Thursday, April 21, 2011

ಫೇಲ ಆದರೆ ಊರು... ಪಾಸ್ ಆದರೆ ಊರಿಂದ ದೂರು!!!

ಮೊದಲ ಬಾರಿಗೆ ಮನೆಯಿಂದ ಧೀರ್ಘಕಾಲ ದೂರವಾಗಿ ಮೈ ಮನಸ್ಸೆಲ್ಲಾ ಊರು ಊರು ಅಂತಾ ಇದೆ ! ಅಂತಹದರ ನಡುವೆ ಇ ಸಂದರ್ಶನ!
ನನ್ನ ಕಾಲೇಜು ಜೀವನದಲ್ಲಿ ವಾರಕ್ಕೆ ಎರಡು ಬಾರಿ ಮನೆಗೆ ಓಡಿ ಹೋಗುತ್ತಾ ಇದ್ದ ನಾನು ಎಲ್ಲರಿಂದಲೂ ಹೋಂ ಸಿಕ್ ಅನ್ನಿಸಿಕೊಳ್ಳುತ್ತಾ ಇದ್ದೆ. ಆದರೂ ಯಾರು ಏನೆ ಅಂದರು ನಾನು ಮನೆಗೆ ಹೋಗಿ ಅಮ್ಮನ ಮುಖ ನೋಡುವವರೆಗೂ, ತಂದೆ ಅಕ್ಕ ತಮ್ಮಂದಿರ ಜೊತೆ ಮಾತನಾಡದೆ ಸಮಾಧಾನ ಇರ್ತಿರಲಿಲ್ಲ ಮತ್ತು ಚಡ್ಡಿ :) ಗೆಳೆಯರ ಜೊತೆ ಕಾಲಕಳೆಯದೆ ಆಗುತ್ತಿರಲಿಲ್ಲ. ಮುಂದೆ ಕಾಲಕ್ರಮೇಣ ನನ್ನ ಕಾಲೇಜು ಜೀವನ ಮುಂದುವರೆದಂತೆ ಸ್ವಲ್ಪ ಮನೆಯಿಂದ ದೂರ ಇದ್ದು ಬದುಕಲು ಕಲಿತೆ ಆದರೂ ಕನಿಷ್ಠ ೧೫ ದಿನಗಳಿಂದ ಒಂದು ತಿಂಗಳಲ್ಲಿ ಒಮ್ಮೆ ಯಾದರು ಮನೆಗೆ ಹೋಗಲೇಬೇಕು! ಇದು ನನ್ನ ಮನಸ್ಸು!


ಆದರೆ ಒಮ್ಮೆಲೇ ನಾನು ಹೊರದೇಶಕ್ಕೆ ಹೋಗಬೇಕಾದ ಅನಿವಾರ್ಯತೆಯಿಂದಲೋ ಅಥವಾ ಒಮ್ಮೆ ಯಾದರು ಹೊರದೇಶಕ್ಕೆ ಹೋಗಬೇಕೆನ್ನುವ ಅಪೇಕ್ಷೆಯಿಂದಲೋ ಅಂತಹ ಪರಿಸ್ತಿತಿ ಬಂದಿತು. ನಾನು ದ್ವಂದ್ವ ನಿಲುವಿನಲ್ಲಿ ಎಷ್ಟು ದಿನಗಳವರೆಗೆ ಅಂತ ನನ್ನ ಮ್ಯಾನೇಜರ್ ಗೆ ಕೇಳಿ ಕೇವಲ ೩ ತಿಂಗಳು ಹೇಗಾದರೂ ಮಾಡಿ ಕಳೆಯಬಹುದು ಅನ್ನೋ ಯೋಚನೆಯಿಂದ ಒಪ್ಪಿಕೊಂಡು ಬಿಟ್ಟೆ. ಹೀಗೆ ನಾನು ಸ್ವೀಡನ್ ತಲುಪಿದೆ. ಇಲ್ಲಿಗೆ ಬಂದು ಮೊದಲ ಒಂದು ವಾರದವರೆಗೆ ಏನೋ ಹೊಸ ಸ್ತಳ, ಹೊಸ ಜನರು, ಹೊಸ ವಾತಾವರಣ ಅಂಥಾ ದೂಡಿದೆ ಅಲ್ಲಿಂದ ಮುಂದೆ ಪ್ರಾರಂಭವಾಯಿತು ನೋಡಿ ಮರಳಿ ಸ್ವದೇಶಕ್ಕೆ ಹೋಗುವ ದಿನಗಳ ಗಣನೆ [ಅದ್ಹೇನೋ ಹೇಳಲಿಕ್ಕೆ ಆಗದಿರುವಂತ ಒಂದು ಭಾವನೆ !]... ಅಂತು ಇಂತೂ ಕೆಲವು ಫೆಸಬುಕ್ ಗೆಳೆಯರ ಸಲಹೆಗಳಿಂದ ಮೊದಲು ಮೊದಲು ಹೀಗೆ ಆಗುತ್ತೆ ಚಿಂತೆ ಮಾಡಬೇಡ ಕೇವಲ ೩ ತಿಂಗಳು ತಾನೇ ಅನ್ನೋ ಮಾತುಗಳಿಂದ ಹೇಗೋ ದಿನಗಳನ್ನ ದೂಡುತ್ತಾ ಇದ್ದೆ.. ಆವಾಗಲೇ ಇಲ್ಲಿನ ಮ್ಯಾನೇಜರ್ ನನಗೆ ಒಂದು ಶಾಕ್ ಕೊಡುವ ಸುದ್ದಿಯೊಂದಿಗೆ ಬಂದಾ! ಅದೇನೆಂದರೆ ' your stay has been extended for 3 more months' ಅಂತ! ಇದನ್ನ ಕೇಳಿ ನನಗೆ ಇನ್ನೂ ಚಿಂತೆ ಅನ್ನಬೇಕೋ, ದುಃಖ ಅನ್ನಬೇಕೋ ಇಲ್ಲ ಊರಿನ ಸೆಳೆತ ಅನ್ನಬೇಕೋ ಒಟ್ಟಿನಲ್ಲಿ ನನ್ನ ಮನಸ್ಸು ಸದಾ ಗೊಂದಲಗಳ ಗೂಡಾಗಿಬಿಟ್ಟಿತು. ಯಾವಾಗಲು ಒಂದು ತರಹದ ವಿಚಿತ್ರ ಭಾವನೆಗಳಿಂದ ಕೊರಗುತ್ತಾ ಇದ್ದೀನಿ ಅನ್ನಿಸತೊಡಗಿತು! ಇನ್ನೂ ಹೀಗೆ ಮುಂದುವರೆದರೆ ಒಳ್ಳೆಯದಲ್ಲ ಅಂತ ತಿಳಿದು ಒಂದು ದಿನ ಧೈರ್ಯವಾಗಿ ಇಲ್ಲಿನ ಮ್ಯಾನೇಜರ್ ಗೆ ನನಗೆ ಇಲ್ಲಿ ಮುಂದುವರೆಯುವುದು ಕಷ್ಟ ಆಗುತ್ತಾ ಇದೆ ನಾನು ಮರಳಿ ನನ್ನ ದೇಶಕ್ಕೆ ಹೋಗುತ್ತೇನೆ ಅಂತ ತಿಳಿಸಿದೆ! ಅದಕ್ಕೆ ಆ ಆಸಾಮಿ ಒಪ್ಪಿಗೆಯೇನ್ನೂ ಕೊಡದೆ ಒಪ್ಪಿಗೆಯಿಲ್ಲ ಅಂತಾನು ಹೇಳದೆ ನೋಡೋಣ ಅಂತ ಅರ್ಧ ಗೋಡೆಯ ಮೇಲೆ ದೀಪವನ್ನು ಇಟ್ಟಂತೆ ಹೇಳಿದ!

ಸ್ವಲ್ಪ ದಿನಗಳ ನಂತರ ಒಂದು ವಿಚಿತ್ರ ಸನ್ನಿವೇಶ ಎದುರಾಯಿತು ! ನನ್ನ ಇಲ್ಲಿನ ಮ್ಯಾನೇಜರ್ ಬಂದು ಮುಂದಿನ ವಾರ ಒಂದು ಕ್ಲೈಂಟ್ ಸಂದರ್ಶನ ಇದೆ ಅದರಲ್ಲಿ ನೀನು ಸೆಲೆಕ್ಟ್ ಆದರೆ ಇನ್ನೂ ೩ ತಿಂಗಳು ಇಲ್ಲೇ ಇರಬೇಕಾಗುತ್ತೆ ಅಲ್ರೆಡಿ ನಿನ್ನ ಸಿವಿ ಸೆಲೆಕ್ಟ್ ಆಗಿದೆ ಅಂತ ಹೇಳಿದಾ... ಈಗೇನು ಮಾಡೋದು ಸಂದರ್ಶನದಲ್ಲಿ ಪಾಸ್ ಆದರೆ ಇಸ್ಟಾ ಇಲ್ಲದೆ ಇಲ್ಲೇ ಇರಬೇಕಾಗುತ್ತೆ ಫೆಲ ಆದರೆ ಮನೆಗಾದರೂ ಹೋಗಬಹುದು! ಜೀವನದಲ್ಲಿ ಇಲ್ಲಿವರೆಗೆ ಸಂದರ್ಶನಗಳಲ್ಲಿ ಪಾಸ್ ಅಗೊದು ಹೇಗೆ ಅಂತ ವಿಚಾರ ಮಾಡುತ್ತ ಇದ್ದರೆ ಇವಾಗ ಫೇಲ್ ಹೇಗೆ ಆಗಬೇಕು ಅನ್ನೋದೇ ಒಂದು ದೊಡ್ಡ ಸಮಸ್ಸೆಯಾಯಿತು! ಅದ್ಹೇಗೆ.. ಸರಿಯಾಗಿ ಉತ್ತರಗಳನ್ನ ನೀಡದೆ ಇದ್ದರಾಯಿತು ಅಂತಿರಾ ? ಅಲ್ಲಿ ಒಂದು ಸಮಸ್ಸೆ ಇದೆ ಅದೇನಂದರೆ ಸಂದರ್ಶನದ ವೇಳೆ ನನ್ನ ಜೊತೆ ಮ್ಯಾನೇಜರ್ ನಾನು ಬರುತ್ತೇನೆ ಅಂತ ಹೇಳಿ ಹೋಗಿದ್ದಾ...!

2 comments:

deepak's blog said...

prashant manassina aprashant vagiddu .. gondal shrushti, talamala mattu dwanda vichara.....vichitra, adbhuta, ananya ....

ಪ್ರಶಾಂತ ಯಾಳವಾರಮಠ said...

Deepak E gondhalagala sahayadinda nany fail aagi...ivag bengaluralli iddini :)