Thursday, April 14, 2011

'ವಾಸಾ' ಎಂಬ ಯುದ್ಧ ನೌಕೆ ! ಮತ್ತು ವಿಧಿಯ ಆಯ್ಕೆ!

೧೬ನೇ ಶತಮಾನದ ಸ್ವೀಡನ್ ದೇಶದ ರಾಜ ಕಿಂಗ್ ಗುಸ್ತಾವ್ II ಅಡಾಲ್ಫ್ ಗೆ ತನ್ನ ನೌಕಾದಳದ ಶಕ್ತಿಯನ್ನು ಹೆಚ್ಚಿಸಬೇಕು ಅನ್ನೋ ಇಚ್ಛೆ ಇಂದ ಹಡಗು ನಿರ್ಮಿಸುವುದರಲ್ಲಿ ಪ್ರಖ್ಯಾತಿ ಹೊಂದಿದ್ದ ಡಚ್ ದೇಶದ ಹೆನ್ರಿಕ್ ಹೈಬರ್ಟ್ ಸನ್ ಜೊತೆ ನಾಲ್ಕು ಯುದ್ದನೌಕೆಗಳನ್ನು ನಿರ್ಮಿಸುವ ಒಪ್ಪಂದ ಮಾಡಿಕೊಂಡ. ೧೬೨೬ ರಲ್ಲಿ ನಾಲ್ಕರಲ್ಲಿ ಮೊದಲನೆಯದಾಗಿ ವಾಸಾ ಎಂಬ ನೌಕೆಯನ್ನು ನಿರ್ಮಿಸಲು ಪ್ರಾರಂಭಿಸಿದ ತಂಡ ಅದನ್ನು ಆಗಿನ ಕಾಲದ ಅತೀ ದೊಡ್ಡ ನೌಕೆಯೇನ್ನಾಗಿ ನಿರ್ಮಿಸಬೇಕೆಂದು ಪನತೋಟ್ಟಿತು! ಅದಕ್ಕಾಗಿ ಸುಮಾರು ೩೦೦ ಜನರ ತಂಡ ತನ್ನ ಕೆಲಸವನ್ನ ಆರಂಬಿಸಿತ್ತು.

ಅವತ್ತಿನ ರಾತ್ರಿ ೧೨ ಗಂಟೆಯಾದರು ನಿದ್ರೆ ಬರ್ತಾ ಇಲ್ಲಾ ಸುಮಾರು ೨ ಗಂಟೆಗಳಿಂದ ಬೆಡ್ ಮೇಲೆ ಆಕಡೆಯಿಂದ ಇಕಡೆ.. ಇಕಡೆ ಇಂದ ಆಕಡೆ ಉರುಳಾಡುತ್ತಾ ಇದ್ದೀನಿ! ನಿದ್ರೆಯ ಸುಳಿವೇ ಇಲ್ಲ. ನಾಳೆ ಏನಾದರೂ ಅತೀವ ಸಂತೋಷ ಉಂಟು ಮಾಡುವ ಅಥವಾ ಹೊಸದಾದ ಏನಾದ್ರು ಕೆಲಸ ಮಾಡ್ತಾ ಇದ್ದರೆ ಅಥವಾ ಏನಾದ್ರು ಎಕ್ಸೈಟಿಂಗ್ ವಿಷಯ ಇದ್ದರೆ ಯಾವಾಗಲು ಆಗುವ ಹಾಗೆ ಇವತ್ತಿನ ನಿದ್ರೆಯೂ ಆಹುತಿ ಯಾಗಿತ್ತು. ಇಷ್ಟಕ್ಕೂ ನಾಳೆಯ ಅಂತಹ ಎಕ್ಸೈಟಿಂಗ್ ವಿಷಯ ಏನೆಂದರೆ ನಾನು ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಯುದ್ದ ನೌಕೆಯನ್ನು ನೋಡಲಿಕ್ಕೆ ಹೋಗುವುದಾಗಿತ್ತು! ಅದೂ ಏನಂದರೆ  'ವಾಸಾ' ಎಂಬ ಬಹು ಚರ್ಚಿತ, ಬಹು ದೊಡ್ಡ, ಅತ್ಯದ್ಬುತ ನೌಕೆ!. ಆದರೆ ಅದು ವಿಧಿಯ ಆಟದಿಂದಾಗಿ ಇತಿಹಾಸ ನಿರ್ಮಿಸಿತ್ತು! ಇದು ಸ್ವೀಡನ್ ದೇಶದ ರಾಜಧಾನಿ ಸ್ಟಾಕ್ ಹೋಂ ನ ಒಂದು ಪ್ರಮುಖ ಆಕರ್ಷಣೆ!.
ನಸುಕಿನ ನನ್ನ ಅಲಾರಮ್ ನ ಶಬ್ಧ ನನ್ನನ್ನ ನಿದ್ರೆಯಿಂದ ಹೊರಗೆ ಎಳೆದಾಗ ಕಣ್ಣು ಇನ್ನು ಕೆಂಪಗೆ ಇತ್ತು ಕಾರಣ ಹಿಂದಿನ ರಾತ್ರಿಯ ಅರೆ ಬರೆ ನಿದ್ರೆ. ಹಾಗೆಯ ಖುಷಿಯಿಂದ ಎದ್ದು ಬೇಗ ಬೇಗನೆ ರೆಡಿ ಆಗಿ ಗೆಳಯ ತುಷಾರನ ಮನೆಗೆ ಓಡಿ ಹೋಗಿ ಅಲ್ಲಿಂದ ಸುರಂಗ ಮಾರ್ಗದ ರೈಲು ನಿಲ್ಧಾನಕ್ಕೆ ತೆರಳಿದೆವು ಮುಂದೆ 'ಪ್ರಾಣಿಗಳ ಗಾರ್ಡನ್' [’Djurgården’] ಅನ್ನೋ ಒಂದು ಪ್ರದೇಶದಲ್ಲಿರುವ ವಾಸಾ ಮ್ಯೂಸಿಯಂ ತಲುಪಿದೆವು.

ಇ ಒಂದು ನೌಕೆಯನ್ನು ನಿರ್ಮಿಸಲು ಸುಮಾರು ೧೦೦೦ ಕ್ಕೂ ಹೆಚ್ಚಿನ ಒಕ್ ಮರಗಳನ್ನು ಬಳಸಲಾಯಿತು! ೬೪ ತೋಪುಗಳನ್ನ ಅಳವಡಿಸಲಾಗಿತ್ತು. ಬಡಿಗತನದವರು, ಕಂಬಾರರು, ಕರಕುಶಲಕರ್ಮಿಗಳು, ಬಣ್ಣ ಬಳೆಯುವವರು ಹೀಗೆ ಎಲ್ಲತರಹದ ಜನರು ಸ್ವೀಡನ್, ಫಿನ್ಲ್ಯಾಂಡ್ ಮತ್ತು ಹಾಲೆಂಡಿನಿಂದ ಬಂದಿದ್ದರು. ಕಿಂಗ್ ಗುಸ್ತಾವ್ ಆಗಾಗ ಕೆಲಸ ನಡೆಯುವ ಸ್ತಳಕ್ಕೆ ಬೆಟ್ಟಿ ಕೊಟ್ಟು ಮೇಲ್ವಿಚಾರಣೆ ಮಾಡುತ್ತಿದ್ದನು. ತೋಪುಗಳನ್ನು ತಯಾರಿಕೆಗೆ ಬೇಕಾದ ಕಬ್ಬಿಣ ಮತ್ತು ತಾಮ್ರವನ್ನು ಸ್ವೀಡನ್ನಿನ ಬೇರೆ ಸ್ತಳಗಲ್ಲಿ ತಯಾರಿಸಿ ತರಲಾಯಿತು ಮತ್ತು ಈಜು ಉಡುಗೆಗಳನ್ನ, ಬಣ್ಣಗಳನ್ನ ಹೊರದೇಶಗಳಿಂದ ತರಲಾಯಿತು.
೧೬೨೭ ರ ಒಂದು ದಿನ ಇ ನೌಕೆಯ ನಿರ್ಮಾಣದ ಮುಖ್ಯ ಪಾತ್ರದಾರಿ ಹೆನ್ರಿಕ್ ಅನಾರೋಗ್ಯದಿಂದಾಗಿ ನಿಧನ ಹೊಂದಿದ! ಅವಾಗಲೇ ವಿಧಿಯ ಆಟ ಪ್ರಾರಂಭವಾಗಿತ್ತು ಅನಿಸುತ್ತೆ !. ಹೆನ್ರಿಕ್ ಮರಣಾ ನಂತರ ಹೆನ ಜಾಕೊಬ್ಸ್ ಅವನ ಕೆಲಸವನ್ನು ಮುಂದುವರಿಸಿದ... ೧೬೨೮ ರ ಅಗಸ್ಟ ನಲ್ಲಿ ನೌಕೆಯಾ ನಿರ್ಮಾಣ ಮುಗಿದಿತ್ತು! ನೌಕೆಯ ಒಳಗೆ ನಾಲ್ಕು ಅಂತಸ್ತುಗಳಿದ್ದವು ಸುತ್ತಲೂ ೬೪ ತೋಪುಗಳನ್ನ ಅಳವಡಿಸಿರುವ ಗನ್ ಪಾಯಿಂಟ್ ಗಳನ್ನ ಮಾಡಲಾಗಿತ್ತು. ನೌಕೆಯ ಹಿಂದೆ ಸುಂದರವಾದ ಕಲಾಕೃತಿಗಳನ್ನ ಕೆತ್ತಲಾಗಿತ್ತು. ನೌಕೆಯ ಕೆಳ ಅಂತಸ್ತಿನಲ್ಲಿ ಅಡುಗೆಯ ಮನೆಯನ್ನು ನಿರ್ಮಿಸಲಾಗಿತ್ತು, ಮೊದಲ ಮತ್ತು ಎರಡನೆಯ ಅಂತಸ್ತಿನಲ್ಲಿ ಮದ್ದುಗುಂಡುಗಳನ್ನು ತುಂಬಿಸಲು ವ್ಯವಸ್ತೆ ಮಾಡಲಾಗಿತ್ತು. ನೌಕೆಯ ಒಳಗೆ ಸರಿಸುಮಾರು ೪೫೦ ಜನರು ಇರಬಹುದಾಗಿತ್ತು! ಅದರಲ್ಲಿ ಅಧಿಕಾರಿಗಳು, ಸುಮಾರು ೩೦೦ ಜನ ಸೈನಿಕರು, ಅಡುಗೆ ಭಟ್ಟರು, ಹೆಂಗಸರು, ಸಹಾಯಕರು ಹೀಗೆ ಎಲ್ಲ ತರಹದ ಜನರನ್ನು ಹೊಂದುವ ವ್ಯವಸ್ತೆ ಮಾಡಲಾಗಿತ್ತು ಮತ್ತು ಅದರಲ್ಲಿ ಎಸ್ಟೊಂದು ಜನ ಸಂದಿಗೊಂದಿಗಳಲ್ಲಿ ತಮ್ಮ ಜೀವನ ಸಗಿಸಬೇಕಾಗುತಿತ್ತು ಏಕೆಂದರೆ ಕೇವಲ ಅಧಿಕಾರಿಗಳಿಗೆ ಒಳ್ಳೆ ಸ್ತಳಾವಕಾಶ ಇರುವ ಕೋಣೆಗಳನ್ನ ರಚಿಸಲಾಗಿತ್ತು. ಆಗಿನ ಕಾಲದಲ್ಲಿ ಇದು ಅತೀ ದೊಡ್ಡ ಮತ್ತು ಶಕ್ತಿಶಾಲಿ ಯುದ್ದನೌಕೆ ಯಾಗಿತ್ತು ಏಕೆಂದರೆ ಒಂದೇ ಮಗ್ಗುಲಿನಿಂದ ಸುಮಾರು ೩೦೦ಕೆಜಿ ತೂಕದ ಗುಂಡನ್ನು ಹಾರಿಸಬಹುದಾಗಿತ್ತು!...ಆದರೆ .... !!??!!

             ಹಲವು ಕಷ್ಟಗಳನ್ನ ಅನುಭವಿಸಿ ಕೊನೆಗೆ ಅದ್ಭುತವಾದ ವಾಸಾ ನೌಕೆಯು ಸೇವೆಗೆ ಸಿದ್ದವಾಗಿತ್ತು ಮತ್ತು ೧೬೨೮ ರ ಅಗಸ್ಟ್ ೧೦ ರಂದು ಮಡಿಲಲ್ಲಿ ಸುಮಾರು ೪೫೦ ಜನರನ್ನ ತುಂಬಿಕೊಂಡು ಯುದ್ದಕ್ಕೆ ತಯ್ಯಾರಾದ ಸೈನಿಕನಂತೆ ಮದ್ದು ಗುಂಡುಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ರಾಜ ಗುಸ್ತಾವ್ ನ ರಾಯಲ್ ಪ್ಯಾಲೇಸ ಮುಂದೆ ಸಮುದ್ರದಲ್ಲಿ ದುಮುಕಲು ನಿಂತಿತ್ತು. ಇದರ ಬಿಳ್ಕೊಡುಗೆಗಾಗಿ ಸಾವಿರಾರು ಜನರು ಸೇರಿದ್ದರು ರಾಜ ಗುಸ್ತಾವ್ ಅತೀ ಸಂತೋಷದಿಂದ ವಾಸಾ ಮುನ್ನಡೆಯಲು ಹಸಿರು ನಿಶಾನೆ ತೋರಿಸಿದ. ಆದರೆ ವಿಧಿಯ ಆಟವೇ ಬೇರೆಯಾಗಿತ್ತು ! ವಾಸಾ ತನ್ನ ಮೊಟ್ಟಮೊದಲ ಪ್ರಯಾಣದಲ್ಲೇ ಕೇವಲ ೧೩೦೦ ಮೀಟರಗಳಷ್ಟು ಮುಂದೆ ಹೋಗಿ ಸಮುದ್ರದಲ್ಲಿ ಮುಳುಗಿ ಹೋಗಿತ್ತು !!! ಸುಮಾರು ೫೦ ಜನರು ತಮ್ಮ ಪ್ರಾಣ ಕಳೆದುಕೊಂಡರು ಎಸ್ಟೋ ಜನ ಕಾಣೆಯಾದರು.

           
                       
                      ಇ ಘಟನೆ ನಡೆದು ಸುಮಾರು ೩೩೩ ವರ್ಷಗಳ ನಂತರ ಅಂದರೆ ೧೯೬೧ರಲ್ಲಿ ಸ್ವೀಡನ್ ಸರಕಾರ ಆ ಮುಳುಗಿದ ನತದೃಷ್ಟ ನೌಕೆಯನ್ನು ಹೊರತೆಗೆದು ಆ ನೌಕೆಯ ಹೆಸರಿನಲ್ಲಿ ಇ ಮ್ಯುಸಿಯೆಮನ್ನ ಮಾಡಿದ್ದಾರೆ. ಇದರಲ್ಲಿ ನೌಕೆ, ಸೈನಿಕರ ಅಸ್ತಿ ಪಂಜರ, ಅವರು ಉಪಯೋಗಿಸಿದ ವಸ್ತುಗಳು, ಆಯುಧಗಳು ಮತ್ತು ನೌಕೆಯ ಬಗ್ಗೆ ಸವಿವರವಾದ ಚಿತ್ರಗಳನ್ನ, ಪ್ರೋಟೋಟೈಪಗಳನ್ನ ಅಳವಡಿಸಿದ್ದಾರೆ. ಇಲ್ಲಿಯವರೆಗೆ ಸುಮಾರು ೨೫ ಮಿಲಿಯನ್ ಜನರು ಇದನ್ನು ವೀಕ್ಷಣೆ ಮಾಡಿದ್ದರೆ! ಆದರೆ ನೌಕೆ ಏಕೆ ಮುಳುಗಿತು ಅನ್ನುವುದು ನಿಖರವಾಗಿ ತಿಳಿಯದೆ ಇನ್ನು ನಿಗೂಡವಾಗಿದೆ!


ವಿಧಿಯು ಈ ನೌಕೆಯನ್ನ ಮೊದಲನೆಯ ದಿನವೇ ಸಾಯಿಸುವ ಆಯ್ಕೆ ಮಾಡಿದರೆ ಜನರು ಅದನ್ನ ಇಂದಿಗೂ ಬದುಕಿಸಿದ್ದಾರೆ!

6 comments:

Unknown said...

good one dude...Now you are following the footsteps of Ravi Belegere.....

Prashanth said...

@rohit - Thanks le... :)

ಸ್ವಗತ.... said...

ಈ ಹಡಗಾ ನಾನು, ಅರ್ಧ ದಿನ ನೋಡಿದರು ಸತೆ ಅದರ ಹಿಂದಿನ ಕಥಿ ಗೊತ್ತಿದ್ದಿಲ್ಲ ನಂಗ. ಸಣ್ಣ ದಾದರೂ ಮಸ್ತ್ ಬರದಿ...ಇಂಟರೆಸ್ಟಿಂಗ್ ಐತಿ. ಇನ್ನು ಸ್ವಲ್ಪ ಬರದಿದ್ರ ಚೊಲೋ ಅಕ್ಕಿತ್ತು...but totally good information and thanks for that.

ಪ್ರಶಾಂತ ಯಾಳವಾರಮಠ said...

ಸ್ವಗತ ಅವರೇ ತುಂಬಾ ಥ್ಯಾಂಕ್ಸ್ ರೀ ...
ನಿಜವಾಗ್ಲೂ ಇನ್ನ ಬಾಳ ಐತಿ ವಾಸಾ ಬಗ್ಗೆ ಬರಿಯುದು
ಟ್ರೈ ಮಾಡ್ತೀನಿ :)

ದೇವನಗರಿ ಹುಡುಗ said...

Always project flops due to defects in Design requirements and mis-calculations. VASA is one of the example in that.

ಪ್ರಶಾಂತ ಯಾಳವಾರಮಠ said...

ಹೌದು ಸುಧಾಕರ! ನನಗು ನೌಕೆ ಮುಳಗಲಿಕ್ಕೆ ಅದೇ ಕಾರಣ ಅನಿಸುತ್ತೆ
ಒಂದು ಮಾಹಿತಿ ಪ್ರಕಾರ ನೌಕೆಯ ಕೆಳಭಾಗದಲ್ಲಿ ಸರಿಯಾದ ಪ್ರಮಾಣದ ಭಾರವಿರುವ ಕಲ್ಲುಗಳನ್ನ ತುಂಬಿರಲಿಲ್ಲವಂತೆ !