳೆಯರಿಗೆ ಯಾವುದೇ ಹಕ್ಕುಗಳಿರದೆ ಇರುವುದು. ಇವಗಳನ್ನು ಹತ್ತಿಕ್ಕಲು ಯಾವುದೇ ರಾಜಕೀಯ ನಾಯಕರಾಗಲಿ, ಪಕ್ಷಗಳಾಗಲಿ ಪ್ರಯತ್ನಿಸುತ್ತಿಲ್ಲಾ ಏಕೆಂದರೆ ವೋಟು ಬ್ಯಾಂಕ್! ಮತ್ತು ಕಾಪ ಪಂಚಾಯತಿಗಳ ಒಗ್ಗಟ್ಟು!

ಇನ್ನೂ ನಮ್ಮ ಸಮಾಜದಲ್ಲಿ ಇಂತಹ ವ್ಯವಸ್ತೆಗಳು ಇರುವುದು ಒಂದು ಕಳಂಕ. ಕಾಪ್ ಪಂಚಾಯತಿಗಳ ಕ್ರೂರ ವರ್ತನೆಗಳು, ಕೆಲೋವೊಮ್ಮೆ ನಗೆಪಾಟಲಿಗೆ ಇಡಾಗುವ ಫ್ಹತ್ವಾಗಳು, ಇನ್ನು ಕೆಲವು ಪ್ರಚಲಿತವಿರುವ parallel ನ್ಯಾಯಸ್ತಾನಗಳು ಇವುಗಳೆಲ್ಲವನ್ನು ಒಂದೇ ವ್ಯವಸ್ತೆಯ ಅಡಿಯಲ್ಲಿ ತರುವುದು ಈಗಿನ ಅವಶ್ಯಕತೆಯಾಗಿದೆ. ಎನಂತಿರಿ?

Thursday, April 21, 2011

ಫೇಲ ಆದರೆ ಊರು... ಪಾಸ್ ಆದರೆ ಊರಿಂದ ದೂರು!!!

ಮೊದಲ ಬಾರಿಗೆ ಮನೆಯಿಂದ ಧೀರ್ಘಕಾಲ ದೂರವಾಗಿ ಮೈ ಮನಸ್ಸೆಲ್ಲಾ ಊರು ಊರು ಅಂತಾ ಇದೆ ! ಅಂತಹದರ ನಡುವೆ ಇ ಸಂದರ್ಶನ!
ನನ್ನ ಕಾಲೇಜು ಜೀವನದಲ್ಲಿ ವಾರಕ್ಕೆ ಎರಡು ಬಾರಿ ಮನೆಗೆ ಓಡಿ ಹೋಗುತ್ತಾ ಇದ್ದ ನಾನು ಎಲ್ಲರಿಂದಲೂ ಹೋಂ ಸಿಕ್ ಅನ್ನಿಸಿಕೊಳ್ಳುತ್ತಾ ಇದ್ದೆ. ಆದರೂ ಯಾರು ಏನೆ ಅಂದರು ನಾನು ಮನೆಗೆ ಹೋಗಿ ಅಮ್ಮನ ಮುಖ ನೋಡುವವರೆಗೂ, ತಂದೆ ಅಕ್ಕ ತಮ್ಮಂದಿರ ಜೊತೆ ಮಾತನಾಡದೆ ಸಮಾಧಾನ ಇರ್ತಿರಲಿಲ್ಲ ಮತ್ತು ಚಡ್ಡಿ :) ಗೆಳೆಯರ ಜೊತೆ ಕಾಲಕಳೆಯದೆ ಆಗುತ್ತಿರಲಿಲ್ಲ. ಮುಂದೆ ಕಾಲಕ್ರಮೇಣ ನನ್ನ ಕಾಲೇಜು ಜೀವನ ಮುಂದುವರೆದಂತೆ ಸ್ವಲ್ಪ ಮನೆಯಿಂದ ದೂರ ಇದ್ದು ಬದುಕಲು ಕಲಿತೆ ಆದರೂ ಕನಿಷ್ಠ ೧೫ ದಿನಗಳಿಂದ ಒಂದು ತಿಂಗಳಲ್ಲಿ ಒಮ್ಮೆ ಯಾದರು ಮನೆಗೆ ಹೋಗಲೇಬೇಕು! ಇದು ನನ್ನ ಮನಸ್ಸು!


ಆದರೆ ಒಮ್ಮೆಲೇ ನಾನು ಹೊರದೇಶಕ್ಕೆ ಹೋಗಬೇಕಾದ ಅನಿವಾರ್ಯತೆಯಿಂದಲೋ ಅಥವಾ ಒಮ್ಮೆ ಯಾದರು ಹೊರದೇಶಕ್ಕೆ ಹೋಗಬೇಕೆನ್ನುವ ಅಪೇಕ್ಷೆಯಿಂದಲೋ ಅಂತಹ ಪರಿಸ್ತಿತಿ ಬಂದಿತು. ನಾನು ದ್ವಂದ್ವ ನಿಲುವಿನಲ್ಲಿ ಎಷ್ಟು ದಿನಗಳವರೆಗೆ ಅಂತ ನನ್ನ ಮ್ಯಾನೇಜರ್ ಗೆ ಕೇಳಿ ಕೇವಲ ೩ ತಿಂಗಳು ಹೇಗಾದರೂ ಮಾಡಿ ಕಳೆಯಬಹುದು ಅನ್ನೋ ಯೋಚನೆಯಿಂದ ಒಪ್ಪಿಕೊಂಡು ಬಿಟ್ಟೆ. ಹೀಗೆ ನಾನು ಸ್ವೀಡನ್ ತಲುಪಿದೆ. ಇಲ್ಲಿಗೆ ಬಂದು ಮೊದಲ ಒಂದು ವಾರದವರೆಗೆ ಏನೋ ಹೊಸ ಸ್ತಳ, ಹೊಸ ಜನರು, ಹೊಸ ವಾತಾವರಣ ಅಂಥಾ ದೂಡಿದೆ ಅಲ್ಲಿಂದ ಮುಂದೆ ಪ್ರಾರಂಭವಾಯಿತು ನೋಡಿ ಮರಳಿ ಸ್ವದೇಶಕ್ಕೆ ಹೋಗುವ ದಿನಗಳ ಗಣನೆ [ಅದ್ಹೇನೋ ಹೇಳಲಿಕ್ಕೆ ಆಗದಿರುವಂತ ಒಂದು ಭಾವನೆ !]... ಅಂತು ಇಂತೂ ಕೆಲವು ಫೆಸಬುಕ್ ಗೆಳೆಯರ ಸಲಹೆಗಳಿಂದ ಮೊದಲು ಮೊದಲು ಹೀಗೆ ಆಗುತ್ತೆ ಚಿಂತೆ ಮಾಡಬೇಡ ಕೇವಲ ೩ ತಿಂಗಳು ತಾನೇ ಅನ್ನೋ ಮಾತುಗಳಿಂದ ಹೇಗೋ ದಿನಗಳನ್ನ ದೂಡುತ್ತಾ ಇದ್ದೆ.. ಆವಾಗಲೇ ಇಲ್ಲಿನ ಮ್ಯಾನೇಜರ್ ನನಗೆ ಒಂದು ಶಾಕ್ ಕೊಡುವ ಸುದ್ದಿಯೊಂದಿಗೆ ಬಂದಾ! ಅದೇನೆಂದರೆ ' your stay has been extended for 3 more months' ಅಂತ! ಇದನ್ನ ಕೇಳಿ ನನಗೆ ಇನ್ನೂ ಚಿಂತೆ ಅನ್ನಬೇಕೋ, ದುಃಖ ಅನ್ನಬೇಕೋ ಇಲ್ಲ ಊರಿನ ಸೆಳೆತ ಅನ್ನಬೇಕೋ ಒಟ್ಟಿನಲ್ಲಿ ನನ್ನ ಮನಸ್ಸು ಸದಾ ಗೊಂದಲಗಳ ಗೂಡಾಗಿಬಿಟ್ಟಿತು. ಯಾವಾಗಲು ಒಂದು ತರಹದ ವಿಚಿತ್ರ ಭಾವನೆಗಳಿಂದ ಕೊರಗುತ್ತಾ ಇದ್ದೀನಿ ಅನ್ನಿಸತೊಡಗಿತು! ಇನ್ನೂ ಹೀಗೆ ಮುಂದುವರೆದರೆ ಒಳ್ಳೆಯದಲ್ಲ ಅಂತ ತಿಳಿದು ಒಂದು ದಿನ ಧೈರ್ಯವಾಗಿ ಇಲ್ಲಿನ ಮ್ಯಾನೇಜರ್ ಗೆ ನನಗೆ ಇಲ್ಲಿ ಮುಂದುವರೆಯುವುದು ಕಷ್ಟ ಆಗುತ್ತಾ ಇದೆ ನಾನು ಮರಳಿ ನನ್ನ ದೇಶಕ್ಕೆ ಹೋಗುತ್ತೇನೆ ಅಂತ ತಿಳಿಸಿದೆ! ಅದಕ್ಕೆ ಆ ಆಸಾಮಿ ಒಪ್ಪಿಗೆಯೇನ್ನೂ ಕೊಡದೆ ಒಪ್ಪಿಗೆಯಿಲ್ಲ ಅಂತಾನು ಹೇಳದೆ ನೋಡೋಣ ಅಂತ ಅರ್ಧ ಗೋಡೆಯ ಮೇಲೆ ದೀಪವನ್ನು ಇಟ್ಟಂತೆ ಹೇಳಿದ!

ಸ್ವಲ್ಪ ದಿನಗಳ ನಂತರ ಒಂದು ವಿಚಿತ್ರ ಸನ್ನಿವೇಶ ಎದುರಾಯಿತು ! ನನ್ನ ಇಲ್ಲಿನ ಮ್ಯಾನೇಜರ್ ಬಂದು ಮುಂದಿನ ವಾರ ಒಂದು ಕ್ಲೈಂಟ್ ಸಂದರ್ಶನ ಇದೆ ಅದರಲ್ಲಿ ನೀನು ಸೆಲೆಕ್ಟ್ ಆದರೆ ಇನ್ನೂ ೩ ತಿಂಗಳು ಇಲ್ಲೇ ಇರಬೇಕಾಗುತ್ತೆ ಅಲ್ರೆಡಿ ನಿನ್ನ ಸಿವಿ ಸೆಲೆಕ್ಟ್ ಆಗಿದೆ ಅಂತ ಹೇಳಿದಾ... ಈಗೇನು ಮಾಡೋದು ಸಂದರ್ಶನದಲ್ಲಿ ಪಾಸ್ ಆದರೆ ಇಸ್ಟಾ ಇಲ್ಲದೆ ಇಲ್ಲೇ ಇರಬೇಕಾಗುತ್ತೆ ಫೆಲ ಆದರೆ ಮನೆಗಾದರೂ ಹೋಗಬಹುದು! ಜೀವನದಲ್ಲಿ ಇಲ್ಲಿವರೆಗೆ ಸಂದರ್ಶನಗಳಲ್ಲಿ ಪಾಸ್ ಅಗೊದು ಹೇಗೆ ಅಂತ ವಿಚಾರ ಮಾಡುತ್ತ ಇದ್ದರೆ ಇವಾಗ ಫೇಲ್ ಹೇಗೆ ಆಗಬೇಕು ಅನ್ನೋದೇ ಒಂದು ದೊಡ್ಡ ಸಮಸ್ಸೆಯಾಯಿತು! ಅದ್ಹೇಗೆ.. ಸರಿಯಾಗಿ ಉತ್ತರಗಳನ್ನ ನೀಡದೆ ಇದ್ದರಾಯಿತು ಅಂತಿರಾ ? ಅಲ್ಲಿ ಒಂದು ಸಮಸ್ಸೆ ಇದೆ ಅದೇನಂದರೆ ಸಂದರ್ಶನದ ವೇಳೆ ನನ್ನ ಜೊತೆ ಮ್ಯಾನೇಜರ್ ನಾನು ಬರುತ್ತೇನೆ ಅಂತ ಹೇಳಿ ಹೋಗಿದ್ದಾ...!

Thursday, April 14, 2011

'ವಾಸಾ' ಎಂಬ ಯುದ್ಧ ನೌಕೆ ! ಮತ್ತು ವಿಧಿಯ ಆಯ್ಕೆ!

೧೬ನೇ ಶತಮಾನದ ಸ್ವೀಡನ್ ದೇಶದ ರಾಜ ಕಿಂಗ್ ಗುಸ್ತಾವ್ II ಅಡಾಲ್ಫ್ ಗೆ ತನ್ನ ನೌಕಾದಳದ ಶಕ್ತಿಯನ್ನು ಹೆಚ್ಚಿಸಬೇಕು ಅನ್ನೋ ಇಚ್ಛೆ ಇಂದ ಹಡಗು ನಿರ್ಮಿಸುವುದರಲ್ಲಿ ಪ್ರಖ್ಯಾತಿ ಹೊಂದಿದ್ದ ಡಚ್ ದೇಶದ ಹೆನ್ರಿಕ್ ಹೈಬರ್ಟ್ ಸನ್ ಜೊತೆ ನಾಲ್ಕು ಯುದ್ದನೌಕೆಗಳನ್ನು ನಿರ್ಮಿಸುವ ಒಪ್ಪಂದ ಮಾಡಿಕೊಂಡ. ೧೬೨೬ ರಲ್ಲಿ ನಾಲ್ಕರಲ್ಲಿ ಮೊದಲನೆಯದಾಗಿ ವಾಸಾ ಎಂಬ ನೌಕೆಯನ್ನು ನಿರ್ಮಿಸಲು ಪ್ರಾರಂಭಿಸಿದ ತಂಡ ಅದನ್ನು ಆಗಿನ ಕಾಲದ ಅತೀ ದೊಡ್ಡ ನೌಕೆಯೇನ್ನಾಗಿ ನಿರ್ಮಿಸಬೇಕೆಂದು ಪನತೋಟ್ಟಿತು! ಅದಕ್ಕಾಗಿ ಸುಮಾರು ೩೦೦ ಜನರ ತಂಡ ತನ್ನ ಕೆಲಸವನ್ನ ಆರಂಬಿಸಿತ್ತು.

ಅವತ್ತಿನ ರಾತ್ರಿ ೧೨ ಗಂಟೆಯಾದರು ನಿದ್ರೆ ಬರ್ತಾ ಇಲ್ಲಾ ಸುಮಾರು ೨ ಗಂಟೆಗಳಿಂದ ಬೆಡ್ ಮೇಲೆ ಆಕಡೆಯಿಂದ ಇಕಡೆ.. ಇಕಡೆ ಇಂದ ಆಕಡೆ ಉರುಳಾಡುತ್ತಾ ಇದ್ದೀನಿ! ನಿದ್ರೆಯ ಸುಳಿವೇ ಇಲ್ಲ. ನಾಳೆ ಏನಾದರೂ ಅತೀವ ಸಂತೋಷ ಉಂಟು ಮಾಡುವ ಅಥವಾ ಹೊಸದಾದ ಏನಾದ್ರು ಕೆಲಸ ಮಾಡ್ತಾ ಇದ್ದರೆ ಅಥವಾ ಏನಾದ್ರು ಎಕ್ಸೈಟಿಂಗ್ ವಿಷಯ ಇದ್ದರೆ ಯಾವಾಗಲು ಆಗುವ ಹಾಗೆ ಇವತ್ತಿನ ನಿದ್ರೆಯೂ ಆಹುತಿ ಯಾಗಿತ್ತು. ಇಷ್ಟಕ್ಕೂ ನಾಳೆಯ ಅಂತಹ ಎಕ್ಸೈಟಿಂಗ್ ವಿಷಯ ಏನೆಂದರೆ ನಾನು ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಯುದ್ದ ನೌಕೆಯನ್ನು ನೋಡಲಿಕ್ಕೆ ಹೋಗುವುದಾಗಿತ್ತು! ಅದೂ ಏನಂದರೆ  'ವಾಸಾ' ಎಂಬ ಬಹು ಚರ್ಚಿತ, ಬಹು ದೊಡ್ಡ, ಅತ್ಯದ್ಬುತ ನೌಕೆ!. ಆದರೆ ಅದು ವಿಧಿಯ ಆಟದಿಂದಾಗಿ ಇತಿಹಾಸ ನಿರ್ಮಿಸಿತ್ತು! ಇದು ಸ್ವೀಡನ್ ದೇಶದ ರಾಜಧಾನಿ ಸ್ಟಾಕ್ ಹೋಂ ನ ಒಂದು ಪ್ರಮುಖ ಆಕರ್ಷಣೆ!.
ನಸುಕಿನ ನನ್ನ ಅಲಾರಮ್ ನ ಶಬ್ಧ ನನ್ನನ್ನ ನಿದ್ರೆಯಿಂದ ಹೊರಗೆ ಎಳೆದಾಗ ಕಣ್ಣು ಇನ್ನು ಕೆಂಪಗೆ ಇತ್ತು ಕಾರಣ ಹಿಂದಿನ ರಾತ್ರಿಯ ಅರೆ ಬರೆ ನಿದ್ರೆ. ಹಾಗೆಯ ಖುಷಿಯಿಂದ ಎದ್ದು ಬೇಗ ಬೇಗನೆ ರೆಡಿ ಆಗಿ ಗೆಳಯ ತುಷಾರನ ಮನೆಗೆ ಓಡಿ ಹೋಗಿ ಅಲ್ಲಿಂದ ಸುರಂಗ ಮಾರ್ಗದ ರೈಲು ನಿಲ್ಧಾನಕ್ಕೆ ತೆರಳಿದೆವು ಮುಂದೆ 'ಪ್ರಾಣಿಗಳ ಗಾರ್ಡನ್' [’Djurgården’] ಅನ್ನೋ ಒಂದು ಪ್ರದೇಶದಲ್ಲಿರುವ ವಾಸಾ ಮ್ಯೂಸಿಯಂ ತಲುಪಿದೆವು.

ಇ ಒಂದು ನೌಕೆಯನ್ನು ನಿರ್ಮಿಸಲು ಸುಮಾರು ೧೦೦೦ ಕ್ಕೂ ಹೆಚ್ಚಿನ ಒಕ್ ಮರಗಳನ್ನು ಬಳಸಲಾಯಿತು! ೬೪ ತೋಪುಗಳನ್ನ ಅಳವಡಿಸಲಾಗಿತ್ತು. ಬಡಿಗತನದವರು, ಕಂಬಾರರು, ಕರಕುಶಲಕರ್ಮಿಗಳು, ಬಣ್ಣ ಬಳೆಯುವವರು ಹೀಗೆ ಎಲ್ಲತರಹದ ಜನರು ಸ್ವೀಡನ್, ಫಿನ್ಲ್ಯಾಂಡ್ ಮತ್ತು ಹಾಲೆಂಡಿನಿಂದ ಬಂದಿದ್ದರು. ಕಿಂಗ್ ಗುಸ್ತಾವ್ ಆಗಾಗ ಕೆಲಸ ನಡೆಯುವ ಸ್ತಳಕ್ಕೆ ಬೆಟ್ಟಿ ಕೊಟ್ಟು ಮೇಲ್ವಿಚಾರಣೆ ಮಾಡುತ್ತಿದ್ದನು. ತೋಪುಗಳನ್ನು ತಯಾರಿಕೆಗೆ ಬೇಕಾದ ಕಬ್ಬಿಣ ಮತ್ತು ತಾಮ್ರವನ್ನು ಸ್ವೀಡನ್ನಿನ ಬೇರೆ ಸ್ತಳಗಲ್ಲಿ ತಯಾರಿಸಿ ತರಲಾಯಿತು ಮತ್ತು ಈಜು ಉಡುಗೆಗಳನ್ನ, ಬಣ್ಣಗಳನ್ನ ಹೊರದೇಶಗಳಿಂದ ತರಲಾಯಿತು.
೧೬೨೭ ರ ಒಂದು ದಿನ ಇ ನೌಕೆಯ ನಿರ್ಮಾಣದ ಮುಖ್ಯ ಪಾತ್ರದಾರಿ ಹೆನ್ರಿಕ್ ಅನಾರೋಗ್ಯದಿಂದಾಗಿ ನಿಧನ ಹೊಂದಿದ! ಅವಾಗಲೇ ವಿಧಿಯ ಆಟ ಪ್ರಾರಂಭವಾಗಿತ್ತು ಅನಿಸುತ್ತೆ !. ಹೆನ್ರಿಕ್ ಮರಣಾ ನಂತರ ಹೆನ ಜಾಕೊಬ್ಸ್ ಅವನ ಕೆಲಸವನ್ನು ಮುಂದುವರಿಸಿದ... ೧೬೨೮ ರ ಅಗಸ್ಟ ನಲ್ಲಿ ನೌಕೆಯಾ ನಿರ್ಮಾಣ ಮುಗಿದಿತ್ತು! ನೌಕೆಯ ಒಳಗೆ ನಾಲ್ಕು ಅಂತಸ್ತುಗಳಿದ್ದವು ಸುತ್ತಲೂ ೬೪ ತೋಪುಗಳನ್ನ ಅಳವಡಿಸಿರುವ ಗನ್ ಪಾಯಿಂಟ್ ಗಳನ್ನ ಮಾಡಲಾಗಿತ್ತು. ನೌಕೆಯ ಹಿಂದೆ ಸುಂದರವಾದ ಕಲಾಕೃತಿಗಳನ್ನ ಕೆತ್ತಲಾಗಿತ್ತು. ನೌಕೆಯ ಕೆಳ ಅಂತಸ್ತಿನಲ್ಲಿ ಅಡುಗೆಯ ಮನೆಯನ್ನು ನಿರ್ಮಿಸಲಾಗಿತ್ತು, ಮೊದಲ ಮತ್ತು ಎರಡನೆಯ ಅಂತಸ್ತಿನಲ್ಲಿ ಮದ್ದುಗುಂಡುಗಳನ್ನು ತುಂಬಿಸಲು ವ್ಯವಸ್ತೆ ಮಾಡಲಾಗಿತ್ತು. ನೌಕೆಯ ಒಳಗೆ ಸರಿಸುಮಾರು ೪೫೦ ಜನರು ಇರಬಹುದಾಗಿತ್ತು! ಅದರಲ್ಲಿ ಅಧಿಕಾರಿಗಳು, ಸುಮಾರು ೩೦೦ ಜನ ಸೈನಿಕರು, ಅಡುಗೆ ಭಟ್ಟರು, ಹೆಂಗಸರು, ಸಹಾಯಕರು ಹೀಗೆ ಎಲ್ಲ ತರಹದ ಜನರನ್ನು ಹೊಂದುವ ವ್ಯವಸ್ತೆ ಮಾಡಲಾಗಿತ್ತು ಮತ್ತು ಅದರಲ್ಲಿ ಎಸ್ಟೊಂದು ಜನ ಸಂದಿಗೊಂದಿಗಳಲ್ಲಿ ತಮ್ಮ ಜೀವನ ಸಗಿಸಬೇಕಾಗುತಿತ್ತು ಏಕೆಂದರೆ ಕೇವಲ ಅಧಿಕಾರಿಗಳಿಗೆ ಒಳ್ಳೆ ಸ್ತಳಾವಕಾಶ ಇರುವ ಕೋಣೆಗಳನ್ನ ರಚಿಸಲಾಗಿತ್ತು. ಆಗಿನ ಕಾಲದಲ್ಲಿ ಇದು ಅತೀ ದೊಡ್ಡ ಮತ್ತು ಶಕ್ತಿಶಾಲಿ ಯುದ್ದನೌಕೆ ಯಾಗಿತ್ತು ಏಕೆಂದರೆ ಒಂದೇ ಮಗ್ಗುಲಿನಿಂದ ಸುಮಾರು ೩೦೦ಕೆಜಿ ತೂಕದ ಗುಂಡನ್ನು ಹಾರಿಸಬಹುದಾಗಿತ್ತು!...ಆದರೆ .... !!??!!

             ಹಲವು ಕಷ್ಟಗಳನ್ನ ಅನುಭವಿಸಿ ಕೊನೆಗೆ ಅದ್ಭುತವಾದ ವಾಸಾ ನೌಕೆಯು ಸೇವೆಗೆ ಸಿದ್ದವಾಗಿತ್ತು ಮತ್ತು ೧೬೨೮ ರ ಅಗಸ್ಟ್ ೧೦ ರಂದು ಮಡಿಲಲ್ಲಿ ಸುಮಾರು ೪೫೦ ಜನರನ್ನ ತುಂಬಿಕೊಂಡು ಯುದ್ದಕ್ಕೆ ತಯ್ಯಾರಾದ ಸೈನಿಕನಂತೆ ಮದ್ದು ಗುಂಡುಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ರಾಜ ಗುಸ್ತಾವ್ ನ ರಾಯಲ್ ಪ್ಯಾಲೇಸ ಮುಂದೆ ಸಮುದ್ರದಲ್ಲಿ ದುಮುಕಲು ನಿಂತಿತ್ತು. ಇದರ ಬಿಳ್ಕೊಡುಗೆಗಾಗಿ ಸಾವಿರಾರು ಜನರು ಸೇರಿದ್ದರು ರಾಜ ಗುಸ್ತಾವ್ ಅತೀ ಸಂತೋಷದಿಂದ ವಾಸಾ ಮುನ್ನಡೆಯಲು ಹಸಿರು ನಿಶಾನೆ ತೋರಿಸಿದ. ಆದರೆ ವಿಧಿಯ ಆಟವೇ ಬೇರೆಯಾಗಿತ್ತು ! ವಾಸಾ ತನ್ನ ಮೊಟ್ಟಮೊದಲ ಪ್ರಯಾಣದಲ್ಲೇ ಕೇವಲ ೧೩೦೦ ಮೀಟರಗಳಷ್ಟು ಮುಂದೆ ಹೋಗಿ ಸಮುದ್ರದಲ್ಲಿ ಮುಳುಗಿ ಹೋಗಿತ್ತು !!! ಸುಮಾರು ೫೦ ಜನರು ತಮ್ಮ ಪ್ರಾಣ ಕಳೆದುಕೊಂಡರು ಎಸ್ಟೋ ಜನ ಕಾಣೆಯಾದರು.

           
                       
                      ಇ ಘಟನೆ ನಡೆದು ಸುಮಾರು ೩೩೩ ವರ್ಷಗಳ ನಂತರ ಅಂದರೆ ೧೯೬೧ರಲ್ಲಿ ಸ್ವೀಡನ್ ಸರಕಾರ ಆ ಮುಳುಗಿದ ನತದೃಷ್ಟ ನೌಕೆಯನ್ನು ಹೊರತೆಗೆದು ಆ ನೌಕೆಯ ಹೆಸರಿನಲ್ಲಿ ಇ ಮ್ಯುಸಿಯೆಮನ್ನ ಮಾಡಿದ್ದಾರೆ. ಇದರಲ್ಲಿ ನೌಕೆ, ಸೈನಿಕರ ಅಸ್ತಿ ಪಂಜರ, ಅವರು ಉಪಯೋಗಿಸಿದ ವಸ್ತುಗಳು, ಆಯುಧಗಳು ಮತ್ತು ನೌಕೆಯ ಬಗ್ಗೆ ಸವಿವರವಾದ ಚಿತ್ರಗಳನ್ನ, ಪ್ರೋಟೋಟೈಪಗಳನ್ನ ಅಳವಡಿಸಿದ್ದಾರೆ. ಇಲ್ಲಿಯವರೆಗೆ ಸುಮಾರು ೨೫ ಮಿಲಿಯನ್ ಜನರು ಇದನ್ನು ವೀಕ್ಷಣೆ ಮಾಡಿದ್ದರೆ! ಆದರೆ ನೌಕೆ ಏಕೆ ಮುಳುಗಿತು ಅನ್ನುವುದು ನಿಖರವಾಗಿ ತಿಳಿಯದೆ ಇನ್ನು ನಿಗೂಡವಾಗಿದೆ!


ವಿಧಿಯು ಈ ನೌಕೆಯನ್ನ ಮೊದಲನೆಯ ದಿನವೇ ಸಾಯಿಸುವ ಆಯ್ಕೆ ಮಾಡಿದರೆ ಜನರು ಅದನ್ನ ಇಂದಿಗೂ ಬದುಕಿಸಿದ್ದಾರೆ!

Monday, March 7, 2011

ಮೊದಲ ಬಾನಯನ: ಚಳಿಯಲ್ಲೂ ಬೆವೆತುಹೋಗಿದ್ದ ನನ್ನ ಮನಸ್ಸು!

ನನ್ನ ಮುಂದಿನ ಪುಟ್ಟ ಸ್ಕ್ರೀನ್ ಮೇಲೆ ಚಲಿಸ್ತಾ ಇರೋ ವೇಗ ೭೫೦ ಮೈಲ್ಸ್/ಗಂಟೆಗೆ ಅಂತ ಮತ್ತು ಹೊರಗಡೆಯ ತಾಪಮಾನ -೬೩'ಸೆ ಅಂತ ತೋರಿಸ್ತಾ ಇದೆ !!! ನನ್ನ ಹೆಂಡತಿ ಹೇಳಿದಹಾಗೆ ಟೆಕ್ ಆಫ್ ಆಗುವಾಗ ಕಣ್ಣು ಮುಚ್ಚಿಕೊಂಡು ಕುಳಿತಿದ್ದ ನಾನು ಕಣ್ಬಿಟ್ಟಾಗ ಕಂಡ ಮಾಹಿತಿ ಇದು!. ಏರ್ ಫ್ರಾನ್ಸ್ ವಿಮಾನದಲ್ಲಿ ಅದೂ ಮೊಟ್ಟಮೊದಲಬಾರಿಗೆ ವಿಮಾನದಲ್ಲಿ ಪ್ರಯಾನಿಸುತ್ತಾ ಇರೋ ನನ್ನ ಹುಚ್ಚು ಮನಸ್ಸಿನಲ್ಲಿ ಸಾವಿರಾರು ಕೆಟ್ಟ ಯೋಚನೆಗಳು ಬಂದು ಮನಸ್ಸು ತನ್ನಷ್ಟಕ್ಕೆ ತಾನೆ ಭಯಬೀತಗೊಂಡಿತ್ತು. ಇದರಿಂದ ಅತ್ತಿಂದಿತ್ತ ನೋಡುತ್ತಾ ಪಕ್ಕದಲ್ಲಿ ಯಾವುದೇ ಫೀಲಿಂಗ್ಸ್ ಗಳು ಇರದೇ ಕುಳಿತುಕೊಂಡಿರುವ ಅಜ್ಜಿಯೋಬ್ಬಳನ್ನು ನೋಡಿ ಧೈರ್ಯತಂದುಕೊಳ್ಳಲು ಪ್ರಯತ್ನಿಸಿದೆ, ನಾನು ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇನೆ ಅದಕ್ಕೆ ಹೀಗೆಲ್ಲ ಅನಿಸುತ್ತಾ ಇದೆ ಅಂಥ ನನ್ನಸ್ಟಕ್ಕೆ ನಾನೆ ಗೊಂದಲಗಳಿಂದ ಕೂಡಿದ ಮನಸ್ಸಿಗೆ ಸಮಾಧಾನ ಹೇಳುತ್ತಾ ಇದ್ದೆ.

ಇವುಗಳ ಮದ್ದೆ ತಮ್ಮ ನಾಜೂಕಾದ ನಡಿಗೆಗಳಿಂದ ಮುಖದಲ್ಲಿ ತುಂಬು ಮುಗುಳ್ನಗೆಗಳನ್ನು ತುಂಬಿಕೊಂಡ ಗಗನಸಖಿಯರು ಅತ್ತಿಂದಿತ್ತ ಓಡಾಡ್ತಾ ಇದ್ದಾರೆ ಎಷ್ಟೋ ಜನ ಕೆಂಪು ಮುಖಗಳ ವಿದೇಶಿಯರು ತಮ್ಮ ಮಾತೃಭಾಷೆ ಫ್ರೆಂಚ್ ನಲ್ಲಿ ಮಾತಾಡುತ್ತ, ನಗುತ್ತಾ ನಿರ್ಭೀತರಾಗಿ ಹರಟುತ್ತಿದ್ದಾರೆ. ವಿಮಾನದಲ್ಲಿ ಆಗ್ತಾಇರೋ ಇ ಎಲ್ಲ ಆಗುಹೋಗುಗಳಿಂದ ನನಗು ಸ್ವಲ್ಪ ಸಮಾಧಾನವಾಗಿ ಮನಸ್ಸು ಹಗುರವಾಯಿತು.

ಹಾಗೆ ಮುಂದೆ ಗಗನಸಖಿಯರು ಎಲ್ಲರಿಗೂ ಊಟವನ್ನು ತಂದುಕೊಟ್ಟರು, ಮರುಕ್ಷಣವೆ 'ಐ ಯ್ಯಾಂ ರಿಯಲಿ ಸಾರಿ' ಅಂತ ನನ್ನ ಊಟದ ಪ್ಲೇಟನ್ನ ಹಿಂದಕ್ಕೆ ತೆಗೆದುಕೊಂಡು ಹೋಗಿ ಬೇರೆ ಪ್ಲೇಟನ್ನು ತಂದು ಕೊಟ್ಟಳು ಆಮೇಲೆ ಗೊತ್ತಾಯಿತು ಅವಳು ವೆಜ್ ಕೊಡುವ ಬದಲು ನಾನ್ ವೆಜ್ ಕೊಟ್ಟಿದ್ದಳು ಅಂತ! ಎಲ್ಲರೂ ಊಟ ಮುಗಿಸಿ ಅಲ್ಲೇ ತಮ್ಮ ಮುಂದೆ ಇರುವ ಪುಟ್ಟ ಪುಟ್ಟ ಸ್ಕ್ರೀನ್ಗಳಲ್ಲಿ ಇರುವ ಚಿತ್ರಗಳನ್ನ, ಹಾಡುಗಳನ್ನ ಕೇಳುತ್ತ ನಿದ್ರೆಗೆ ಜಾರಿದರು. ನನಗೆ ಬೇರೆ ಬ್ರೆಡ್ ಊಟವನ್ನ ಮಾಡಿ ಹೊಟ್ಟೆನೂ ತುಂಬಿರಲಿಲ್ಲ ಇದು ಮನಸ್ಸಿನ ಜೊತೆ ಸೇರಿ ನನ್ನ ನಿದ್ರೆಯನ್ನ ದೂರವಿರಿಸಿತು.

ಹಾಗೆಯೆ ಸಮಯವನ್ನ ದೂಡುತ್ತಾ ಮುಂದೆ ಜಗತ್ತಿನಲ್ಲಿ ಎಲ್ಲರಿಗೂ ತಿಳಿದಿರುವ ಭಾಷೆ! ಅಂತ ನಾವು ನೀವೆಲ್ಲರೂ ತಿಳಿದಿರುವ ಇಂಗ್ಲಿಷ್ ಭಾಷೆಯೆಲ್ಲಿ ನನ್ನ ಪಕ್ಕದಲ್ಲಿಯೇ ಯಾವದೋ ಒಂದು ಚಲನಚಿತ್ರವನ್ನು ನೋಡುತ್ತಾ ಕುಳಿತಿರುವ ಅಜ್ಜಿಯೆನ್ನ ಮಾತನಾಡಿಸಲು ಪ್ರಯತ್ನಿಸಿದೆ ಅವಳಿಂದ ಬಂದ ಉತ್ತರ 'ಇಂಗ್ಲಿಶ್ ? ನೋ ಓನ್ಲಿ ಸ್ಪ್ಯಾನಿಶ್!'. ಆಮೇಲೆ ನಾವು ಎಷ್ಟು ಹುಚ್ಚರು ಇಂಗ್ಲಿಷ್ ಇಂಗ್ಲಿಷ್ ಅಂತ ಅದರ ಬೆನ್ನಿಗೆನೆ ಬಿದ್ದಿದ್ದೇವೆ ಅಂತ ಅನಿಸಿತು. ಇಸ್ಟಾದಮೇಲೆ ಅವಳಿಗೆ ಪ್ಯಾರಿಸ್ ನಲ್ಲಿ ಇಳಿಯುವಾಗಲೇ ಬೈ ಅಂದಿದ್ದು:).

ಇನ್ನು ಯಾವಾಗಲು ನನಗೆ ಅನಿಸುವ ಹಾಗೆ ಮೊದಲನೆಯ ಸಲ ಒಂದು ಕೆಲಸ ಮಾಡುವಾಗ ನನಗೇನೆ ತುಂಬಾ ಕಷ್ಟಗಳು ಎದುರಾಗುತ್ತವೆ! ಅಂತಾನೋ ಏನೋ ಮತ್ತೊಂದು ದೊಡ್ಡ ಕಷ್ಟ ಎದುರಾಗಿತ್ತು ಅದೇನೆಂದರೆ ನನ್ನ ಫ್ಲೈಟ್ ೩೦ ನಿಮಿಷ ತಡವಾಗಿ ನಿಲ್ಧಾನಕ್ಕೆ ಬಂದಿತ್ತು. ಇದು ಹೇಗೆ ಕಷ್ಟ ಅಂತಿರಾ ? ಯಾಕಂದರೆ ನಾನು ಪ್ಯಾರಿಸ್ ನಿಂದ ಕನೆಕ್ಟಿಂಗ್ ಫ್ಲೈಟ್ ಹಿಡಿದು ಸ್ಟಾಕ್ ಹೋಂ ಗೆ ಹೋಗಬೇಕಿತ್ತು ಮತ್ತು ನನಗೆ ಎರಡು ಫ್ಲೈಟ್ ಗಳ ನಡುವೆ ಕೇವಲ ೬೦ ನಿಮಿಷಗಳ ಸಮಯವಿತ್ತು. ಅದರಲ್ಲಿ ಆಗಲೇ ೩೦ ನಿಮಿಷಗಳನ್ನ ಮೊದಲನೆಯ ಫ್ಲೈಟ್ ನುಂಗಿಹಾಕಿ ನನ್ನ ಟೆನ್ಶನ್ ಹೆಚ್ಚಿಗೆ ಮಾಡಿತ್ತು :(. ಇನ್ನು ಪ್ಯಾರಿಸ್ ನ 'ಚಾರ್ಲ್ಸ್ ದ ಗೌಲ' ಅಂತರ ರಾಷ್ಟೀಯ ವಿಮಾನ ನಿಲ್ದಾಣ ಎಷ್ಟು ದೊಡ್ಡದಾಗಿ ಇದೆ ಅಂದರೆ ನಮ್ಮ ಬೆಂಗಳೂರು ಅಂತರ ರಾಷ್ಟೀಯ ವಿಮಾನ ನಿಲ್ದಾಣದ ೫ ಪಟ್ಟು!! ಒಂದು ಟರ್ಮಿನಲ್ ನಿಂದ ಇನ್ನೊಂದಕ್ಕೆ ಹೋಗಲಿಕ್ಕೆ ಬಸ್ಸುಗಳ ವ್ಯವಸ್ತೆ ಇದೆ ಅದಾಗ್ಯೂ ೨೦ ನಿಮಷಗಳು ಬೇಕು



ಫ್ರಾನ್ಸ್ ನಲ್ಲಿ ಸ್ಹೆಂಜೆನ್ ದೇಶಗಳ ಮೊದಲ ಎಂಟ್ರಿ ಸ್ಟ್ಯಾಂಪ್ ಆಗಬೇಕು, ಮತ್ತೆ ಇಮ್ಮಿಗ್ರೇಶನ್ ಚೆಕ್ ಆಗಬೇಕು ಆದರೆ ಆಗಲೇ ನನ್ನ ೫೦ ನಿಮಿಷಗಳು ಮುಗಿದು ಹೋಗಿವೆ. ಅದನ್ನೆಲ್ಲಾ ಮುಗಿಸಿ ನನ್ನ ೧೨ಕೆಜಿ ಬ್ಯಾಗಿನ ಜೊತೆ ಓಡೋಡಿ ಹೊಗುವಸ್ಟರಲ್ಲಿ ನನ್ನ ಎರಡನೆ ಫ್ಲೈಟ್ ನ ಬೋರ್ಡಿಂಗ್ ಕ್ಲೋಸ್ ಆಗಿತ್ತು :( ಮೊದಲ ಬಾರಿಗೆನೆ ನನ್ನ ವಿಮಾನ ಮಿಸ್ ಆಗಿತ್ತು! ಮೊದಲೇ ನೂರಾರು ಗೊಂದಲಗಳ ನನ್ನ ಮನಸ್ಸಿಗೆ ಇದೊಂದು ದೊಡ್ಡ ಶಾಕ್ ಆಗಿತ್ತು. ಏನು ನನ್ನ ಇನ್ನೊಂದು ಲಗೆಜ ಕತೆ? ಮೊದಲ ವಿಮಾನ ದಲ್ಲಿ ಹೊರಟು ಹೋಯಿತಾ ? ಇಲ್ಲಾ ನನಗೆ ಕೊಡಮಾಡಿದ ಮುಂದಿನ ವಿಮಾನದ ಜೊತೆ ಬರುತ್ತಾ ಏನು ತಿಳಿಯದೆ ಹೋದೆ. ಏರ್ ಫ್ರಾನ್ಸ್ ನ ಸಹಾಯ ಸ್ತಳಕ್ಕೆ ಹೋಗಿ ವಿಚಾರಿಸಿದಾಗ ಅದನ್ನು ನನ್ನ ಎರಡನೆ ವಿಮಾನದ ಜೊತೆ ಟ್ಯಾಗ್ ಮಾಡ್ತಾರೆ ಅಂತ ಕೇಳಿ ಸ್ವಲ್ಪ್ ಸಮಾದಾನವಾಯಿತು.

ನನ್ನ ಮುಂದಿನ ವಿಮಾನವು ಮದ್ಯಾನ್ಹ ೪ ಗಂಟೆಗೆ ಅಂದರೆ ನಾನು ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ೬ ಗಂಟೆ ಕಾಲ ಕಳೆಯಬೇಕು! ಇನ್ನು ಒಂದು ತೊಂದರೆ ಎಂದರೆ ನನಗಾಗಿ ಸ್ಟಾಕ್ ಹೋಂ ನ 'ಅರ್ಲಾಂಡಾ' ವಿಮಾನ ನಿಲ್ದಾಣದಲ್ಲಿ ಕಾಯುತ್ತೆವೆಂದು ತಿಳಿಸಿದ್ದ ನನ್ನ ಮ್ಯಾನೇಜರ್ ಮತ್ತು ಸಹ ಕೆಲಸಗಾರನಿಗೆ ವಿಷಯವನ್ನು ತಿಳಿಸುವುದು. ನನ್ನ ಹತ್ತಿರ ಸೆಲ್ ಫೋನ್ ಇಲ್ಲಾ, ಇಮೇಲ್ ಆದರೂ ಮಾಡೋಣ ಅಂದರೆ ಇಂಟರ್ನೆಟ್ ಕೆಫೆ ಇಲ್ಲಾ! ನನ್ನ ಜೊತೆ ಇ ಎಲ್ಲ ಆಗುಹೋಗುಗಳನ್ನ ಕಂಡು ಪ್ಯಾರಿಸ್ ನಂಥ ಅತೀ ತಂಪಾಗಿರೋ ವಾತಾವರಣದಲ್ಲಿ ನನ್ನ ದೇಹ ಬೆವರನ್ನ ಹೊರಸೂಸುತ್ತಾ ಇತ್ತು.

ಮುಂದೆ ಏನು ಮಾಡೋದು ಅಂತ ಯೋಚಿಸುತ್ತಿರುವಾಗ ಹೊಳೆದದ್ದು ಇಂಟರ್ನ್ಯಾಷನಲ್ ಕಾಲಿಂಗ್ ಕಾರ್ಡ್ ಅನ್ನೋ ಒಂದು ಕಾರ್ಡು. ಅದರಿಂದ ಜಗತ್ತಿನ ಯಾವ ದೇಶಗಳಿಗೆ ಬೇಕಾದರು ಅಲ್ಲೇ ಇರುವ ಲೋಕಲ್ ಫೋನಗಳನ್ನ ಉಪಯೋಗಿಸಿ ಮಾತನಾಡ ಬಹುದು. ಇದರಿಂದ ಇ ಸಮೆಸ್ಸೇ ಬಗೆಹರಿಯುತ್ತೆ ಅಂದರೆ ಮುಂದೆ ಯೆದುರಾಗಿದ್ದೆ ಭಾಷೆಯ ಸಮಸ್ಸೆ. ಫ್ರಾನ್ಸ್ ನಲ್ಲಿ ಎಲ್ಲಿಯೂ ನೀವು ಇಂಗ್ಲಿಷ್ ಕಾಣೋದಿಲ್ಲ ಮತ್ತು ನಾನು ಕೊಂಡ ಕಾರ್ಡು ಅದಕ್ಕೆ ಹೊರತಾಗಿರಲಿಲ್ಲ! ಕಾರ್ಡನ್ನು ಉಪವೊಗಿಸಿ ಕಾಲ್ ಮಾಡಲು ಹೋದೆ ಆದರೆ ಅಲ್ಲಿನ ಟೆಲಿಫೋನ್ಗಳಲ್ಲಿ ಸಹಾಯವಾಣಿ ಕೇವಲ್ ಫ್ರೆಂಚ್ ನಲ್ಲಿ ಇತ್ತು. ಅದರಿಂದ ನನಗೆ ಅದನ್ನು ಉಪಯೋಗಿಸಲು ಸಾಧ್ಯವಾಗಲಿಲ್ಲ, ಅಲ್ಲಿ ಯಾರನ್ನಾದರೂ ಇಂಗ್ಲೀಷಿನಲ್ಲಿ ಮಾತನಾಡಿಸಿದರೆ ನಿಮಗೆ ಸಹಾಯವೂ ಸಿಗುವುದಿಲ್ಲ ಅಂತ ನನಗೆ ಮೊಟ್ಟಮೊದಲ ಬಾರಿಗೆ ಗೊತ್ತಾಯಿತು.

ನಾವು ಕನ್ನಡಿಗರು ಫ್ರೆಂಚ್ ಜನರಿಂದ ಕಲಿಯೋದು ತುಂಬಾ ಇದೆ ಅಂತ ಅನಿಸಿತು ಯಾಕೆಂದರೆ ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತನಾಡಿದರೆ ಸಣ್ಣವನಾಗುತ್ತೇನೆ ಎಂದು ತಿಳಿದಿರೋ ಎಸ್ಟೋಜನ ಮೂರ್ಖರು ಇದ್ದಾರೆ ಅದಲ್ಲದೆ ನಾವು ಬೇರೆಯವರಿಗೆ ಕನ್ನಡ ಕಲಿಸೋ ಬದಲು ನಾವೇ ಅವರ ಭಾಷೆಯನ್ನ ಕಲಿತು ನಮ್ಮ ಕನ್ನಡದ ಸ್ತಿತಿಎನ್ನ ದುಸ್ತಿತಿಗೆ ತಳ್ಳಿದ್ದೇವೆ. ಇನ್ನು ಕರ್ನಾಟಕದಲ್ಲಿ ಕನ್ನಡದಲ್ಲಿ ಸಹಾಯವಾಣಿ ಎನ್ನ ಅಳವಡಿಸಿ ಅಂಥ ಎಲ್ಲ ಕಂಪನಿಗಳಿಗೆ ವತ್ತಾಯಿಸಿ ಪಡೆಯೋ ಪರಿಸ್ತಿತಿ ನಮ್ಮದಾಗಿದೆ! ಎಂಥ ವಿಪರ್ಯಾಸ!
ಮುಂದೆ ಯಾರೋ ಒಬ್ಬ ಪುಣ್ಯಾತ್ಮನ ಸಹಾಯದಿಂದ ನನ್ನ ಮ್ಯಾನೇಜರ್ ಗೆ ಇಮೇಲ್ ಮಡಿ ಸುದ್ದಿ ಮುಟ್ಟಿಸಬೇಕಾಯಿತು!ಅಷ್ಟರಲ್ಲಿ ಅವರು ನನಗೋಸ್ಕರ ಕಾಯ್ದು ಕಾಯ್ದು ತಮ್ಮ ಕಚೇರಿಗೆ ಮರಳಿ ಹೋಗಿದ್ದರು.

ಅಂತೂ ಕೊನೆಗೆ ೪ ಗಂಟೆಗೆ ನನ್ನ ಎರಡನೆ ಫ್ಲೈಟ್ ನಲ್ಲಿ ಮತ್ತೆ ಗಗನದಲ್ಲಿ ಏರಿ ಎರಡುಗಂಟೆಗಳ ಪ್ರಯಾಣದ ನಂತರ 'ಸ್ಟಾಕ್ ಹೋಂ' ಅನ್ನುವ ಸ್ವೀಡನ್ ದೇಶದ ರಾಜಧಾನಿಯೆನ್ನ ಸಂಜೆ ತಲುಪಿದೆ :) ಬ್ಯಾಗನ್ನು ತೆಗೆದುಕೊಳ್ಳುವ ಸ್ತಳದಿಂದ ನಿಲ್ಧಾಣದ ಹೊರಗೆ ಬಂದರೆ! ನಾನು ಹಾಕಿಕೊಂಡಿದ್ದ ದಪ್ಪನೆಯ ಸ್ವೆಟ್ಟರು + ಜಾಕೆಟ್ ಗಳಿದ್ದರು ಚಳಿಯಿಂದ ನಡುಕು ಹುಟ್ಟಿತು.. ಅಲ್ಲಿನ ತಾಪಮಾನ ಸೂಚಿಸುವ ಫಲಕದಲ್ಲಿ -೧೫'ಸಿ ಅಂತ ತೋರಿಸುತ್ತಿತ್ತು!!!.

ಪ್ಯಾರಿಸ್ ನಲ್ಲಿ ಚಳಿಯಲ್ಲೂ ಬೆವೆತುಹೋಗಿದ್ದ ನನ್ನ ದೇಹ ಇಲ್ಲಿ ದಪ್ಪ ದಪ್ಪನೆಯ ಸ್ವೆಟ್ಟರು + ಜಾಕೆಟ್ ಗಳಿದ್ದರೂ ನಡುಗುತ್ತಿತ್ತು!:).

Thursday, March 3, 2011

ನಮ್ಮ ಕನ್ನಡ ಚಿತ್ರರಂಗದಿಂದ ಕನ್ನಡಕ್ಕೆ ಆಗುತ್ತಿರುವ ಅನ್ಯಾಯ!

ಯಾವಾಗಲು ಕನ್ನಡಕ್ಕೆ ದುಡಿತಿವೀ, ಕನ್ನಡ ತಾಯೀಯ ಮಕ್ಕಳು ಎಂದು ಹೇಳಿಕೊಂಡು ತಿರುಗುತ್ತಾ ಇರೋ ಕನ್ನಡ ಚಲಚಿತ್ರದ ಜನರಿಂದ ಆಗುತ್ತಿರುವ ಕನ್ನಡದ ಕೊಗ್ಗೊಲೆಗೆ ಒಂದು ಉದಾಹರಣೆ.
ಇ ಕೆಳಗಿನ ಚಲನಚಿತ್ರಗಳ ಹೆಸರುಗಳನ್ನ ಒಮ್ಮೆ ನೋಡಿ !!! ಇದು ಕನ್ನಡನಾ ಅಂತ ನಮ್ಮ ಚಿತ್ರರಂಗದವರನ್ನ ಕೇಳಬೇಕಾಗಿದೆ.
ಬಾಸ್, ಲವ್ ಗುರು, ಸೈಕೋ, ನಮ್ಮ ಏರಿಯಾಲ್ ಒಂದು ದಿನ, ಜಾಕಿ,

ಕೃಷ್ಣನ್ ಲವ್ ಸ್ಟೋರಿ,ಮ್ಯಾರೆಜ ಸ್ಟೋರಿ,ಕಿಲ್ಲರ್, ಆಕ್ಸಿಡೆಂಟ್,ಬಿಂದಾಸ್,

ಬಿಂದಾಸ್ ಹುಡುಗಿ, ಸತ್ಯ ಇನ್ ಲವ್, ಸರ್ಕಸ್, ಕ್ರೇಜಿ ಕುಟುಂಬ,

ಸೈನೈಡ, ಡೆಡ್ಲಿ ೨, ಡೆಡ್ಲಿ ಸೋಮ, ದುನಿಯಾ,ಏಕ್ಸುಜ ಮಿ, ಹ೨ಒ,

ಹನಿಮೂನ್ ಎಕ್ಷ್ಪ್ರೆಸ್ಸ, ಐಪಿಸಿ ಸೆಕ್ಸನ್ ೩೦೦, ಜೋಕ ಫಾಲ್ಸ್,

ಜಂಗ್ಲಿ, ಜಾಲಿ ಡೇಸ್, ಜೋಶ, ಮೈ ಆಟೋಗ್ರಾಪ್, ಒರಟ ಐ ಲವ್ ಯು,

ಪಿಯುಸಿ, ಸ್ಲಂ ಬಾಲಾ, ಕೂಲ್, ಡಬ್ಬಲ್ ಡೆಕ್ಕರ್, ಗನ್............. ಇನ್ನು ಎಸ್ಟೋ ಚಿತ್ರಗಳ ಹೆಸರುಗಳು ಇಂಗ್ಲಿಷ್ ಅಥವಾ ಕಂಗ್ಲಿಷ್ನಲ್ಲಿ ಇದ್ದಾವೆ.

ಇ ಎಲ್ಲ ಮೇಲಿನ ಹೆಸರಿನ ಚಿತ್ರಗಳಿಂದ ಕನ್ನಡಕ್ಕೆ ಉಪಯೋಗವಾಗುತ್ತಾ ? ಇವೆಲ್ಲ ಕನ್ನಡದ ಹೆಸರುಗಳಾಗಿದ್ದರೆ ನಮ್ಮ ಕನ್ನಡದ ಎಷ್ಟೋ ಶಬ್ದಗಳು ಪರಬಾಷಿಕರಿಗೂ ಗೊತ್ತಾಗಿ ಕನ್ನಡಕ್ಕೆ ಸ್ವಲ್ಪನಾದ್ರು ಉಪಯೋಗವಾಗಿರೋದು.
ಎಲ್ಲದಕ್ಕೂ ತಮಿಳರನ್ನ ನೋಡಿ ಕಲಿರೀ ಅನ್ನೋಹಾಗೆ ಆಗಿದೆ ನಮ್ಮ ಪರಿಸ್ತಿತಿ, ಇ ವಿಷಯದಲ್ಲಿನು ಅಸ್ಟೆ ಅವರನ್ನ ನೋಡಿ ಕಲಿಯಬೇಕಾಗಿದೆ. ತಮಿಳು ಮುಖ್ಯಮಂತ್ರಿ ಕರುಣಾನಿದಿ ಹೇಳಿದ ತಕ್ಷಣ 'ರೋಬೋಟ್' ಅನ್ನುವ ಚಿತ್ರ 'ಎಂದಿರನ್' ಆಯೀತು ಮತ್ತು ಅಲ್ಲಿಯ ಎಲ್ಲ ಚಿತ್ರಗಳ ಹೆಸರುಗಳು ತಮಿಳಿನಲ್ಲಿಯೇ ಇರಬೇಕು ಅಂತ ಎಲ್ಲ ನಿರ್ಮಾಪಕರಿಗೆ ತಿಳಿಸಲಾಗಿದೆ.
ಮತ್ತೆ ಚಿತ್ರಗಳಲ್ಲಿನ ಸಂಭಾಷಣೆಯು ಸಹ ಕಂಗ್ಲಿಷ್ನಿಂದ ತುಂಬಿ ಹೋಗಿದೆ ನಾವು ಎಲ್ಲಿ ಇಂಗ್ಲಿಷ್ ಚಿತ್ರ ನೋಡ್ತಾ ಇದ್ದೇವೆ ಎಂದೆನಿಸುತ್ತದೆ ಅಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ .
ಆ ಒಂದು ನಮ್ಮ ಭಾಷೆಯನ್ನ ಉಳಿಸಬೇಕು ಅನ್ನೋ ಮನಸ್ಸು ನಮ್ಮಲ್ಲಿ ಯಾರಿಗೂ ಇಲ್ಲವಾಗಿದೆ ಇವತ್ತು! ಮತ್ತು ಕೆಲವು ಜನ ದುಡ್ಡುಮಾಡೋದಕ್ಕೆ ಕನ್ನಡ ಕನ್ನಡ ಎನ್ನುತ್ತಿದ್ದಾರೆ ಎಂದು ಭಾಸವಾಗ್ತಾ ಇದೆ !.

ಇನ್ಮುಂದೆಯಾದರು ನಮ್ಮ ಚಲನಚಿತ್ರ ಮಂಡಳಿಯವರು ಇತ್ತಕಡೆ ಗಮನಹರಿಸಲಿ.

ನಿಮ್ಮ,
ಪ್ರಶಾಂತ್ ಯಾಳವಾರಮಠ

Thursday, January 6, 2011

ನನ್ನ ಪ್ರೀತಿಯ ರಾಜಕಾರಣಿಗಳಿಗೆ ೩ ಪ್ರಶ್ನೆ ೧ ಸಲಹೆ !!!

ನನ್ನ ಪ್ರೀತಿಯ ರಾಜಕಾರಣಿಗಳಿಗೆ ೩ ಪ್ರಶ್ನೆ ೧ ಸಲಹೆ !!!

ಇಂದಿನ ನಮ್ಮ ರಾಜಕೀಯ ಪರಿಸ್ತಿತಿಯೇನ್ನು ನೋಡಿ ನಮ್ಮ ಪ್ರೀತಿಯ ರಾಜಕಾರಣಿಗಳಿಗೆ ೩ ಪ್ರಶ್ನೆಗಳನ್ನು ಕೇಳೋಣ ಅಂತ ಅಂದುಕೊಂಡಿದಿನೀ...
೧. ನಿಮಗೆ ಸಾಮಾನ್ಯರಂತೆ ಬದುಕಲು ಆಗುವುದಿಲ್ಲವೇ ?
ಇಂದು ಯಾವುದೇ ಪಕ್ಷ ಅತವಾ ವ್ಯಕ್ತಿಎನ್ನ ತೊಗೊಳ್ಳಿ ಎಲ್ಲರೂ ದುಡ್ಡು ದುಡ್ಡು ಅಂತಿದ್ದಾರೆ.
ಒಬ್ಬ ಸಾಮಾನ್ಯ ವ್ಯಕ್ತಿ ಎಲ್ಲ ಸವಲತ್ತುಗಳನ್ನು ಪಡೆದು, ಮನೆ ಮಟ ಮಾಡಿ, ಮಕ್ಕಳನ್ನ ಒಳ್ಳೆ ಶಾಲೆಗಳಿಗೆ ಸೇರಿಸಿ ಸಂತೋಷದಿಂದ ಬದುಕಲು ಕೇವಲ ೧ ಕೋಟಿಗಿಂತ [ಬೆಂಗಳೂರಲ್ಲಿ] ಕಡಿಮೆ ದುಡ್ಡು ಸಾಕು.
ಆದರೆ ಇವತ್ತು ರಾಜಕೀಯದಲ್ಲಿರೋ ಎಲ್ಲರೂ [೯೯%] ಕೋಟ್ಯದಿಪತಿಗಳೇ ಇದ್ದೀರಾ... ಆದರು ನಿಮಗೆ ಯಾಕೆ ಇಸ್ಟೊಂದು ಆಸೆ ಯಾರಿಗೋಸ್ಕರ ಇಸ್ಟೆಲ್ಲಾ ಆಸ್ತಿಯನ್ನ ಮಾಡ್ತಾ ಇದ್ದೀರಾ ... ನಿಮಗೂ ಗೊತ್ತು ನಮಗೂ ಗೊತ್ತು ಎಲ್ಲರೂ ಹೋಗುವಾಗ ಎನನ್ನು ತೆಗೆದುಕೊಂಡು ಹೋಗೋದಿಲ್ಲ ಅಂತ ಆದರೂ ...

೨. ನೀವು ಯಾಕೆ ಆತ್ಮವಂಚಕರಾಗಿ ಬದಕುತ್ತಾ ಇದ್ದೀರಿ ?
ನೀವು ಎಸ್ಟೊಂದು ತಪ್ಪುಗಳನ್ನ ಮಾಡಿದ್ದಿರೀ, ಮಾಡುತ್ತಇದ್ದೀರಿ ಅಂತ ನಮಗಿಂತ ನಿಮಗೆ ಚೆನ್ನಾಗಿ ಗೊತ್ತು ಆದರು ನೀವು ಏನು ಮಾಡಿಯೇ ಇಲ್ಲ ಅಂತೀರಾ.
ನೀವು ಮಾಡಿದ್ದೂ ತಪ್ಪು ಅಂತ ಒಬ್ಬ ಸಾಮಾನ್ಯನು ಹೇಳುತ್ತಾನೆ... ಲಂಚ ತೊಗೊತಿರಿ, ಧಮಕಿ ಹಾಕಸ್ತಿರಿ, ಸರಕಾರಿ ದುಡ್ಡನ್ನ/ಜಾಗವನ್ನ/ವಸ್ತುಗಳನ್ನ/ಮೋಟಾರುಗಳನ್ನ ಗುಳುಂ ಅನಸ್ತಿರಿ, ಗುಂಡಾಗಳನ್ನ ಸಾಕುತ್ತಿರೀ ... ಅಬ್ಬಾ ಒಂದಾ ಎರಡಾ .... ಇಸ್ಟೆಲ್ಲಾ ಮಾಡಿದ್ದು ನಿಮಗೂ ಗೊತ್ತು ಆದರು ಯಾಕೆ ನೀವು ಆತ್ಮವಂಚಕರಾಗಿ, ಸಬ್ಯರತರ ನಟಸ್ತಿರಿ.
ಅತವಾ ನಿಮಗೆ ಆತ್ಮ ಅನ್ನೋದೇ ಇಲ್ಲವಾ ಹೇಗೆ ?

೩. ನಿಮ್ಮ ನಡವಳಿಕೆ ಅಧಿಕಾರದಲ್ಲಿದ್ದಾಗ ಬೇರೆ ಇಲ್ಲದಿದ್ದಾಗ ಬೇರೆ ಯಾಕೆ ?
ನಾನು ಎಸ್ಟೊಂದು ರಾಜಕೀಯ ವ್ಯಕ್ತಿಗಳ ಬಗೆಗಿನ ವಿವರಗಳನ್ನ ನೋಡಿದೆ ಎಲ್ಲರೂ ಎಸ್ಟೊಂದು ಒಳ್ಳೆಯವರು, ಎಸ್ಟೊಂದು ಹೋರಾಟಗಳನ್ನ ಮಾಡಿದ್ದಾರೆ, ಒಳ್ಳೊಳ್ಳೆಯ ಮಾತುಗಳನ್ನ ಆಡಿದ್ದಾರೆ, ಬಡಬಗ್ಗರಿಗೆ ಸಹಾಯ ಮಾಡಿದ್ದಾರೆ ಆದರೆ ಇ ಎಲ್ಲವನ್ನು ಅವರು ವಿರೋಧ ಪಕ್ಷದಲ್ಲಿದ್ದಾಗ ಮಾಡಿದ್ದಾರೆ. ಅಂದರೆ ಇವೆಲ್ಲ ನೀವು ಅಧಿಕಾರ ಹಿಡಿಯಲು ಮಾಡಿರುವ/ಆಡಿರುವ ನಾಟಕಗಳಾ ? ಏಕೆಂದರೆ ಅದೇ ವ್ಯಕ್ತಿಗಳು ಅಧಿಕಾರ ಹಿಡಿದಮೇಲೆ ಎಸ್ಟೊಂದು ಭ್ರಷ್ಟಾಚಾರ, ಅನ್ನ್ಯಾಯಗಳನ್ನ ಮಾಡಿದ್ದಾರೆ ಅಂದರೆ ಅವುಗಳಿಗೆ ಲೆಕ್ಕವಿಲ್ಲ.
ಇದು ಯಾಕೆ ಹೀಗೆ, ಅಧಿಕಾರದ ಮುಂದೆ ಒಳ್ಳೆಯತನ ನಿಲ್ಲೋದಿಲ್ಲವಾ ? ಇದು ನಿಜ ಅಂದರೆ ನೀವು ಅಧಿಕಾರದಲ್ಲಿ ಇರೋದೇ ಬೇಡಾ.

ಸಲಹೆ :
ದಯವಿಟ್ಟು ನೀವು ದುಡ್ಡುಮಾಡೋದಕ್ಕೆ ರಾಜಕೀಯ ಸೇರಬೇಡಿ ... ಯಾಕಂದರೆ ದುಡ್ಡು ಮಾಡೋದಕ್ಕೆ ನಾನಾ ದಾರಿಗಳಿವೆ.
ನಿಮ್ಮ ಮಕ್ಕಳಿಗೆ ಚೆನ್ನಾಗಿ ಜೀವನ ಮಾಡಲು ಕಲಿಸೋ ಶಕ್ತಿ ಇಲ್ಲಾ ಅಂದರೆ ಮಕ್ಕಳನ್ನ ಹಡಿಯಬೇಡಿ ಯಾಕಂದರೆ ನೀವು ಮಾಡೋ ಎಲ್ಲ ತಪ್ಪುಗಳು ನಿಮ್ಮ ಮಕ್ಕಳಿಗೊಸ್ಕರಣೆ.
ಇನ್ನು ಉಳಿದ ಸಲಹೆಗಳನ್ನ ಇ ಕೆಳಗಿನ ಗೆಳೆಯರು ಕೊಡ್ತಾರೆ ಕೇಳಿ :)

ನಿಮ್ಮ,
ಪ್ರಶಾಂತ್