Monday, March 7, 2011

ಮೊದಲ ಬಾನಯನ: ಚಳಿಯಲ್ಲೂ ಬೆವೆತುಹೋಗಿದ್ದ ನನ್ನ ಮನಸ್ಸು!

ನನ್ನ ಮುಂದಿನ ಪುಟ್ಟ ಸ್ಕ್ರೀನ್ ಮೇಲೆ ಚಲಿಸ್ತಾ ಇರೋ ವೇಗ ೭೫೦ ಮೈಲ್ಸ್/ಗಂಟೆಗೆ ಅಂತ ಮತ್ತು ಹೊರಗಡೆಯ ತಾಪಮಾನ -೬೩'ಸೆ ಅಂತ ತೋರಿಸ್ತಾ ಇದೆ !!! ನನ್ನ ಹೆಂಡತಿ ಹೇಳಿದಹಾಗೆ ಟೆಕ್ ಆಫ್ ಆಗುವಾಗ ಕಣ್ಣು ಮುಚ್ಚಿಕೊಂಡು ಕುಳಿತಿದ್ದ ನಾನು ಕಣ್ಬಿಟ್ಟಾಗ ಕಂಡ ಮಾಹಿತಿ ಇದು!. ಏರ್ ಫ್ರಾನ್ಸ್ ವಿಮಾನದಲ್ಲಿ ಅದೂ ಮೊಟ್ಟಮೊದಲಬಾರಿಗೆ ವಿಮಾನದಲ್ಲಿ ಪ್ರಯಾನಿಸುತ್ತಾ ಇರೋ ನನ್ನ ಹುಚ್ಚು ಮನಸ್ಸಿನಲ್ಲಿ ಸಾವಿರಾರು ಕೆಟ್ಟ ಯೋಚನೆಗಳು ಬಂದು ಮನಸ್ಸು ತನ್ನಷ್ಟಕ್ಕೆ ತಾನೆ ಭಯಬೀತಗೊಂಡಿತ್ತು. ಇದರಿಂದ ಅತ್ತಿಂದಿತ್ತ ನೋಡುತ್ತಾ ಪಕ್ಕದಲ್ಲಿ ಯಾವುದೇ ಫೀಲಿಂಗ್ಸ್ ಗಳು ಇರದೇ ಕುಳಿತುಕೊಂಡಿರುವ ಅಜ್ಜಿಯೋಬ್ಬಳನ್ನು ನೋಡಿ ಧೈರ್ಯತಂದುಕೊಳ್ಳಲು ಪ್ರಯತ್ನಿಸಿದೆ, ನಾನು ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇನೆ ಅದಕ್ಕೆ ಹೀಗೆಲ್ಲ ಅನಿಸುತ್ತಾ ಇದೆ ಅಂಥ ನನ್ನಸ್ಟಕ್ಕೆ ನಾನೆ ಗೊಂದಲಗಳಿಂದ ಕೂಡಿದ ಮನಸ್ಸಿಗೆ ಸಮಾಧಾನ ಹೇಳುತ್ತಾ ಇದ್ದೆ.

ಇವುಗಳ ಮದ್ದೆ ತಮ್ಮ ನಾಜೂಕಾದ ನಡಿಗೆಗಳಿಂದ ಮುಖದಲ್ಲಿ ತುಂಬು ಮುಗುಳ್ನಗೆಗಳನ್ನು ತುಂಬಿಕೊಂಡ ಗಗನಸಖಿಯರು ಅತ್ತಿಂದಿತ್ತ ಓಡಾಡ್ತಾ ಇದ್ದಾರೆ ಎಷ್ಟೋ ಜನ ಕೆಂಪು ಮುಖಗಳ ವಿದೇಶಿಯರು ತಮ್ಮ ಮಾತೃಭಾಷೆ ಫ್ರೆಂಚ್ ನಲ್ಲಿ ಮಾತಾಡುತ್ತ, ನಗುತ್ತಾ ನಿರ್ಭೀತರಾಗಿ ಹರಟುತ್ತಿದ್ದಾರೆ. ವಿಮಾನದಲ್ಲಿ ಆಗ್ತಾಇರೋ ಇ ಎಲ್ಲ ಆಗುಹೋಗುಗಳಿಂದ ನನಗು ಸ್ವಲ್ಪ ಸಮಾಧಾನವಾಗಿ ಮನಸ್ಸು ಹಗುರವಾಯಿತು.

ಹಾಗೆ ಮುಂದೆ ಗಗನಸಖಿಯರು ಎಲ್ಲರಿಗೂ ಊಟವನ್ನು ತಂದುಕೊಟ್ಟರು, ಮರುಕ್ಷಣವೆ 'ಐ ಯ್ಯಾಂ ರಿಯಲಿ ಸಾರಿ' ಅಂತ ನನ್ನ ಊಟದ ಪ್ಲೇಟನ್ನ ಹಿಂದಕ್ಕೆ ತೆಗೆದುಕೊಂಡು ಹೋಗಿ ಬೇರೆ ಪ್ಲೇಟನ್ನು ತಂದು ಕೊಟ್ಟಳು ಆಮೇಲೆ ಗೊತ್ತಾಯಿತು ಅವಳು ವೆಜ್ ಕೊಡುವ ಬದಲು ನಾನ್ ವೆಜ್ ಕೊಟ್ಟಿದ್ದಳು ಅಂತ! ಎಲ್ಲರೂ ಊಟ ಮುಗಿಸಿ ಅಲ್ಲೇ ತಮ್ಮ ಮುಂದೆ ಇರುವ ಪುಟ್ಟ ಪುಟ್ಟ ಸ್ಕ್ರೀನ್ಗಳಲ್ಲಿ ಇರುವ ಚಿತ್ರಗಳನ್ನ, ಹಾಡುಗಳನ್ನ ಕೇಳುತ್ತ ನಿದ್ರೆಗೆ ಜಾರಿದರು. ನನಗೆ ಬೇರೆ ಬ್ರೆಡ್ ಊಟವನ್ನ ಮಾಡಿ ಹೊಟ್ಟೆನೂ ತುಂಬಿರಲಿಲ್ಲ ಇದು ಮನಸ್ಸಿನ ಜೊತೆ ಸೇರಿ ನನ್ನ ನಿದ್ರೆಯನ್ನ ದೂರವಿರಿಸಿತು.

ಹಾಗೆಯೆ ಸಮಯವನ್ನ ದೂಡುತ್ತಾ ಮುಂದೆ ಜಗತ್ತಿನಲ್ಲಿ ಎಲ್ಲರಿಗೂ ತಿಳಿದಿರುವ ಭಾಷೆ! ಅಂತ ನಾವು ನೀವೆಲ್ಲರೂ ತಿಳಿದಿರುವ ಇಂಗ್ಲಿಷ್ ಭಾಷೆಯೆಲ್ಲಿ ನನ್ನ ಪಕ್ಕದಲ್ಲಿಯೇ ಯಾವದೋ ಒಂದು ಚಲನಚಿತ್ರವನ್ನು ನೋಡುತ್ತಾ ಕುಳಿತಿರುವ ಅಜ್ಜಿಯೆನ್ನ ಮಾತನಾಡಿಸಲು ಪ್ರಯತ್ನಿಸಿದೆ ಅವಳಿಂದ ಬಂದ ಉತ್ತರ 'ಇಂಗ್ಲಿಶ್ ? ನೋ ಓನ್ಲಿ ಸ್ಪ್ಯಾನಿಶ್!'. ಆಮೇಲೆ ನಾವು ಎಷ್ಟು ಹುಚ್ಚರು ಇಂಗ್ಲಿಷ್ ಇಂಗ್ಲಿಷ್ ಅಂತ ಅದರ ಬೆನ್ನಿಗೆನೆ ಬಿದ್ದಿದ್ದೇವೆ ಅಂತ ಅನಿಸಿತು. ಇಸ್ಟಾದಮೇಲೆ ಅವಳಿಗೆ ಪ್ಯಾರಿಸ್ ನಲ್ಲಿ ಇಳಿಯುವಾಗಲೇ ಬೈ ಅಂದಿದ್ದು:).

ಇನ್ನು ಯಾವಾಗಲು ನನಗೆ ಅನಿಸುವ ಹಾಗೆ ಮೊದಲನೆಯ ಸಲ ಒಂದು ಕೆಲಸ ಮಾಡುವಾಗ ನನಗೇನೆ ತುಂಬಾ ಕಷ್ಟಗಳು ಎದುರಾಗುತ್ತವೆ! ಅಂತಾನೋ ಏನೋ ಮತ್ತೊಂದು ದೊಡ್ಡ ಕಷ್ಟ ಎದುರಾಗಿತ್ತು ಅದೇನೆಂದರೆ ನನ್ನ ಫ್ಲೈಟ್ ೩೦ ನಿಮಿಷ ತಡವಾಗಿ ನಿಲ್ಧಾನಕ್ಕೆ ಬಂದಿತ್ತು. ಇದು ಹೇಗೆ ಕಷ್ಟ ಅಂತಿರಾ ? ಯಾಕಂದರೆ ನಾನು ಪ್ಯಾರಿಸ್ ನಿಂದ ಕನೆಕ್ಟಿಂಗ್ ಫ್ಲೈಟ್ ಹಿಡಿದು ಸ್ಟಾಕ್ ಹೋಂ ಗೆ ಹೋಗಬೇಕಿತ್ತು ಮತ್ತು ನನಗೆ ಎರಡು ಫ್ಲೈಟ್ ಗಳ ನಡುವೆ ಕೇವಲ ೬೦ ನಿಮಿಷಗಳ ಸಮಯವಿತ್ತು. ಅದರಲ್ಲಿ ಆಗಲೇ ೩೦ ನಿಮಿಷಗಳನ್ನ ಮೊದಲನೆಯ ಫ್ಲೈಟ್ ನುಂಗಿಹಾಕಿ ನನ್ನ ಟೆನ್ಶನ್ ಹೆಚ್ಚಿಗೆ ಮಾಡಿತ್ತು :(. ಇನ್ನು ಪ್ಯಾರಿಸ್ ನ 'ಚಾರ್ಲ್ಸ್ ದ ಗೌಲ' ಅಂತರ ರಾಷ್ಟೀಯ ವಿಮಾನ ನಿಲ್ದಾಣ ಎಷ್ಟು ದೊಡ್ಡದಾಗಿ ಇದೆ ಅಂದರೆ ನಮ್ಮ ಬೆಂಗಳೂರು ಅಂತರ ರಾಷ್ಟೀಯ ವಿಮಾನ ನಿಲ್ದಾಣದ ೫ ಪಟ್ಟು!! ಒಂದು ಟರ್ಮಿನಲ್ ನಿಂದ ಇನ್ನೊಂದಕ್ಕೆ ಹೋಗಲಿಕ್ಕೆ ಬಸ್ಸುಗಳ ವ್ಯವಸ್ತೆ ಇದೆ ಅದಾಗ್ಯೂ ೨೦ ನಿಮಷಗಳು ಬೇಕು



ಫ್ರಾನ್ಸ್ ನಲ್ಲಿ ಸ್ಹೆಂಜೆನ್ ದೇಶಗಳ ಮೊದಲ ಎಂಟ್ರಿ ಸ್ಟ್ಯಾಂಪ್ ಆಗಬೇಕು, ಮತ್ತೆ ಇಮ್ಮಿಗ್ರೇಶನ್ ಚೆಕ್ ಆಗಬೇಕು ಆದರೆ ಆಗಲೇ ನನ್ನ ೫೦ ನಿಮಿಷಗಳು ಮುಗಿದು ಹೋಗಿವೆ. ಅದನ್ನೆಲ್ಲಾ ಮುಗಿಸಿ ನನ್ನ ೧೨ಕೆಜಿ ಬ್ಯಾಗಿನ ಜೊತೆ ಓಡೋಡಿ ಹೊಗುವಸ್ಟರಲ್ಲಿ ನನ್ನ ಎರಡನೆ ಫ್ಲೈಟ್ ನ ಬೋರ್ಡಿಂಗ್ ಕ್ಲೋಸ್ ಆಗಿತ್ತು :( ಮೊದಲ ಬಾರಿಗೆನೆ ನನ್ನ ವಿಮಾನ ಮಿಸ್ ಆಗಿತ್ತು! ಮೊದಲೇ ನೂರಾರು ಗೊಂದಲಗಳ ನನ್ನ ಮನಸ್ಸಿಗೆ ಇದೊಂದು ದೊಡ್ಡ ಶಾಕ್ ಆಗಿತ್ತು. ಏನು ನನ್ನ ಇನ್ನೊಂದು ಲಗೆಜ ಕತೆ? ಮೊದಲ ವಿಮಾನ ದಲ್ಲಿ ಹೊರಟು ಹೋಯಿತಾ ? ಇಲ್ಲಾ ನನಗೆ ಕೊಡಮಾಡಿದ ಮುಂದಿನ ವಿಮಾನದ ಜೊತೆ ಬರುತ್ತಾ ಏನು ತಿಳಿಯದೆ ಹೋದೆ. ಏರ್ ಫ್ರಾನ್ಸ್ ನ ಸಹಾಯ ಸ್ತಳಕ್ಕೆ ಹೋಗಿ ವಿಚಾರಿಸಿದಾಗ ಅದನ್ನು ನನ್ನ ಎರಡನೆ ವಿಮಾನದ ಜೊತೆ ಟ್ಯಾಗ್ ಮಾಡ್ತಾರೆ ಅಂತ ಕೇಳಿ ಸ್ವಲ್ಪ್ ಸಮಾದಾನವಾಯಿತು.

ನನ್ನ ಮುಂದಿನ ವಿಮಾನವು ಮದ್ಯಾನ್ಹ ೪ ಗಂಟೆಗೆ ಅಂದರೆ ನಾನು ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ೬ ಗಂಟೆ ಕಾಲ ಕಳೆಯಬೇಕು! ಇನ್ನು ಒಂದು ತೊಂದರೆ ಎಂದರೆ ನನಗಾಗಿ ಸ್ಟಾಕ್ ಹೋಂ ನ 'ಅರ್ಲಾಂಡಾ' ವಿಮಾನ ನಿಲ್ದಾಣದಲ್ಲಿ ಕಾಯುತ್ತೆವೆಂದು ತಿಳಿಸಿದ್ದ ನನ್ನ ಮ್ಯಾನೇಜರ್ ಮತ್ತು ಸಹ ಕೆಲಸಗಾರನಿಗೆ ವಿಷಯವನ್ನು ತಿಳಿಸುವುದು. ನನ್ನ ಹತ್ತಿರ ಸೆಲ್ ಫೋನ್ ಇಲ್ಲಾ, ಇಮೇಲ್ ಆದರೂ ಮಾಡೋಣ ಅಂದರೆ ಇಂಟರ್ನೆಟ್ ಕೆಫೆ ಇಲ್ಲಾ! ನನ್ನ ಜೊತೆ ಇ ಎಲ್ಲ ಆಗುಹೋಗುಗಳನ್ನ ಕಂಡು ಪ್ಯಾರಿಸ್ ನಂಥ ಅತೀ ತಂಪಾಗಿರೋ ವಾತಾವರಣದಲ್ಲಿ ನನ್ನ ದೇಹ ಬೆವರನ್ನ ಹೊರಸೂಸುತ್ತಾ ಇತ್ತು.

ಮುಂದೆ ಏನು ಮಾಡೋದು ಅಂತ ಯೋಚಿಸುತ್ತಿರುವಾಗ ಹೊಳೆದದ್ದು ಇಂಟರ್ನ್ಯಾಷನಲ್ ಕಾಲಿಂಗ್ ಕಾರ್ಡ್ ಅನ್ನೋ ಒಂದು ಕಾರ್ಡು. ಅದರಿಂದ ಜಗತ್ತಿನ ಯಾವ ದೇಶಗಳಿಗೆ ಬೇಕಾದರು ಅಲ್ಲೇ ಇರುವ ಲೋಕಲ್ ಫೋನಗಳನ್ನ ಉಪಯೋಗಿಸಿ ಮಾತನಾಡ ಬಹುದು. ಇದರಿಂದ ಇ ಸಮೆಸ್ಸೇ ಬಗೆಹರಿಯುತ್ತೆ ಅಂದರೆ ಮುಂದೆ ಯೆದುರಾಗಿದ್ದೆ ಭಾಷೆಯ ಸಮಸ್ಸೆ. ಫ್ರಾನ್ಸ್ ನಲ್ಲಿ ಎಲ್ಲಿಯೂ ನೀವು ಇಂಗ್ಲಿಷ್ ಕಾಣೋದಿಲ್ಲ ಮತ್ತು ನಾನು ಕೊಂಡ ಕಾರ್ಡು ಅದಕ್ಕೆ ಹೊರತಾಗಿರಲಿಲ್ಲ! ಕಾರ್ಡನ್ನು ಉಪವೊಗಿಸಿ ಕಾಲ್ ಮಾಡಲು ಹೋದೆ ಆದರೆ ಅಲ್ಲಿನ ಟೆಲಿಫೋನ್ಗಳಲ್ಲಿ ಸಹಾಯವಾಣಿ ಕೇವಲ್ ಫ್ರೆಂಚ್ ನಲ್ಲಿ ಇತ್ತು. ಅದರಿಂದ ನನಗೆ ಅದನ್ನು ಉಪಯೋಗಿಸಲು ಸಾಧ್ಯವಾಗಲಿಲ್ಲ, ಅಲ್ಲಿ ಯಾರನ್ನಾದರೂ ಇಂಗ್ಲೀಷಿನಲ್ಲಿ ಮಾತನಾಡಿಸಿದರೆ ನಿಮಗೆ ಸಹಾಯವೂ ಸಿಗುವುದಿಲ್ಲ ಅಂತ ನನಗೆ ಮೊಟ್ಟಮೊದಲ ಬಾರಿಗೆ ಗೊತ್ತಾಯಿತು.

ನಾವು ಕನ್ನಡಿಗರು ಫ್ರೆಂಚ್ ಜನರಿಂದ ಕಲಿಯೋದು ತುಂಬಾ ಇದೆ ಅಂತ ಅನಿಸಿತು ಯಾಕೆಂದರೆ ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತನಾಡಿದರೆ ಸಣ್ಣವನಾಗುತ್ತೇನೆ ಎಂದು ತಿಳಿದಿರೋ ಎಸ್ಟೋಜನ ಮೂರ್ಖರು ಇದ್ದಾರೆ ಅದಲ್ಲದೆ ನಾವು ಬೇರೆಯವರಿಗೆ ಕನ್ನಡ ಕಲಿಸೋ ಬದಲು ನಾವೇ ಅವರ ಭಾಷೆಯನ್ನ ಕಲಿತು ನಮ್ಮ ಕನ್ನಡದ ಸ್ತಿತಿಎನ್ನ ದುಸ್ತಿತಿಗೆ ತಳ್ಳಿದ್ದೇವೆ. ಇನ್ನು ಕರ್ನಾಟಕದಲ್ಲಿ ಕನ್ನಡದಲ್ಲಿ ಸಹಾಯವಾಣಿ ಎನ್ನ ಅಳವಡಿಸಿ ಅಂಥ ಎಲ್ಲ ಕಂಪನಿಗಳಿಗೆ ವತ್ತಾಯಿಸಿ ಪಡೆಯೋ ಪರಿಸ್ತಿತಿ ನಮ್ಮದಾಗಿದೆ! ಎಂಥ ವಿಪರ್ಯಾಸ!
ಮುಂದೆ ಯಾರೋ ಒಬ್ಬ ಪುಣ್ಯಾತ್ಮನ ಸಹಾಯದಿಂದ ನನ್ನ ಮ್ಯಾನೇಜರ್ ಗೆ ಇಮೇಲ್ ಮಡಿ ಸುದ್ದಿ ಮುಟ್ಟಿಸಬೇಕಾಯಿತು!ಅಷ್ಟರಲ್ಲಿ ಅವರು ನನಗೋಸ್ಕರ ಕಾಯ್ದು ಕಾಯ್ದು ತಮ್ಮ ಕಚೇರಿಗೆ ಮರಳಿ ಹೋಗಿದ್ದರು.

ಅಂತೂ ಕೊನೆಗೆ ೪ ಗಂಟೆಗೆ ನನ್ನ ಎರಡನೆ ಫ್ಲೈಟ್ ನಲ್ಲಿ ಮತ್ತೆ ಗಗನದಲ್ಲಿ ಏರಿ ಎರಡುಗಂಟೆಗಳ ಪ್ರಯಾಣದ ನಂತರ 'ಸ್ಟಾಕ್ ಹೋಂ' ಅನ್ನುವ ಸ್ವೀಡನ್ ದೇಶದ ರಾಜಧಾನಿಯೆನ್ನ ಸಂಜೆ ತಲುಪಿದೆ :) ಬ್ಯಾಗನ್ನು ತೆಗೆದುಕೊಳ್ಳುವ ಸ್ತಳದಿಂದ ನಿಲ್ಧಾಣದ ಹೊರಗೆ ಬಂದರೆ! ನಾನು ಹಾಕಿಕೊಂಡಿದ್ದ ದಪ್ಪನೆಯ ಸ್ವೆಟ್ಟರು + ಜಾಕೆಟ್ ಗಳಿದ್ದರು ಚಳಿಯಿಂದ ನಡುಕು ಹುಟ್ಟಿತು.. ಅಲ್ಲಿನ ತಾಪಮಾನ ಸೂಚಿಸುವ ಫಲಕದಲ್ಲಿ -೧೫'ಸಿ ಅಂತ ತೋರಿಸುತ್ತಿತ್ತು!!!.

ಪ್ಯಾರಿಸ್ ನಲ್ಲಿ ಚಳಿಯಲ್ಲೂ ಬೆವೆತುಹೋಗಿದ್ದ ನನ್ನ ದೇಹ ಇಲ್ಲಿ ದಪ್ಪ ದಪ್ಪನೆಯ ಸ್ವೆಟ್ಟರು + ಜಾಕೆಟ್ ಗಳಿದ್ದರೂ ನಡುಗುತ್ತಿತ್ತು!:).

5 comments:

abhijit said...

Prashant, Chennagide chennagide, mattashtu geechi haaku illi

Unknown said...

Le idu yako jaasti aytu maga

Parashu said...

Prashanth manasininda muktha bhavanegala chilume sada heegeye hariyutirali.. good one.. keep going :)

ಪ್ರಶಾಂತ ಯಾಳವಾರಮಠ said...

@abhijit, thanks summane manassinalli bandh vicharagalanna baritaiddini...
@Rohit, yen illa maga.. kelasa da madde swalpa time siktu hange geechide.. :)
@parashu, thanks sir.. hange try madta irtini...

NiranZenn said...

Nice write up , continue blogging about life at Stockholm .