Monday, May 2, 2011

'ಕಾಪ' ಪಂಚಾಯಿತಿ!


ಸುನೀತಾ(21) ಮತ್ತು 'ಜಸ್ಸಾ' ಉರ್ಫ್ ಜಸ್ಬೀರ್ ಸಿಂಗ(22) ಒಬ್ಬರನ್ನೊಬ್ಬರು ಪ್ರೀತಿಸಿ.. ’ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು’ ಅಂದು ಕೊಂಡು ಮನೆಯವರ ಮತ್ತು ಊರಿನವರ ವಿರೋಧದ ನಡುವೆ ಮದುವೆಯಾಗಿದ್ದರು! ತಮ್ಮ ಪುಟ್ಟ ಸಂಸಾರ, ಪುಟ್ಟ ಮನೆ ಮತ್ತೆ ತಮಗೆ ಒಂದು ಪುಟ್ಟ ಮಗುವಿನ ಬರುವಿಗೆ ಕಾಯ್ತಾ ಹಾಯಾಗಿದ್ದರು ಅಂದರೆ ಸುನೀತಾ ೫ ತಿಂಗಳ ಗರ್ಬಿಣಿ!.
ಹೀಗೆ ಎಲ್ಲವೂ ಚೆನ್ನಾಗಿರುವಾಗ ಒಂದು ದಿನ ಮುಂಜಾನೆ ಸುನಿತಾಳ ತಂದೆಯ ಮನೆ ಮುಂದೆ ಅತೀ ಕ್ರೂರತನಕ್ಕೆ ಸಾಕ್ಷಿಯಾಗಿ ಎರಡು ದೇಹಗಳು ಬಿದ್ದಿದ್ದವು! ಅಬ್ಬಾ ಎಂತಹ ರಾಕ್ಷಸರು ಅಂತೀರಾ ಗರ್ಬಿಣಿಯ ಹೊಟ್ಟೆಗೆ ಒದ್ದಿದ್ದರು, ಮುಖಕ್ಕೆ ಗುದ್ದಿದ್ದರು ಮತ್ತು ಎರಡು ದೇಹಗಳಿಗೆ ಇರಿದಿದ್ದರು!

ಇತ್ತೀಚಿಗ ನಮ್ಮ ಸರ್ವೋಚ್ಚ ನ್ಯಾಯಾಲಯ 'ಕಾಪ' ಪಂಚಾಯಿತಿಗಳನ್ನ ಬೇರು ಸಮೇತ ಕಿತ್ತುಹಾಕಿ ಅಂತಾ ಅತೀ ಕಠಿಣವಾದ ಎಚ್ಚರಿಕೆಯನ್ನ ಎಲ್ಲ District Magistrate ಮತ್ತು SP ಗಳಿಗೆ ಕೊಟ್ಟಿದೆ! ಅದಾಗ್ಯೂ ಇ 'ಕಾಪ' ಪಂಚಾಯತಿಗಳು ನಮ್ಮ ಸರ್ವೋಚ್ಚ ನ್ಯಾಯಾಲಯವೆ ತಪ್ಪು ಅನ್ನೋತರಹದಲ್ಲಿ ಹೇಳಿಕೆಗಳನ್ನು ನೀಡುತ್ತ ಇದ್ದಾವೆ. ಹಾಗಿದ್ದರೆ ಏನಿದು ಇ 'ಕಾಪ' ಪಂಚಾಯತಿಗಳ ಪಂಚಾಯಿತಿ?

ಉತ್ತರ ಭಾರತದ ರಾಜ್ಯಗಳಾದ ಹರ್ಯಾಣಾ, ಉತ್ತರ ಪ್ರದೇಶ, ರಾಜಸ್ತಾನ ಮುಂತಾದ ರಾಜ್ಯಗಳಲ್ಲಿ ಕಂಡು ಬರುವ 'ಕಾಪ್' ಪಂಚಾಯಿತಿಗಳು ಮೇಲ್ನೋಟಕ್ಕೆ ನಮ್ಮ ಹಿಂದಿನ ಕಾಲದಲ್ಲಿದ್ದ ಪಂಚಾಯತಿ ಕಟ್ಟೆಗಳ ತರಃ ಕೆಲಸ ಮಾಡುತ್ತವೆ. ಸುಮಾರು ೧೪ನೇ ಶತಮಾನದಿಂದ ನಡೆಯುತ್ತಾ ಬಂದಿರುವ 'ಕಾಪ' ಪಂಚಾಯತಿಗಳು ಜಾತಿ, ಗೋತ್ರ ಮತ್ತು ಸ್ಥಳಗಳಿಂದ ಒಗ್ಗೂಡಿದಂತ ಹಳ್ಳಿಗಳಲ್ಲಿ ಪ್ರಚಲಿತದಲ್ಲಿವೆ. ಹಿಂದಿನ ಕಾಲದಲ್ಲಿ ಮೇಲಾಗಿ ಉನ್ನತ ಜಾತಿಯವರು ತಮ್ಮ ಅಧಿಕಾರ ಮತ್ತು ಶಕ್ತಿಯ ಉಳಿವಿಗಾಗಿ ಇ ಪಂಚಾಯತಿಗಳನ್ನ ನಿರ್ಮಿಸಿದರು.
ಒಂದೇ ಗೊತ್ರಗಳನ್ನು ಹೊಂದಿರುವ ಹಳ್ಳಿಗಳ 'ಕಾಪ' ಪಂಚಾಯತಿಗಳ ಪ್ರಕಾರ ಆ ಹಳ್ಳಿಗಳಲ್ಲಿ ಇರುವ ಎಲ್ಲರೂ ಅಣ್ಣತಮ್ಮಂದಿರು ಮತ್ತು ಅಕ್ಕತಂಗಿಯರು. ಇಂತ ಪಂಚಾಯತಿಗಳ ಅಡಿಯೇಲ್ಲಿ ಬರುವ ಎಲ್ಲ ಹಳ್ಳಿಗಳಲ್ಲಿ Love marriage ಗಳು ನಿಶಿದ್ದ! ಇ ಪಂಚಾಯತಿಗಳ ಒಳಗೆ ಬರುವ ಬೇರೆ ಬೇರೆ ಹಳ್ಳಿಗಳ ನಡುವೆಯೂ ಮದುವೆ ನಿಶಿದ್ದ! ಇದನ್ನೆನಾದರು ಮೀರಿ ಯಾರಾದರು ನಡೆದುಕೊಂಡರೆ ಅವರಿಗೆ ಮೃತ್ಯುವೇ ಗತಿ!
ಇ 'ಕಾಪ' ಪಂಚಾಯತಿಗಳು ತಪ್ಪು ಮಾಡಿದವರಿಗೆ ಕೊಡುವ ಶಿಕ್ಷೆಗಳು ಅತೀಯಾದ ದಂಡ, ಸಮಾಜದಿಂದ ಬಹಿಷ್ಕಾರ ಮತ್ತು ಹೆಚ್ಚಾಗಿ ಕೊಲೆಗಳಿಂದ ಅಥವಾ ಆತ್ಮಹತ್ತೆ ಮಾಡಿಕೊಳ್ಳುವ ಹಾಗೆ ಒತ್ತಡದಿಂದ ಕೊನೆಗೊಳ್ಳುತ್ತವೆ.

ಸುನೀತಾ ಮತ್ತು ’ಜಸ್ಸಾ’ಗೂ ಆಗಿದ್ದು ಇದೆ! ಇಬ್ಬರನ್ನು ರಾತ್ರಿ ಮನೆಯಿಂದ ಹೊರಗೆಳೆದುಕೊಂಡು ಹೋಗಿ ಮುಂಜಾನೆ ಅವರ ದೇಹಗಳನ್ನು ಸುನಿತಾಳ ಮನೆಯ ಮುಂದೆ ಎಸೆದು ಹೋಗಿದ್ದರು ಯಾಕೆಂದರೆ ಅದೂ ಇಡೀ ಊರಿಗೆ ಗೊತ್ತಾಗಬೇಕು ಮತ್ತು ಉಳಿದವರಿಗೆ ಎಚ್ಚರಿಕೆ ಯಾಗಬೇಕು! ಅವರಿಬ್ಬರೂ ಮಾಡಿದ ತಪ್ಪು ಏನೆಂದರೆ ಒಂದೇ ಊರಿನವರಾಗಿ ಪ್ರೀತಿಸಿ ಮದುವೆಯಾಗಿದ್ದು!
ಇದು ನಡೆದದ್ದು ೨೦೦೮ ಮೇ ೯ ರಂದು ಹರ್ಯಾಣಾ ರಾಜ್ಯದ ಬಲ್ಲಾ ಎಂಬ ಹಳ್ಳಿಯೆಲ್ಲಿ! ವಿಚಿತ್ರ ಎಂದರೆ ಇ ಗಟನೆಗೆ ಇಡೀ ಹಳ್ಳಿಯೇ ಹೆಮ್ಮೆಯಿಂದ Support ಆಗೀ ನಿಂತಿತ್ತು... ಆದರೆ ಕೊಲೆಗಡುಕರ ಪರವಾಗಿ! ಇದೇ ಕಾಪ ಪಂಚಾಯತಿಗಳ ವಿಶೇಷ! ಇದೇ Honour Killing!
ಇ ಕಾಪ ಪಂಚಾಯತಿಗಳು ಇಂದಿಗೂ ಇಷ್ಟು ಬಲಿಷ್ಠವಾಗಿ ಬೆಳೆದಿವೆ ಅಂದರೆ ಇದಕ್ಕೆ ಮುಖ್ಯ ಕಾರಣ ನಮ್ಮ ದುರ್ಬಲ ಪಂಚಾಯತ್ ರಾಜ್ ವ್ಯವಸ್ತೆ ಅಂದರೆ ತಪ್ಪಾಗಲಾರದು. ಜನರು ಕಾಪ ಪಂಚಯತಿಗಳಲ್ಲಿ ವಿಶ್ವಾಸವೆಕೆ ಇಟ್ಟಿದ್ದಾರೆ ಅಂತ ಅದರ ಹಿಂದೆ ಹೋದರೆ
೧) ಇಲ್ಲಿ ಯಾವುದೇ ವ್ಯಾಜ್ಯಗಳನ್ನ ಪ್ರಮುಕರಾದ ೧೦ ರಿಂದ ೧೫ ಜನರು ಕುಳಿತಲ್ಲಿಯೇ ಒಂದೇ ದಿನದಲ್ಲಿ ಬಗೆ ಹರಿಸುತ್ತಾರೆ ... ಅದನ್ನ ನಮ್ಮ ಕೊರ್ಟಗಳಿಗೆ ಒಯ್ಯದರೆ ಕನಿಷ್ಠ ೪ ರಿಂದ ೫ ವರ್ಷ! ಅಥವಾ ಇನ್ನೂ ಹೆಚ್ಚು!
೨) ಕೊರ್ಟಗಳಿಗೆ ತಮ್ಮ ಕೆಲಸಗಳನ್ನ ಬಿಟ್ಟು ಅಲೆಯುದು ಮತ್ತು ಪೋಲಿಸರಿಂದ ಕಿರುಕಳ ಅನುಭವಿಸುವುದು ಇರುವುದಿಲ್ಲ.
ಆದರೆ ಇ ಕೆಲುವೊಂದು ಉಪಯೋಗಗಳನ್ನು ಬಿಟ್ಟರೆ ಇದೊಂದು ಅತೀ ಕ್ರೂರ ವ್ಯವಸ್ತೆಯೇ ಸರಿ ಇಲ್ಲಿ ಮಹಿಳೆಯರಿಗೆ ಯಾವುದೇ ಅಧಿಕಾರ ಇಲ್ಲಾ, ಕೆಲೋವೊಮ್ಮೆ ಗಂಡು ಮಕ್ಕಳಿಗೆ ಶಿಕ್ಷೆಯಿಂದ ವಿನಾಯತಿ ಸಿಗುತ್ತೆ ಆದರೆ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಸಿಗುವುದಿಲ್ಲ, ಇ ಪಂಚಾಯತಿಗಳ ವಿರುದ್ದ ಯಾರಾದರು ಮಕ್ಕಳಿಗೆ Support ಮಾಡಿದರೆ ಇಡೀ ಮನೆತನವನ್ನು ಬಹಿಸ್ಕಾರ ಮಾಡಲಾಗುತ್ತೆ ! ಲಕ್ಷಾಂತರ ರೂಪಾಯಿಗಳ ದಂಡವನ್ನು ವಿದಿಸಲಾಗುತ್ತೆ.

ದುರ್ದೈವದ ಸಂಗತಿ ಎಂದರೆ ಕಾಪ ಪಂಚಾಯತಿಗಳ ಅಡಿಯೇಲ್ಲಿ ಬರುವ ಎಲ್ಲ ಹಳ್ಳಿಗಳು ಇವುಗಳ ಮೇಲೆ ಪ್ರಶ್ನಾತೀತ ವಿಶ್ವಾಸವನ್ನು ಇಟ್ಟಿರುವುದು! ಮತ್ತು ಇವುಗಳಲ್ಲಿ ಮಹಿಳೆಯರಿಗೆ ಯಾವುದೇ ಹಕ್ಕುಗಳಿರದೆ ಇರುವುದು. ಇವಗಳನ್ನು ಹತ್ತಿಕ್ಕಲು ಯಾವುದೇ ರಾಜಕೀಯ ನಾಯಕರಾಗಲಿ, ಪಕ್ಷಗಳಾಗಲಿ ಪ್ರಯತ್ನಿಸುತ್ತಿಲ್ಲಾ ಏಕೆಂದರೆ ವೋಟು ಬ್ಯಾಂಕ್! ಮತ್ತು ಕಾಪ ಪಂಚಾಯತಿಗಳ ಒಗ್ಗಟ್ಟು!

ಇನ್ನೂ ನಮ್ಮ ಸಮಾಜದಲ್ಲಿ ಇಂತಹ ವ್ಯವಸ್ತೆಗಳು ಇರುವುದು ಒಂದು ಕಳಂಕ. ಕಾಪ್ ಪಂಚಾಯತಿಗಳ ಕ್ರೂರ ವರ್ತನೆಗಳು, ಕೆಲೋವೊಮ್ಮೆ ನಗೆಪಾಟಲಿಗೆ ಇಡಾಗುವ ಫ್ಹತ್ವಾಗಳು, ಇನ್ನು ಕೆಲವು ಪ್ರಚಲಿತವಿರುವ parallel ನ್ಯಾಯಸ್ತಾನಗಳು ಇವುಗಳೆಲ್ಲವನ್ನು ಒಂದೇ ವ್ಯವಸ್ತೆಯ ಅಡಿಯಲ್ಲಿ ತರುವುದು ಈಗಿನ ಅವಶ್ಯಕತೆಯಾಗಿದೆ. ಎನಂತಿರಿ?