Monday, December 23, 2013

ಗುರು ರುದ್ರಪ್ಪ !

ಹಾಡು ಹಳೆಯದಾದರೆನೆಂದು
ಎದೆ ತುಂಬಿ ಹಾಡಿದ ಗುರು

ಯಾವ ಹಾಡು ಹಾಡಲಿಎಂದೆನುತ
ನೆಮ್ಮದಿಯ ಹಾಡು ನೀಡಿದ ಗುರು

ಕಲ್ಲು ಮಣ್ಣುಗಳ ಗುಡಿಎಂದೆನುತ
ಪ್ರೀತಿ ಸ್ನೇಹಗಳಲಿ ದೇವರನು ಕಂಡ ಗುರು

ನೀನು ಮುಗಿಲು ನಾನು ನೆಲವೆನ್ನುತ
ನೆಲವನ್ನೇ ವಾಹನ ಮಾಡಿದ ಗುರು

ಯಾವುದೋ ಪ್ರವಾಹದೊಂದಿಗೆ
ಕಾಣದ ಕಡಲನ್ನು ಶಿವನೂರನ್ನು
ಸೇರಿದ ಗುರು ರುದ್ರಪ್ಪಶಿವರುದ್ರಪ್ಪ!

Saturday, April 28, 2012

ದೊಡ್ಡಗೌಡರು!


                      ಹಣಮ್ಯಾ[ಹಣಮಂತ] ಮತ್ ಶರಣ್ಯಾ[ಶರಣಯ್ಯಾ] ಇಬ್ಬ್ರು ಚೆಡ್ಡಿ ದೊಸ್ತ್ರು! ಮುಂಜೆಲಿಯಿಂದ ಸಂಜಿತನಾ ಏನ ಮಾಡಿದ್ರೂ ಕೂಡೇ ಮಾಡ್ತಿದ್ರು. ಬಸವಣ್ಣನ ಗುಡ್ಯಾಗಿಂದ ಎದ್ದು ಬಗಲಾಗ್ ಮಡಚಿದ ಹಾಸಿಗಿ ಹಿಡ್ಕೊಂಡು ಮನಿಗೆ ಹೊಂಟರು ಹಣಮ್ಯಾ ಮತ್ ಶರಣ್ಯಾ... ಲೇ ಹಣಮ್ಯಾ ಹೆಂಡಿಕಸಾ ಲಗುಣ ಮಾಡ್ಕೊಂಡು ಬಾ ಲೇ ಇವತ್ತ ಸನಿವಾರೈತಿ ಸಾಲಿಗಿ ಲಗು ಹೊಗ್ಬೆಕ್ ಅಂತ  ಹಣಮ್ಯಾ ಅಂದ$ ತಮ್ಮ ಮನಿಗೆ ಹ್ಯೋದ.. ಇನ್ನೆನು ತನ್ನ ಮನಿ ಸಂದ್ಯಾಗ ಹೊಳ್ಳಬೆಕನ್ನುವಸ್ಟರಾಗ ಮೂಲಿಮನಿ ಮೆಳ್ಳಗನ್ನ ಮಲ್ಲಕ್ಕ ಹನಮ್ಯಾನ್ನ ನೊಡಿ ಹಲ್ಲಕಿಸದಳು... ಅಲಾ ಇವನೌನ್ ಮುಂಜ ಮುಂಜಾನೆ ಇಕೀ ನೊಡಿ ಹಲ್ಲಕಿಸದಳಲ್ಲಪಾ! ಇವತ್ತ ಏನ ಕಾದೈತ್ಯೊ ಯೆನೊ... ಅನಕೊತ ಮನಿಗೆ ಹೊದಾ... ಬಾಗಲ್ದಾಗ ಮುಸರಿ ತಿಕ್ಕಾಕತ್ತಿದ್ದ ಹನಮ್ಯಾನ ಅವ್ವ ಅಂಜವ್ವ ಯಾಕ್ಲಾ ನಿನಗ ಸ್ವಲ್ಪರ ಮಯ್ಯಾಗ ಕಬರೈತ್ಯೊ ಇಲ್ಲೊ ಯೆಸ್ಟೊತ್ತನ ಮಕ್ಕೊಳುದು ಹಂಗ ಇವತ್ ಸನಿವಾರ ಐತಿ ಸಾಲಿಗಿ ಲಗು ಹೊಗಬೆಕನ್ನುದ ಗೊತ್ತೈತಿಲ್ಲ..ಮತ್ ಮನೀ ಹೆಂಡಿಕಸಾ ಯಾರ್ ನಿಮ್ಮಪ್ಪ ಮಾಡ್ತಾನೆನ್ ಅಂತ್ ಬಯ್ಯಕತ್ತ್ಲು.. ಏ ಬಿಡ ಬೆ ಮುಂಜ ಮುಂಜಾನೆ ಬಯಬ್ಯಾಡ ನಾ ಏಲ್ಲಾ ಕೆಲ್ಸಾ ಮಾಡೀನ$$.. ಸಾಲಿಗಿ ಹೊಕ್ಕಿನಿ ಆತಿಲ್ಲೊ ಅಂದ ಮನಿ ಒಳಗ ಹೊದ.. ಎನ ಮಾಡ್ತಿ ನೊಡು ಹಂಗ ಹೊಗುಮುಂದ ದೊಡ್ಡ ಗೌಡರ ಮನಿಗೆ ಹಾಲಿನ ಚರಗಿ ಕೊಟ್ಟಹೊಗು ನಾನು ದನಕ್ಕ ಸ್ವಲ್ಪ ಹುಲ್ಲತೊಗೊಂಡ ಬರಾಕ ಹೊಂಟಿನಿ ಅಂತ ಅಂದು ಅಂಜವ್ವ ಕೆಲಸಾ ಮುಂದವರಿಸಿದ್ಲು...
                        ಹಣಮ್ಯಾ ಮತ್   ಶರಣ್ಯಾ ಇಬ್ಬರು ಹೆಂಡಿಕಸಾ ನ ತಿಪ್ಪಿಗೆ ಚೆಲ್ಲಿ ಅಲ್ಲೆ ಇದ್ದ ಬೆನ ಗಿಡದ ಕಡ್ಡಿಲೆ ಹಲ್ಲತಿಕ್ಕೊತ ಮನಿಗಿ ಬಂದ್ರು...  ಹಣಮ್ಯಾ ಮನಿ ಸಂದಿಕಡೆ ತಿರುಗು ಮುಂದ ಮತ್ ಅದ ಮೆಳ್ಳಗನ್ನ ಮಲ್ಲಕ್ಕನ  ನೊಡಿದಾ..!  ಹಣಮ್ಯಾ ಬಡ ಬಡ ಜಳಕಾ ಮಾಡಿ ಸಾಲಿಗಿ ಹೊಗಾಕ ರೆಡಿ ಆದ.. ಇನ್ನೆನ ಬಗಲಿಗೆ ಪಾಟಿಚಿಲಾ ಹಾಕ್ಕೊಂಡು ಸಾಲಿಕಡೆ ಒಡಬೆಕನ್ನುವಸ್ಟರಾಗ ಅವನ ಅವ್ವ ಅಂಜವ್ವ ಯಾಕ್ಲಾ ಹಾಲಿನ ಚೆರಿಗಿ ಮರತಿಯೆನ್ ಅಂದ್ಲು ಅಲಾ ಅದು ಒಂದ ಐತಿಲಾ ಅಂದ ಹಾಲಿನ ಚೆರಿಗಿ ತೊಗೊಂಡು ಗೌಡರ ಮನಿಕಡೆ ಒಡಿದಾ... ದೊಡ್ಡಗೌಡರು ಅಂದರೆ ಅನ್ನಪ್ಪಗೌಡರು ಆ ಹಳ್ಳಿಗೆ ದೊಡ್ಡವರು ಅಂದರೆ ಶ್ರಿಮಂತರು ನ್ಯಾಯಾ ಪಂಚಾಯತಿ ಮಾಡೊರು! ತುಂಬಾ ಒಳ್ಳೆಯವರು ಆದರೆ ಸಿಕ್ಕಾಪಟ್ಟಿ ಸಿಟ್ಟಿನೌರು! ಹರೆದಾಗ ಊರ ಗರಡ್ಯಾಗ ಗುಂಡಾ ಯತ್ತುದು ಕುಸ್ತಿ ಹಿಡಿದು ಮಾಡಿದೌರು ಮಸ್ತ ಕಟ್ಟಮಸ್ತ ದೇಹ ಬೆಳಿಸಿದೌರು! ಆದರ ಇಗ ಅದನ್ಯಲ್ಲಾ ಬಿಟ್ಟಮ್ಯಾಗ ಸಿಕ್ಕಾಪಟ್ಟಿ ಬೊಜ್ಜು ಬೆಳದು ಸುದ್ದ ೩೦೦ ಕೆ ಜಿ ತುಕತಾರ :) ಸರಿಯಾಗಿ ಅಡ್ಡ್ಯಾಡಾಕ್ ಬರಲಾರದ ಇವಾಗ ಮನ್ಯಾಗಿಂದ ಹೊರಗ ಬರುದಿಲ್ಲಾ ಅವರಿಗೆ ಇಗ ಎಲ್ಲಾ ಕುಂತಲ್ಲೆ ಆಗಬೆಕು! ಅಂದರ ಊಟಾ ಉಪಚಾರ ನಿದ್ದಿ ಮಾತು ಕತಿ ಏಲ್ಲಾ ಕುಂತಲ್ಲೆ! ಕೈಗೊಂದು ಕಾಲಿಗೊಂದು ಆಳ ಇದ್ದಿದ್ದರಿಂದ ಗೌಡರದು ಏಲ್ಲಾ ಚೆಲೊ ಹೊಂಟಿತ್ತು :) ಗೌಡರ ಮನಿ ದೊಡ್ಡ ಅರಮನಿ ತರಾ ಇತ್ತು ಆದರ ಅದ್ಯಾಕೊ ಗೊತ್ತಿಲ್ಲಾ ಅದರ ಬಾಗಲ ಮಾತ್ರ ಸನ್ನದಿತ್ತು!
                          ಹಣಮ್ಯಾ ಸಾಲಿಗಿ ಟೈಮ ಆಕೈತಿ ಅಂತೆಳಿ ಒಡಕೊತ ಗೌಡರ ಮನಿಗೆ ಬಂದ.. ಸಾಲಿಗಿ ಹೊಗಾಕತ್ತಿದಾಗಿನಿಂದ  ಹಣಮ್ಯಾ ವಟ್ಟ ಗೌಡರ ಮನಿಕಡೆ ಬಂದಿದ್ದಿಲ್ಲಾ ಬಂದವನ ಗೌಡರ ಮನಿವಳಗ ಹೊಗಿ ಗೌಡಶ್ಯಾನರ ಅಂತ ಕೂಗಿ ಹಾಲಿನ ಚೆರಗಿ ತೊಗೊರಿ ಅಂದ.. ಅಸ್ಟರಾಗ ಗೌಡರ ಕುಂತಲ್ಲಿಂದ ಲೆ ಹುಡಗಾ ಅಲ್ಲೆ ಬಿಸುಕಲ್ಲತ್ತೆಕಿನ ಕಟ್ಟಿಮ್ಯಾಗ ಇಡ್ ಅಂದರು  ಹಣಮ್ಯಾ ಇವರ ಯಾರಪ ಅನಕೊತ ಗೌಡರನ ನೊಡಿ ದಂಗಬಡದ ನಿಂತಾ! ಏಲಾ ಇವನೌನ ಏಸ್ಟದಪ್ಪ ಅದಾರೊ ಮರಾಯ ಅಂತ ಮನಸ್ನ್ಯಾಗ ಅನ್ಕೊಳಾಕತ್ತ ಹಾಲಿನ ಚೆರಿಗಿ ಅಲ್ಲಿ ಇಟ್ಟು ಸಾಲಿಟೈಮನು ಮರತ ಗೌಡರನ ಒಂದ ಸಮನ ನೊಡಕೊತ ನಿಂತ.. ಮದಲ ಹುಡಗ ಬುದ್ದಿ ಏನೆನೊ ವಿಚಾರ ಮಾಡ್ಕೊತ ಗೌಡರು ಹಂಗ ಇರುದನ್ನ ನೊಡಿ ಮನಸ್ನ್ಯಾಗ ನಕ್ಕಾ! ಆತು ಇನ್ನೆನ ಹೊರಗ ಹೊಗಬೆಕು ಅನ್ನುವಸ್ಟರಾಗ ಗೌಡರ ಮನಿ ಬಾಕಲಾ ನೊಡಿದಾ ಅದು ಸನ್ನದಿತ್ತು!  ಹಣಮ್ಯಾ ಸಾಲಿನ ಅಲ್ಲೆ ಬಿಟ್ಟು ಗೌಡರ ಬಗ್ಗೆ ಒಂದ ಚಿಂತಿ ಮಾಡಾಕತ್ತ! ಅದೆನಪಾ ಅಂದರ ಗೌಡರರ ಇಸ್ಟ ದಪ್ಪ ಅದಾರ ಬಾಕಲರ ಇಸ್ಟ ಸನ್ನದೈತಿ.. ನಾಳೆ ಗೌಡರೆನರ ಶಿವನಪಾದಾ ಸೆರಿದರ ಹೆಂಗ! ಅನ್ನುದು. ಅಸ್ಟ ವಿಚಾರ ಮಾಡಿ ಸುಮ್ನ ಹೊಗುದು ಬಿಟ್ಟು  ಹಣಮ್ಯಾ ಮಗಾ ಅಲ್ಲೆ ಹೊರಗ ಗೌಡರ ಏತ್ತಿನ ಮೈ ತೊಳ್ಯಾಕತ್ತಿದ್ದ ಭಜಂತ್ರಿ ಯಮನಪ್ಪನ ಹತ್ರ ಕೆಳೆ ಬಿಟ್ಟ! ಅದೆನೊ ಅಂತಾರಲ್ಲ  ತಡಕೊಳಲಾರದಕ್ಕ ಜಿಗದ ಗೊಡ್ಯಾನ ಗುಟಕ್ ಕುಂತರಂತ! :) ಹಂಗಾತ  ಹಣಮ್ಯಾನ ಬಾಳೆ.. ಯಾಕಂದರ ಅವರ ಗೌಡ್ರ ಬಗ್ಗೆ ಹಂತಾ ಮಾತ ಅಂದಿದ್ದಕ್ಕ ಯಮನಪ್ಪಗ ಸಿಕ್ಕಾಪಟ್ಟೆ ಸಿಟ್ಟಬಂತು ಸೀದಾ  ಹಣಮ್ಯಾನ ಹಿಡಕೊಂಡ ಗೌಡರ ಹತ್ರ ಹೊಗೆಬಿಟ್ಟಾ.. ಮೊದಲ ಗೌಡರ ಸಿಟ್ಟ ಹೆಂತಾದು ಅಂದರ ಮುಗಿನಮ್ಯಾಲಿಕಿಂತ ಒಂದಿಸ್ಟ ಮುಂದ ಇತ್ತು! ಇನ್ನ ಹಿಂಗ ಅಂದಿದ್ದನ್ ಕೆಳಿ ಅವರಿಗೆ ಕುಂತ ಕಾಟಾದ ಕಾಲಿನಿಂದ ತಲಿಮ್ಯಾಗಿನ ಜಂತಿ ಮಟಾ ಉರದೊತು! ಹತ್ತಿ$$ ಉರಕೊಂಡ ಗೌಡರು  ಹಣಮ್ಯಾನ ಅಲ್ಲೆ ಕಂಬ ಕಟ್ಟಿ.. ಸೂ.. ಮ..  ಬಾರಕೊಲಲೆ ಯಾಡ್ ಕಟಿರಲೆ ಅಂತ ಆಳ ಮನಶ್ಯಾರಿಗೆ ಆದ್ನೆ ಮಾಡಿಬಿಟ್ಟರುಇಕಾಡೆ ನಸಕನ್ಯಾಗ ಹೊಲಕ್ಕ ಹೊಗಿ ರೆಂಟಿ ಹೊಡ್ಯಾಕತ್ತಿದ್ದ  ಹಣಮ್ಯಾನ ಅಪ್ಪಾ ಶಂಕರಪ್ಪಗ ಸುದ್ದಿತಿಳದ ಒಂದ ಉಸಿರನ್ಯಾಗ ಒಡಕೊತ ಗೌಡರ ಮನಿಗೆ ಬಂದ ಗೌಡರ ಕಾಲಿಗಿ ಬಿದ್ದ ಯಾಕರಿ ಏಪ್ಪಾ ಯಾಕ ನನ್ನ ಮಗನ್ನ ಹಿಂಗ ಹೊಡ್ಯಾಕತ್ತಿರಿ ಅಂತ ಕೆಳಿದ, "ಯಾಕಾ.. ಅವನೌನ ಸನ್ನ ಹುಡಗದಾನಂತ ಸುಮ್ಮ ಬಿಟ್ಟಿನಿ.. ಕೆಳ್ ಅವನಿಗೆ ಅವಾ ನನಗ ಏನ್ ಅಂದಾನಂತ" ಅಂತ ಗೌಡರು ಗುಡಗಿದರು..
ಶಂಕರಪ್ಪಾ ಹಣಮ್ಯಾನಂತೆಕ ಬಂದು ಯಾಕ್ಲೆ ಏನ ಅಂದಿ ಗೌಡರಿಗೆ ಅಂತ ಬಯ್ಯಾಕತ್ತಿದಾ "ಏಪ್ಪಾ... ನಾನ ಏನು ಅಂದಿಲ್ಲಾ.. ಗೌಡರರ ಇಸ್ಟ ದಪ್ಪ ಅದಾರ ಆದರ ಗೌಡರ ಮನಿ ಬಾಕಲರ ಹಿಂಗ ಸನ್ನದೈತಿ ನಾಳೆ ಗೌಡರು ಸತ್ತರಂದರ ಅವರನ್ನ ಹೊರಗ ಹೆಂಗತರತಿರಿ ಅಂತ ಯಮನಪ್ಪನ ಕೆಳಿದ್ಯಾ ಅಸ್ಟ!" ಅಂದ. ಇದನ್ನ ಕೆಳಿ ಶಂಕರಪ್ಪಗು ನಗು ಬಂದ ಬಾಯಾನ ಮಾತ ತಡಕೊಳಾಲರದ "ಅಲ್ಲಲೆ ಅದಕ್ಕ್ಯಾಕ ಚಿಂತಿ ಮಾಡತಿ ಗೌಡರನ್ನ ಅಲ್ಲೆ ಮನ್ಯಾಗ ಸನ್ನಂಗ ಕೊಡ್ಲಿಲೆ ಕಡದ [ಕತ್ತರಿಸಿ] ಹೊರಗ ತಂದರಾತಪಾ" ಅಂತ ಅಂದ ಬಿಟ್ಟಾ!! ಹಣಮ್ಯಾರಪ್ಪ ಅಂದಿದ್ದ ಮಾತ ಕೆಳಿದ ಗೌಡರಿಗೆ ಹಸಿ ಮೆನಸಿನಕಾಯಿ ಶಿಕರಣಿ ಕುಡದಂಗಾತು :) ಸಿಟ್ಟ ತಡಕೊಳಲಾರದ ಕುಂತಲ್ಲೆ ಲೆ ಯಮನ್ಯಾ ತಾರಲೆ ಇಲ್ಲಿ ಬಾರಕೊಲ ತಾಲೆ ಇಲ್ಲಿ ಇವರಿಬ್ಬರ್ದು ಚೆರಮಾ ಸುಲದ ಬಿಡತಿನಿ ಇವತ್ತು ಅಂದು ಜೊರ ಬಾಯಿ ಮಾಡಿ ಒದರಾಡಕತ್ತರು.. ಇಬ್ಬರನ್ನು ಕಂಬಕ್ಕ ಕಟ್ಟಿಸಿ ಹೊಡ್ಯಾಕ ಹಚ್ಚಿದ್ರು.. ಯಮನ್ಯಾಗು ಇಸ್ಟ ಬೆಕಾಗಿತ್ತು ಯಾಕಂದರ ಶಂಕರಪ್ಪನ ಮ್ಯಾಗ ಹಳೆ ಸಿಟ್ಟು ಇತ್ತು ಅದೆನಂದರ... ಹಿಂದಕ ಯಮನ್ಯಾ ಶಂಕರಪ್ಪಾರ ಹೊಲದಾಗ ಸುಲಗಾಯಿ ಕಿತ್ತಿದ್ದರ ಸಮಂದ ಶಂಕರಪ್ಪನ ಕೈಲೆ ಹಿಗ್ಗಾ ಮುಗ್ಗಾ ಹೊಡಸಕೊಂಡಿದ್ದಾ.. ಇದ ಚಾನ್ಸ ನಿಂದರಂತ ಯಮನ್ಯಾ ಒಂದ ಕೈ ಹೆಚ್ಚಿಗೆನ ಹೊಡದ!
                       ಇಬ್ಬರು ಅಪ್ಪಾ ಮಗನ್ನ ಗೌಡರ ಹೊಡಸಾಕತ್ತಿದ್ದ ಸುದ್ದಿ ಶಂಕರಪ್ಪಾರ ಅಪ್ಪಾ ಬಸಪ್ಪಗ ಮುಟ್ಟಿತು.. ರಾತ್ರಿ ಅಲ್ಲೆ ಮಸುತ್ಯಾಗ ಮಕ್ಕೊಂದು ಇಗ ಏದ್ದು ಅಲ್ಲೆ ತನ್ನ ಹಳೆ ಮನಸಿನ ದೊಸ್ತರ ಜೊಡಿ ಹರಟಿ ಹೊಡಕೊತ ಕುಂತಿದ್ದ ಬಸಪ್ಪಾ.. ಇ ಸುದ್ದಿ ಕೆಳಿ ದಿಗಲ ಬಡದಂಗಾಗಿ ಏದ್ನ್ಯೊ ಬಿದ್ನ್ಯೊ ಅಂತ ಗೌಡರ ಮನಿಕಡೆ ಒಡಿದಾ.. ಹೊಗಿ ಅಪ್ಪಾರ ಯಾಕರಿ ಹಿಂಗ ಹೊಡಸಾಕತ್ತಿರಿ ನನ್ನ ಮಕ್ಕಳನ್ನ ಅದು ಮುಂಜಾನೆ ಮುಂಜನೆನ ಯಾಕರಿ ಅಪ್ಪಾರ ಅಂತ ಕೆಳಿದಾ... ಗೌಡರಿಗೆ ಅವರಂದಿದ್ದ ಮಾತ ಇವನ ಮುಂದ ಹೆಳಾಕಾಗಲಾರದ ನಿನ ಕೆಳ್ ಹೊಗು ಅಂತ ಅಂದರು. ಬಸಪ್ಪಾ ಮಗಾ ಶಂಕರಪ್ಪಾ ಮತ್ ಮೊಮ್ಮಗ ಹಣಮ್ಯಾನತ್ರ ಬಂದು ಯಾಕಲ್ರೆ ಯೆನ್ ಅಂದಿರಿ ಅಂದ.. ಶಂಕರಪ್ಪ ತಾವು ಅಂದಿದ್ದನ್ನ ಮತ್ತ ನಡದಿದ್ದನ್ನ ಹೆಳಿದಾ.. ಇವರಂದಿದ್ದನ್ನ ಕೆಳಿ ಬಸಪ್ಪಗು ಸಿಕ್ಕಾಪಟ್ಟಿ ಸಿಟ್ಟಬಂತು " ಅಲ್ಲರ್ಲೆ.. ಸೂ..ಮ.. ಗೌಡರ ಸಾಯು ವಿಚಾರ ನಿಮಗ್ಯಾಕ ಬೆಕಲ್ರೆ ನಿಮ್ಮ ಕೆಲಸಾ ನಿಮಗ ನೊಡಾಕ ಬರ್ತೈತಿಲ್ಲ.. ಅಸ್ಟಕ್ಕೂ ಹಂಗೆನರ ಗೌಡರು ಸತ್ತ ಹೊದರಪಾ ಅಂದರ ಇಲ್ಲೆ ಮನ್ಯಾಗ ಸಾಗವಾನಿ ಕಿಡಕಿ .. ಬಾಕಲಾ.. ಅದಾವು ಅವನ್ನೆಲ್ಲಾ ತೊಗೊಂಡು ಇಲ್ಲೆ ಮನ್ಯಾಗ ಗೌಡರನ್ನ ಸುಟ್ಟರಾತು ಅದೆಲ್ಲಾ ನಿಮಗ್ಯಾಕಲ್ರೆ" ಅಂತ ಅಂದ. ಇನ್ನ ಗೌಡರಗೆ ಇ ಮಾತ ಕೆಳಿ ಇವರನ್ನ ಏನ ಮಾಡಬೆಕಂತ ತಿಳಿಲಿಲ್ಲಾ ಆದರ ಸಿಟ್ಟರ ಏಸ್ಟ ಬಂದೈತಿ ಅಂದರ... ಸಿಟ್ಟಿಲೆ ಇ ಮೂರು ಮಂದಿ ಸೂ... ಮಕ್ಕಳನ್ನ ಒಳಗ ಕತ್ತಲ ಕೊಣ್ಯಾಗ ಹಾಕಿ ಬಿಡರಲೆ ಅನ್ನಾ ನಿರ ಏನು ಕೊಡಬ್ಯಾಡರಿ ಅಂತ ಆಳ ಮನ್ಯಶ್ಯಾರಿಗೆ ಹೆಳಿದರು. ಮದ್ಯಾನ ಆತು.. ಸಂಜಿ ಆತು.. ಗೌಡರ ಸಿಟ್ಟ ಇನ್ನು ಹಂಗ ಇತ್ತು ಇ ಸುದ್ದಿ ಇಡೀ ಊರಿಗೆ ಗೊತ್ತಾತು..
                        ಹಣಮ್ಯಾನ ದೊಸ್ತ  ಶರಣ್ಯಾನ  ಅ ಪ್ಪಾ ಮತ್ತ ಶಂಕರಪ್ಪಾ ಇಬ್ಬರು ದೊಸ್ತರು,ಮೂರು ಮಂದಿನ ಕತ್ತಲ ಕೊನ್ಯಾಗ ಹಾಕಿದ ಸುದ್ದಿನ  ಶರಣ್ಯಾ ಅವರಪ್ಪಗ ಹೆಳಿದಾ.. ಇದನ್ನ ಕೆಳಿ  ಶರಣ್ಯಾರಪ್ಪ ಗೌಡರತ್ತೆಕ ಬಂದು "ಗೌಡರ ಮೂರೂ ಮಂದಿದು ತಪ್ಪ ಆಗೈತಿರಿ ಇದೊಂದ ಸಲಾ ಬಿಟ್ಟಬಿಡರಿ ಅವರಿಗೆ ನಾನು ಒದ್ದು ಬುದ್ದಿ ಹೆಳತಿನಿರಿ ಅಂತ ಗೌಡರ ಕಾಲಿಗಿ ಬಿದ್ದ ಕೆಳಕೊಂಡ ಅಸ್ಟೊತ್ತಿಗೆ ಗೌಡರದು ಸಿಟ್ಟ ಸ್ವಲ್ಪ ಕಡಿಮಿ ಆಗಿತ್ತು.. "ಆತು ನಿನ ಹೆಳಾಕತ್ತಿ ಅಂತ ಹೆಳಿ ಬಿಡತಿನಿ ಇ ಸೂ.. ಮ.. ಇಲ್ಲಾ ಅಂದರ ಇಲ್ಲೆ ಮನ್ನ ಮಾಡತಿದ್ದಿನಿ" ಅಂತ ಅಂದು ಗೌಡರು ಸ್ವಲ್ಪ ತನ್ನಗಾದರು ಮೂರೂ ಮಂದಿನ ಬಿಟ್ಟರು!
                   ಗೌಡರ ಮನಿಯಿಂದ ಹೊರಗಹೊಗುಮುಂದ ನಡದಿದ್ದನ್ನ ಶಂಕರಪ್ಪ  ಶರಣ್ಯಾರಪ್ಪಗ ಹೆಳಿದಾ.. ಇದನ್ನ ಕೆಳಿದ ಹಣಮ್ಯಾನ  ದೊಸ್ತ  ಶರಣ್ಯಾ.. ಪ್ರಶ್ನೆಯೆಲ್ಲಾ ಕರೆಕ್ಟ್ ಐತಿ.. ಗೌಡರು ಸತ್ತರಂದರ ಇಡೀ ಮನಿಗೆ ಉ .... ಅಂತ ಮನಸ್ನ್ಯಾಗ ಏನ ಅನಕೊತ ಹೊದಾ!!!.


Saturday, March 24, 2012

'ಹಾಚಿ' !

ಆ ದೇವರು ಪ್ರೀತಿ ವಿಶ್ವಾಸವನ್ನು ಎಲ್ಲಿ.. ಹೇಗೆ.. ಯಾಕೆ..ಸೃಷ್ಟಿಸುತ್ತಾನೋ.. ಅದು ಅವನಿಗೇ ಗೊತ್ತು!

               ಪ್ರೊಫೆಸರ್ ಹೈದೆಸಬುರೋ ಯುನೋ ತಮ್ಮ ದೈನಂದಿನ ಕೆಲಸವಾದ ನೃತ್ಯ ಕಲಿಸುವುದನ್ನು ಮುಗಿಸಿ ಎಂದಿನಂತೆ ದಿನಾಲೂ ಬರುವ ಟ್ರೆನಿನಿಂದ ಸಂಜೆ ತಮ್ಮ ಮನೆಯ ಕಡೆಗೆ ಹೊರಟರು. ತಮ್ಮ ಸ್ಟೇಷನ್ ಬಂದಮೇಲೆ ಇಳಿದು ಇನ್ನೇನು ಹೊರಗೆ ಹೋಗಬೇಕೆನ್ನುವಸ್ಟರಲ್ಲಿ ಅವರ ಕಾಲುಗಳ ಹತ್ತಿರ ಒಂದು ಅಚ್ಚರಿ!! ಒಂದು ಮುದ್ದು ಮುದ್ದಾದ ನಾಯಿ ಮರಿ ಅವರ ಕಾಲುಗಳ ಹತ್ತಿರ ಓಡಾಡುತ್ತಿತ್ತು. ತುಂಬಾ ಮುದ್ದಾದ ನಾಯಿ ಮರಿಯ ಮುಗ್ದತೆ ಮತ್ತು ಸೌಂದರ್ಯಕ್ಕೆ ಮನಸೋತ ಪ್ರೊಫೆಸರ್ ಅದನ್ನ ಎತ್ತಿ ಮುದ್ದಾಡಿದರು. ಮುಂದೆ ಅಯ್ಯೋ ಇದು ಇದರ ಮಾಲಿಕನಿಂದ ಕಣ್ ತಪ್ಪಿಸಿಕೊಂಡಿರಬೇಕೆಂದು ಸ್ಟೇಷನ್ನಲ್ಲಿ ಎಲ್ಲರನ್ನು ವಿಚಾರಿಸಿದರು ಕೊನೆಗೆ ಸ್ಟೇಷನ್ ಮಾಸ್ತರ್ ಹತ್ತಿರನು ವಿಚಾರಿಸಿದರು ಯಾವುದೇ ಸುಳಿವು ಸಿಗಲಿಲ್ಲ. ಸ್ಟೇಷನ್ ಮಾಸ್ತರನು ಎಲ್ಲರೂ ಇಲ್ಲಿ ಊಟದ ಡಬ್ಬಿಗಳನ್ನು ಇಡುತ್ತಾರೆ ಅದ್ದರಿಂದ ನಾನು ಇದನ್ನು ಇಲ್ಲಿ ಇರಿಸಿಕೊಳ್ಳಲಿಕ್ಕೆ ಆಗೋದಿಲ್ಲ ಎಂದು ಹೇಳಿ ನೀವು ಬೇಕಾದರೆ ಇವತ್ತು ಇದನ್ನು ಮನೆಗೆ ತೆಗೆದುಕೊಂಡು ಹೋಗಿ ನಾಳೆ ಯಾರಾದರು ಇದರ ಮಾಲಿಕರು ಬರುತ್ತಾರೆನೋ ನೋಡೋಣ ಎಂದನು. ಅಸ್ಟು ಮುದ್ದಾದ ಆ ಮರಿಯೇನ್ನು ಅಲ್ಲಿಯೇ ಎಲ್ಲಾದರು ಬಿಟ್ಟು ಹೋಗಲಿಕ್ಕೆ ಪ್ರೊಫೆಸರ್ ಗೆ ಮನಸ್ಸಾಗಲಿಲ್ಲ. ಮರಿಯನ್ನು ತೆಗೆದುಕೊಂಡು ಮನೆಗೆ ಹೋದರು. ಆದರೆ ಮನೆಯಲ್ಲೊಂದು ತೊಂದರೆ! ಏನೆಂದರೆ ಪ್ರೊಫೆಸರ್ ಪತ್ನಿಗೆ ನಾಯಿಗಳು ಅಂದರೆ ಆಗ್ತಾ ಇರಲಿಲ್ಲ.ಇನ್ನು ಇ ಮರಿಯೇನ್ನು ಅವಳಿಗೆ ತಿಳಿಯದ ಹಾಗೆ ಬಚ್ಚಿಟ್ಟು ನಾಳೆ ಸ್ಟೇಷನ್ ಗೆ ತೆಗೆದುಕೊಂಡು ಹೋಗಿ ಅದರ ಮಾಲಿಕರಿಗೆ ಕೊಟ್ಟರಾಯಿತು ಎಂದು ತಿಳಿದರು. ನಿದಾನವಾಗಿ ಮನೆಯೊಳಗೇ ಹೋಗಿ ಇ ಮುದ್ದಾದ ಮರಿಯೇನ್ನು ಒಂದು ಮುಚ್ಚಳವಿಲ್ಲದ ಕಟ್ಟಿಗೆಯ ಬಾಕ್ಸ್ ನಲ್ಲಿ ಮಲಗಿಸಿದರು. ಆದರೆ ಆ ಮರಿ ಎಸ್ಟೊಂದು ಚೂಟಿಯಾಗಿತ್ತು ಅಂದರೆ ಕಟ್ಟಿಗೆಯ ಬಾಕ್ಸ್ ನಿಂದ ಹೊರಗೆ ಬಂದು ಬಿಡುತಿತ್ತು! ಅದನ್ನು ಮತ್ತೆ ಅದರಲ್ಲೇ ಬಚ್ಚಿಟ್ಟರು... ಅಷ್ಟರಲ್ಲಿ ಅವರ ಪತ್ನಿ ಅವರಲ್ಲಿಗೆ ಬಂದು ಊಟಕ್ಕೆ ಕರೆದಳು.. ಪ್ರೊಫೆಸರ್ ಊಟವಾದ ಮೇಲೆ ಮಲಗಲು ತೆರಳಿದರು. ಆ ನಾಯಿ ಮರಿಯು ರಾತ್ರಿ ಬಾಕ್ಸ್ ನಿಂದ ಹೊರಗೆ ಬಂದು ನೇರವಾಗಿ ಪ್ರೊಫೆಸರ್ ಮಲಗಿರುವ ಕೊನೆಗೆ ಹೋಗಲು ಅದರಬಗ್ಗೆ ಪ್ರೊಫೆಸರ್ ಪತ್ನಿಗೆ ತಿಳಿದು ಹೋಯಿತು. ಸಿಟ್ಟಿನಲ್ಲಿದ್ದ ಪತ್ನಿಗೆ ವಿಷಯ ತಿಳಿಸಿ ನಡೆದದ್ದನ್ನು ಹೇಳಿ ಕೇವಲ ಒಂದು ದಿನ ಅಷ್ಟೇ ಎಂದು ಸಮಜಾಯಿಸಿದರು.

                  ಬೆಳೆಗ್ಗೆ ತಮ್ಮ ದೈನಂದಿನ ರೂಡಿಯ ಹಾಗೆ ತಯಾರಾದ ಪ್ರೊಫೆಸರ್ ಆ ಮುದ್ದಾದ 'ನಾಯಿಮರಿ'ಯನ್ನು ತೆಗೆದುಕೊಂಡು ಮತ್ತೆ ಸ್ಟೇಷನ್ಗೆ ಹೋದರು ಅಲ್ಲಿ ಯಾರಾದರು ಇ ಮರಿಯ ಬಗ್ಗೆ ವಿಚಾರಿಸಿದ್ದಾರೋ ಏನೋ ಎಂದು ಎಲ್ಲಕಡೆ ಕೇಳಿದರು ಟೀ ಸ್ಟಾಲ್ ಮಾಲಿಕನನ್ನು, ಸ್ಟೇಷನ್ ಮಾಸ್ತರ್ ರನ್ನು ಕೇಳಿದರು ಆದರೆ ಯಾರು ವಿಚಾರಿಸಿರಲಿಲ್ಲಾ! ಇತ್ತ ಮತ್ತೆ ತಮ್ಮ ದೈನಂದಿನ ಟ್ರೇನ್ ಬಿಡುವ ಸಮಯವಾಗುತ್ತ ಬಂತು ಅವಸರದಲ್ಲಿ ಏನು ಮಾಡೋದು ಅಂದು ಟ್ರೇನ್ ಅಲ್ಲಿ ನಾಯಿಗಳಿಗೆ ಪ್ರವೇಶವಿಲ್ಲದಿದ್ದರು ಸ್ಟೇಷನ್ ಮಾಸ್ತರ್ ಹತ್ತಿರ ರಿಕ್ವೆಸ್ಟ್ ಮಾಡಿಕೊಂಡು ವಿದಿಯಿಲ್ಲದೆ ತಮ್ಮ ಜೊತೇನೆ ತೆಗೆದುಕೊಂಡು ಹೋದರು. ಸಂಜೆ ಮತ್ತೆ ಅದೇ ಕಾಯಕ ಸ್ಟೇಷನ್ ಅಲ್ಲಿ ವಿಚಾರಿಸೋದು! ಆದರೆ ಏನು ಉಪಯೋಗವಾಗಲಿಲ್ಲ ಮತ್ತೆ ಮನೆಯಲ್ಲಿ ಹೆಂಡತಿಯಿಂದ ಬೈಗುಳಗಳು.. ಅದಕ್ಕೋಸ್ಕರ ಒಂದು ಪ್ಲ್ಯಾನ್ ಮಾಡಿ ಆ ನಾಯಿಮರಿಯ ಚಿತ್ರವನ್ನು ತೆಗೆದು ಅದರ ಕೆಳಗೆ ಸಂಪರ್ಕಿಸಬೇಕಾದ ಟೆಲಿಫೋನ್ ನಂಬರ್ ಬರೆದು ಎಲ್ಲ ಕಡೆ ಅಂಟಿಸಿದರು ಸ್ಟೇಷನ್ ಅಲ್ಲಿ, ಟೀ ಸ್ಟಾಲ್ ಅಲ್ಲಿ, ಹತ್ತಿರದ ಅಂಗಡಿಯಲ್ಲಿ ಮತ್ತು ಸ್ಟೇಷನ್ ಮುಂದಿನ ಗಾರ್ಡನ್ನಲ್ಲಿ ಅಂಟಿಸಿದರು... ಅದರ ಮಾಲೀಕ ಇದನ್ನು ನೋಡಿಯಾದರೋ ಅಥವಾ ಯಾರಾದರು ನೋಡಿ ಅದರ ಮಾಲಿಕನಿಗೆ ತಿಲಿಸುತ್ತಾರೆಂಬ ಆಶಯ! ಆದರೆ ಇಂಥಹ ಯಾವ ಪ್ರಯತ್ನಗಳು ಸಹಾಯಮಾಡಲಿಲ್ಲ..ಒಂದು ದಿನ ಪ್ರೊಫೆಸರ್ ಆ ನಾಯಿಮರಿಯ ಪೆಟ್ಟಿಗೆಯ ಮೇಲೆ ಅಂಟಿಸಿದ್ದ ಜಪಾನಿ ಭಾಷೆಯಲ್ಲಿದ್ದ ಚೀಟಿಯನ್ನು ತೆಗೆದುಕೊಂಡು ತಮ್ಮ ಗೆಳೆಯರಾದ ಮತ್ತು ಫೈಟ್ ಮಾಸ್ತರಾದ ವ್ಯಕ್ತಿಯ ಹತ್ತಿರ ಹೋಗಿ ನಾಯಿಮರಿಯ ಮೂಲ ಮತ್ತು ಮಾಲಿಕನನ್ನು ತಿಳಿಯಲು ಪ್ರಯತ್ನಿಸಿದರು.. ಫೈಟ್ ಮಾಸ್ತರ್ ಆ ಚೀಟಿಯನ್ನು ಓದಿ ಅದು ಜಪಾನಿನಿಂದ ಬೇರೆಡೆಗೆ ಕಳಿಸಲು ಉಪಯೋಗಿಸಿದ್ದೆಂದು ಮತ್ತು ಅದರ ಕುತ್ತಿಗೆಯಲ್ಲಿ ಕಟ್ಟಿರುವು ಚಿನ್ಹೆ ಜಪಾಟೆ ಪ್ರೊಫೆಸರ್ ಅಂದರೆ ಎಲ್ಲಿಲ್ಲದ ಖುಷಿ ಪಂಚಪ್ರಾಣ ಪ್ರೊಫೆಸರ್ ಎಲ್ಲಿಯೇ ಹೋಗಲಿ ಅಲ್ಲಿಗೆ ಹಾಚಿ ಹೋಗಿಯೇ ಹೋಗುತ್ತಿತ್ತು ಅವರ ಜೊತೇನೆ ಇರುತ್ತಿತ್ತು...

                    ಮರಿ ಹಾಚಿಯು ಬೆಳೆದು ದೊಡ್ಡದಾಯಿತು ದಿನಾಲು ಮುಂಜಾನೆ ಪ್ರೊಫೆಸರ್, ಅವರ ಹೆಂಡತಿ ಮಕ್ಕಳ ಜೊತೆ ಆಟವಾಡುವುದು, ಮನೆಯ ಹತ್ತಿರ ಓಡಾಡುವುದು ಇನ್ನಿಲ್ಲದ  ಚೇಷ್ಟೆ ಮಾಡೋದು ಅದರ ರುಟೀನ ಆಗಿತ್ತು..ಪ್ರೊಫೆಸರ್ ತಮ್ಮ ಕೆಲಸಕ್ಕೆ ಹೋಗಲು ದಿನಾಲು ಟ್ರೈನ್ ಬಳಸುತ್ತಿದ್ದರು ಹಾಚಿ ಒಂದು ದಿನವು ತಪ್ಪದೆ ಮುಂಜಾನೆ ಅವರನ್ನು ಸ್ಟೇಷನ್ ಗೆ ಬಿಡಲು ಹೋಗುತ್ತಿತ್ತು ದಾರಿಯುದ್ದಕ್ಕೂ ಪ್ರೊಫೆಸರ್ ಜೊತೆ ಆಟವಾಡುತ್ತ ಹೋಗುತ್ತಿತ್ತು ಪ್ರೊಫೆಸರ್ ಹಾಚಿ ಜೊತೆಗೂಡಿ ಚಿಕ್ಕಮಕ್ಕಳ ತರಹವಾಗಿರುವುದನ್ನು ಬೀದಿಯ ಜನ ನೋಡಿ ಸಂತೋಷಪಡುತ್ತಿದ್ದರು.. ಸಂಜೆ ಟ್ರೇನ್ ಬರುವ ವೇಳೆಗೆ ಸರಿಯಾಗಿ ಹಾಚಿ ಸ್ಟೇಷನ್ ಮುಂದಿನ ಕಟ್ಟೆಯ ಮೇಲೆ ಕುಳಿತುಕೊಂಡು ಕಾಯುತ್ತಿತ್ತು! ಒಂದು ದಿನ ಪ್ರೊಫೆಸರ್ ಅವಸರದಿಂದಾಗಿ ಹಾಚಿಯನ್ನು ಮನೆಯಲ್ಲೇ ಬಿಟ್ಟು ಮನೆಯ ಮುಂದಿನ ಗೆಟನ್ನು ಮುಚ್ಚಿಕೊಂಡು ಹೋದರು ಆದರೆ ಹಾಚಿಗೆ ಹೋಗದೆ ಇರುವುದಕ್ಕಾಗದೆ ಸ್ಟೇಷನ್ ಗೆ ಹೋಗಲೇಬೇಕೆಂದು ಕಟ್ಟಿಗೆಯಿಂದ ಮಾಡಿದ್ದ ಬೇಲಿಯ ಕೆಳಗೆ ಬಿಲವನ್ನು ಕೊರೆದು ಸ್ಟೇಷನ್ ಗೆ ಓಡಿಹೋಗಿ ಅವರಜೊತೆ ಸೇರಿಕೊಂಡಿತ್ತು! ಹೀಗೆ ಇಸ್ಟೊಂದು ಅನ್ನ್ಯೋನ್ಯ ವಾಗಿರುವಬಗ್ಗೆ ಸ್ಟೇಷನ್ ಅಲ್ಲಿ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು ಹಾಚಿ ಪ್ರೊಫೆಸರ್ ಕೆಲಸಕ್ಕೆ ಹೋದಮೇಲೆ ಸ್ಟೇಷನ್ ಮುಂದೆ ಇರುವ ಕಟ್ಟೆಯ ಮೇಲೆ ಸ್ವಲ್ಪ ಹೊತ್ತು ಕುಳಿತುಕೊಂಡು ಮನೆಗೆ ಹೋಗುತ್ತಿತ್ತು. ಮತ್ತೆ ಸಂಜೆ ಟ್ರೇನ್ ಬರುವ ಸಮಯಕ್ಕೆ ಸರಿಯಾಗಿ ಬಂದು ಅದೇ ಕಟ್ಟೆಯ ಮೇಲೆ ಕುಳಿತುಕೊಂಡು ಪ್ರೊಫೆಸರ್ ಅವರ ಬರುವನ್ನು ಕಾಯುತ್ತಿತ್ತು ಅವರು ಸ್ಟೇಷನ್ ನಿಂದ ಹೊರಗೆ ಬಂದ ತಕ್ಷಣ ಓಡಿಹೋಗಿ ಅವರನ್ನು ತಬ್ಬಿಕೊಂಡು ಮುದ್ದಾಡುತ್ತಿತ್ತು ಪ್ರೊಫೆಸರ್ ರು ಅಸ್ಟೆ.. ಅಸ್ಟೆ ಪ್ರೀತಿಯಿಂದ ಅದನ್ನು ತಬ್ಬಿಕೊಂಡು ಮುದ್ದಾಡುತ್ತಿದ್ದರು ಇದನ್ನು ಕಂಡ ಅಲ್ಲಿಯ ಜನರು ಇವರಿಬ್ಬರ ಪ್ರೀತಿಯನ್ನು ಕಂಡು ಬೆರಗುಗೊಳ್ಳುತ್ತಿದ್ದರು. ಒಂದು ದಿನ ಮುಂಜಾನೆ ಪ್ರೊಫೆಸರ್ ಮತ್ತು ಹಾಚಿ ಎಂದಿನಂತೆ ಕುಣಿದು ಕುಪ್ಪಳಸುತ್ತ ಸ್ಟೇಷನ್ ಕಡೆಗೆ ಬರುತ್ತಿದ್ದರು ಅದೇ ಸಮಯಕ್ಕೆ ಸ್ಟೇಷನ್ ಮಾಸ್ತರ್ ಗೆ ಒಂದು ಫೋನ್ ಕರೆ ಬಂದಿತು ಅದು ಆ ನಾಯಿಮರಿಯನ್ನು ಕಳೆದುಕೊಂಡಿದ್ದ ಮಾಲಿಕನದ್ದಾಗಿತ್ತು ಪ್ರೊಫೆಸರ್ ಮತ್ತು ಹಾಚಿಯ ಅನ್ನ್ಯೋನ್ನತೆಯನ್ನು ಕಂಡು ಬೆರಗಾಗಿದ್ದ ಸ್ಟೇಷನ್ ಮಾಸ್ತರ್ ಹಾಚಿಯ ಬಗ್ಗೆ ಗೊತ್ತಿಲ್ಲ ಎಂದು ಹೇಳಿಬಿಟ್ಟರು! ಹೀಗೆ ಪ್ರೊಫೆಸರ್ ಮತ್ತು ಹಾಚಿಯನ್ನು ಬೇರ್ಪಡಿಸಲು ಯಾರಿಗೂ ಮನಸ್ಸಾಗುತ್ತಿರಲಿಲ್ಲ. ಪ್ರೊಫೆಸರ್ ಮತ್ತು ಹಾಚಿಯ ಪ್ರೀತಿ ಹೀಗೆ ವರ್ಷಗಳವರೆಗೆ ಸಾಗಿತು.

                    ಒಂದು ದಿನ 'ಹಾಚಿ' ಅದೆಕೊಗೊತ್ತಿಲ್ಲ ಪ್ರೊಫೆಸರ್ ತಮ್ಮ ಕೆಲಸಕ್ಕೆ ಹೋಗುವುದನ್ನು ತಡೆಯುವ ಪ್ರಯತ್ನವನ್ನ ಮಾಡುತಿತ್ತು.. ಅವರು ಹೊರಡಬೇಕೆಂದು ಮನೆಯ ಗೆಟಿನೆಡೆಗೆ ಹೊರಟರೆ ಅವರ ಜೊತೆ ಹೋಗದೆ ಏನೋ ಹೇಳುವಹಾಗೆ ಬೊಗಳುತ್ತಿತ್ತು! ಪ್ರೊಫೆಸರ್ ಎಷ್ಟು ಕರೆದರೂ ಅವರ ಜೊತೆ ಹೋಗದೆ ಅವರನ್ನ ಹೋಗದ ಹಾಗೆ ಅಡ್ಡಗಟ್ಟುತ್ತಿತ್ತು.. ಏನೋ ಒಂದು ತಳಮಳದಿಂದ ಅತ್ತಿಂದ್ದಿತ್ತ ಇತ್ತಿಂದತ್ತ ಓಡಾಡಲಿಕ್ಕೆ ಶುರು ಮಾಡಿತು, ಇತ್ತ ಪ್ರೊಫೆಸರ್ ಗೆ ಏನು ತಿಳಿಯದೆ ತಮ್ಮ ಟ್ರೈನ್ ಸಮಯವಾಯ್ತು ಎಂದು ಹೊರಟು ಬಿಟ್ಟರು. ಇತ್ತ ಸಮಾಧಾನವಗದೆ 'ಹಾಚಿ' ಒಂದೇ ಸಮನೆ ಬೊಗಳುತ್ತ ಪ್ರೊಫೆಸರ್ ಕೊಟ್ಟಿದ್ದ ಒಂದು ಶಬ್ದಮಾಡುವ ಚೆಂಡನ್ನು ಮೊಟ್ಟಮೊದಲಬಾರಿಗೆ ಬಾಯಲ್ಲಿ ಹಿಡಿದುಕೊಂಡು ಅವರನ್ನ ಬೆನ್ನುಹತ್ತಿಕೊಂಡು ಹೋಯಿತು. ಪ್ರೊಫೆಸರ್ ಟ್ರೈನ್ ಸ್ಟೇಷನ್ ತಲುಪುವಸ್ಟರಲ್ಲಿ ಅಲ್ಲಿಗೆ ಬಂದು ಮತ್ತೆ ಅವರು ಹೋಗದ ಹಾಗೆ ತಡಿಯಲಿಕ್ಕೆ ಪ್ರಯತ್ನಪಡ್ತಾ ಇತ್ತು... ಕೊನೆಗೆ ತಾನು ತಂದ ಚೆಂಡನ್ನ ಅವರ ಕೈಗೆ ಇತ್ತು ತಳಮಳದಿಂದ ಕೂಡಿದ ಸಪ್ಪೆ ಮುಖಮಾಡಿ ತನ್ನ ಮಾಮೂಲಿ ಕಟ್ಟೆಯ ಮೇಲೆ ಕುಳಿತುಕೊಂಡಿತು ಪ್ರೊಫೆಸರ್ ಹಾಚಿಗೆ ಬೈ ಎನ್ನುತ್ತಾ ಸೊಂತೋಶದಿಂದ ತಮ್ಮ ಕೆಲಸಕ್ಕೆ ಹೊರಟುಹೋದರು ಆದರೆ ಹಾಚಿ ಅಲ್ಲಿಯೇ ಕಟ್ಟೆಯ ಮೇಲೆಯೇ ಕುಳಿತುಕೊಂಡು ಕಾಯುತ್ತಿತ್ತು ಅದು ಮನೆಗೆ ಹೋಗಲಿಲ್ಲ. ಅಲ್ಲಿ ಪ್ರೊಫೆಸರ್ ತಮ್ಮ ದೈನಂದಿನ ಕೆಲಸವಾದ ನೃತ್ಯ ಮತ್ತು ಸಂಗಿತದ ಪಾಠ ಮಾಡಲು ಪ್ರಾರಂಭಿಸಿದರು ಹಾಚಿ ಕೊಟ್ಟ ಚೆಂಡನ್ನು ಕೈಯೇಲ್ಲಿ ಹಿಡಿದುಕೊಂಡು ಶಬ್ದ ಮಾಡುತ್ತ ಸಂತೋಷದಿಂದ ಪಾಠ ಮಾಡುತ್ತಿದ್ದರು. ಆದರೆ ಹಾಚಿ ಪ್ರೊಫೆಸರ್ ಹೋಗದಂತೆ ಯಾಕೆ ಅಷ್ಟೊಂದು ತಡೆಯಲಿಕ್ಕೆ ಪ್ರಯತ್ನ ಪಡುತ್ತಿತ್ತೆಂದು ವಿಧಿ ತಿಳಿಸಿಬಿಟ್ಟಿತು!:(. ಪ್ರೊಫೆಸರ್ ಪಾಠಮಾಡುತ್ತಿರುವಾಗ ಸೆರೆಬ್ರಲ್ ಹೆಮೊರೆಜ ಅನ್ನುವ ಒಂದು ಬ್ರೇನ್ ಸ್ಟ್ರೋಕ್ ನಿಂದ ಕುಸಿದು ಬಿದ್ದು ಪ್ರಾಣಬಿಟ್ಟರು! ಹಾಚಿ ಇದಕ್ಕೊಸ್ಕರನೆನಾ ಇ ಮೊದಲು  ಎಷ್ಟೇ ಕೇಳಿದರು ಚೆಂಡನ್ನು ತಂದು ಕೊಡುತ್ತಿರಲಿಲ್ಲ ?!!!
 
                   ಇತ್ತ ಟ್ರೈನ್ ಸ್ಟೇಷನ್ ಹತ್ತಿರ 'ಹಾಚಿ' ತನ್ನ ಒಡೆಯ ಪ್ರೀತಿಯ ಪ್ರೊಫೆಸರ್ ಬರುತ್ತಾರೆಂದು ತಾನು ದಿನಾಲೂ ಕುಳಿತುಕೊಳ್ಳುವ ಕಟ್ಟೆಯ ಮೇಲೆ ಕುಳಿತುಕೊಂಡಿತ್ತು. ಯಾವುದೇ ಟ್ರೈನ್ ಬರುವ ಶಬ್ದ ಬಂದರೆ ಸಾಕು ತನ್ನ ಕಿವಿ ಎನ್ನು ನಿಮಿರಿಸಿ ಸ್ಟೇಷನ್ನಿಂದ ಹೊರಗೆ ಬರುವ ಎಲ್ಲರನ್ನು ಅತಿ ಕಾತರದಿಂದ ನೋಡುತ್ತಿತ್ತು.. ನನ್ನ ಒಡೆಯನನ್ನ ನೋಡಿದಿರಾ.. ನನ್ನ ಒಡೆಯ ಬಂದರಾ.. ಎಂದು ಎಲ್ಲರನ್ನು ಕೇಳುವ ಹಾಗೆ ಇತ್ತು ಹಾಚಿಯ ಆ ಕಾತುರದ ನೋಟ. ಹೀಗೆ ಅಂದು ಸಂಜೆ ರಾತ್ರೀ ಇಡಿ ಅದೇ ಕಟ್ಟೆಯ ಮೇಲೆ ಕುಳಿತುಕೊಂಡು ಪ್ರೊಫೆಸರ್ ಬಂದೆ ಬರುತ್ತಾರೆಂದು 'ಹಾಚಿ' ಕಾಯುತ್ತ ಕುಳಿತುಕೊಂಡಿತ್ತು! ಮುಂದೆ ಮನೆಗೆನಾದರೂ ಬಂದಿದ್ದರಾ ಅಂತ ಮನೆಗೆ ಬಂದು ತನ್ನ ಪ್ರೊಫೆಸರ್ರನ್ನು ಹುಡುಕಿತು.. ಅವರ ಮನೆಯ ಎಲ್ಲ ಕೋಣೆ,ಗಾರ್ಡನ್, ಮನೆಯ ಮುಂದಿನ ಶೆಡ್ಡು ಹೀಗೆ ಯಾವುದನ್ನ ಬಿಡದೆ ಹುಡುಕುತ್ತಿತ್ತು.

                  ಇ ಸುದ್ದಿತಿಳಿದು ಪ್ರೊಫೆಸರ್ ಹೆಂಡತಿ, ಮಗಳು ಮತ್ತು ಅಳಿಯ ಅತಿವ ದುಖ್ಖದಿಂದ ಅವರ ಅಂತಿಮ ಕ್ರಿಯೆ ಎನ್ನು ಮಾಡಿಮುಗಿಸಿ ಮರಳಿ ಮನೆಗೆ ಬಂದರು. ಮನೆಯಲ್ಲಿ ಹಾಚಿ ಪ್ರೊಫೆಸರ್ರಿಗೆ ಹುಡುಕುತ್ತಿರುವುದನ್ನು ಕಂಡು ಅವರೆಲ್ಲರ ದುಃಖ ಇಮ್ಮಡಿಗೊಂಡು ಅತ್ತರು...ಆದರೆ ಹಾಚಿ ಮಾತ್ರ ತನ್ನ ಹುಡುಕುವ ಕೆಲಸವನ್ನು ನಿಲ್ಲಿಸಿರಲಿಲ್ಲ! ಮರುದಿನ ಹಾಚಿ ಮತ್ತೆ ಸ್ಟೇಷನ್ ನೆಡೆಗೆ ಹೊರಟಿತು ತನ್ನ ಒಡೆಯ ಬರುತ್ತಾನೆಂದು.. ದಿನವಿಡೀ ಅಲ್ಲಿಯೇ ಕುಳಿತುಕೊಂಡಿತು.. ಹೀಗೆಯೇ ಕೆಲವು ದಿನಗಳು ಕಳೆದವು. ಪ್ರೊಫೆಸರ್ ಹೆಂಡತಿ & ಮಗಳು ತಮ್ಮ ಅಳಿಯನ ಮನೆಗೆ ಶಿಫ್ಟ್ ಆದರು. ಹಾಚಿಯೇನ್ನು ತಮ್ಮ ವ್ಯಾನಿನಲ್ಲಿ ಕುಳ್ಳಿರಿಸಿಕೊಂಡು ಹೊರಟು ಹೋದರು.. ಆದರೆ ಹಾಚಿಯ ಬಾಡಿದ ಮುಖ ಬಾಡಿದ ಹಾಗೆಯೇ ಊಳಿದಿತ್ತು ಪ್ರೊಫೆಸರ್ ಇಲ್ಲದೆ ಅದು ನರಕಯಾತನೆ ಅನುಭವಿಸುತ್ತಿತ್ತು! ಇತ್ತ ಅಳಿಯನ ಮನೆಗೆ ಬಂದು ಇಳಿದುಕೊಂಡ ಹಾಚಿ ಏನೋ ಒಂದು ಚಿಂತೆಯಲ್ಲಿ ಸುಮ್ಮನೆ ಕುಳಿತುಕೊಂಡಿತ್ತು.. ಎಲ್ಲರೂ ಮನೆಗೆ ಬಂದಮೇಲೆ ಸಮಯನೋಡಿ ಅಲ್ಲಿಂದ ಓಡಿಹೋಯಿತು ಪ್ರೊಫೆಸರ್ ಅಳಿಯ ಅದರ ಹಿಂದೆ ಹಾಚಿ ಹಾಚೀ ..ಹಾಚೀ ಎಂದು ಎಷ್ಟು ಕೂಗಿದರು ಮರಳಿ ನೋಡದೆ ಓಡಿಹೋಯಿತು.. ಓಡಿಹೊಗುವಾಗ ಟ್ರೈನ್ ಶಬ್ದ ಕೇಳಿ ಹಳಿಯ ಕಡೆಗೆ ಹೋಗಿ ಆ ಹಳಿಯ ಮುಖಾಂತರ ಮತ್ತೆ ಪ್ರೊಫೆಸರ್ ಬರುತ್ತಿದ್ದ ಸ್ಟೇಷನ್ ತಲುಪಿತು, ತಲುಪಿ ಮತ್ತೆ ಪ್ರೊಫೆಸರ್ ಬರುತ್ತಾರೆಂದು ತಾನು ಕುಳಿತುಕೊಳ್ಳುವ ಕಟ್ಟೆಯ ಮೇಲೆ ಕುಳಿತುಕೊಂಡಿತು.. ಅಲ್ಲಿಗೆ ಬಂದ ಪ್ರೊಫೆಸರ್ ಅಳಿಯ ಮತ್ತು ಮಗಳು ಎಷ್ಟು ಕರೆದರೂ ಅವರ ಜೊತೆ ಹೋಗಲಿಲ್ಲ 'ಹಾಚಿ'.

                   ಪ್ರೊಫೆಸರ್ ಬರುತ್ತಾರೆಂದು ಹಗಲು ಇರುಳು ಅಲ್ಲಿಯೇ ಕುಳಿತುಕೊಂಡು ಕಾಯಿತು.. ಇದನ್ನು ಕಂಡ ಟೀ ಸ್ಟಾಲ್ ಮಾಲಿಕ, ಸ್ಟೇಷನ್ ಮಾಸ್ತರು ಕಣ್ಣಿರುಇಟ್ಟರು.. ಹಾಚಿ ಗೊತ್ತಿರುವ ಎಲ್ಲರೂ ಹಾಚಿಯ ತೊಳಲಾಟವನ್ನು ಸಹಿಸಲಾರದೆ ಹೋದರು ಅದನ್ನ ಸಮಾದಾನಪಡಿಸಿದರು.. ಅದಕ್ಕೆ ಅದೇ ಕಟ್ಟೆಯ ಮೇಲೆಯೇ ಕೈಲಾದ ತಿನಿಸುಗಳನ್ನ ಕೊಟ್ಟರು ... ಆದರೆ ಹಾಚಿ ತನ್ನ ಕಳೆದು ಹೋದ ಉಲ್ಲಾಸ, ಮರೆತುಹೋದ ಉತ್ಸಾಹ.. ಸಪ್ಪೆಯಾದ ಮುಖ ... ಕಲ್ಲಾದ ಹೃದಯದಿಂದ ತನ್ನ ಪ್ರೀತಿಯ ಪ್ರೊಫೆಸರ್ ಗೋಸ್ಕರ ಕಟ್ಟೆಯನ್ನು ಬಿಟ್ಟು ಏಳಲೇ ಇಲ್ಲಾ. ಬರುವ ಹೋಗುವ ಎಲ್ಲ ಟ್ರೈನ್ ಗಳನ್ನೂ ನೋಡುತ್ತಾ ಹಾಗೆಯೇ ಜೀವನ ಕಳೆಯುತ್ತಿತ್ತು. ಹೀಗೆಯೇ ತಿಂಗಳುಗಳು ಉರುಳಿದವು, ವರ್ಷಗಳು ಉರುಳಿದವು ಆದರೂ ಹಾಚಿ ಮಾತ್ರ ತನ್ನ ಪ್ರೊಫೆಸರ್ ಬರುತ್ತಾರೆಂದು ಕಾಯುದನ್ನು ನಿಲ್ಲಿಸಲಿಲ್ಲ! ಮಳೆ ಗಾಳಿ ಚಳಿ ಎನ್ನು ಲೆಕ್ಕಿಸದೆ ...ಮೈಮೇಲೆ ಬಿದ್ದ ಬಿಸಿಲು ಹಿಮವನ್ನು ಲೆಕ್ಕಿಸದೆ ಒಡೆಯನಿಗೊಸ್ಕರ ಕಾಯುತ್ತ ತನ್ನ ಇಡೀ ಜೀವನವನ್ನು ಕಳೆಯಿತು !!! ತನ್ನ ಪ್ರೊಫೆಸರ್ ಮರಣಹೊಂದಿದ ೧೯೨೫ ರಿಂದ ತನ್ನ ಮರಣದವರೆಗೆ ಅಂದರೆ ೧೯೩೪ರವರೆಗೆ ಸತತ ೯ ವರ್ಷಗಳ ಕಾಲ ತನ್ನ ಪ್ರೀತಿಯ ಪ್ರೊಫೆಸರ್ ಗೋಸ್ಕರ ಕಾಯಿತು!! ಆ ದೇವರು ಪ್ರೀತಿ ವಿಶ್ವಾಸವನ್ನು ಎಲ್ಲಿ.. ಹೇಗೆ..ಯಾಕೆ..ಸೃಷ್ಟಿಸುತ್ತಾನೋ ಅದು ಅವನಿಗೇ ಗೊತ್ತು!
ಇವತ್ತು ನೀವು ಜಪಾನಗೆ ಹೋದರೆ ಅಲ್ಲಿನ 'ಶಿಬುಯಾ' ಟ್ರೈನ್ ಸ್ಟೇಷನ್ ಎದುರಿಗೆ ಹಾಚಿಯ ಕಂಚಿನ ಪುತ್ತಳಿ ಸಿಗುತ್ತದೆ! ಪ್ರತಿವರ್ಷ ಹಾಚಿಗೊಸ್ಕರ ಅಲ್ಲಿ ಸಮಾರಂಭವನ್ನು ಏರ್ಪಡಿಸುತ್ತಾರೆ ಅದರ ನಿಯತ್ತು, ಪ್ರೀತಿಯ ಬಗ್ಗೆ  ಹಾಡಿ ಹೊಗಳುತ್ತಾರೆ!
                                                                  ಹಾಚಿ (೧೯೨೩ - ೧೯೩೪)
ಹಾಚಿಯ ಬಗ್ಗೆ ಹೇಳಲು ಇದು ನನ್ನ ಒಂದು ಸಣ್ಣ ಪ್ರಯತ್ನ ಇದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಲು ಹಾಚಿಯ ಮೇಲೆ ತೆಗೆದಿರುವ ಎರಡು ಚಿತ್ರಗಳನ್ನು ನೋಡಿ 'Hachiko: A Dog's Story ' & 'hachiko monogatari' .... ಒಂದು ಮಾತು ಅಂತರು ಸತ್ಯ ನೀವು ಅಳದೆ ಇ ಚಿತ್ರವನ್ನು ಪೂರ್ತಿಯಾಗಿ ನೋಡಲು ಸಾದ್ಯವಿಲ್ಲ ! ನೋಡಿ ನಿಮ್ಮ ಅಭಿಪ್ರಾಯವನ್ನ ಹಂಚಿಕೊಳ್ಳಿ...
ಇಂತಹ ವಂಡರ್ ಡಾಗ್ 'ಹಾಚಿ'ಗೆ ಹ್ಯಾಟ್ಸ್ಅಪ್ !

Sunday, March 18, 2012

ಮನಸ್ಸು!

ಸುಮ್ಮನೆ ಶಾಂತವಾದ ಕೊಳದ ದಡದಲ್ಲಿ
ನವಿರಾಗಿ ಹರಿತಾಯಿರುವ ಜರಿಯ ತಳದಲ್ಲಿ
ಮಬ್ಬುಗತ್ತಲಿನ ಸಂಜಯ ಚಂದ್ರನ ನೆರಳಲ್ಲಿ
ಗಂಭೀರ ಮೌನದ ಸಿದ್ದದೇವನ ಸ್ತಳದಲ್ಲಿ
ಪ್ರಶಾಂತವಾಗಿ ಕುಳಿತುಕೊಳ್ಳಬೇಕೆನ್ನುವುದೆ ನನ್ನ ಮನಸ್ಸು!!!

Wednesday, June 15, 2011

'ಲಂಚ'

ಬೇಕು ಕೋಟಿ ಬೇಕು
ಎಂದು ದೇವ ದೇವ ಗಳಿಗೆ ಕೋಟಿ ನೈವೆದ್ದೆಗಳ ವಿಶೇಷ!
ಬೇಕು ದರ್ಶನ ಬೇಕು
ಎಂದು ದೇವ ದೇವಾಲಯಗಳಿಗೆ ಕೋಟಿ ಕಾಣಿಕೆಗಳ ವಿಶೇಷ!
ದೇವರಿಗೆನೇ ಬೇಕು ... ಇನ್ನೂ ಹುಲು ಮಾನವನಿಗೆ ಬೇಡವೇ?
.
.
ಕೆಲಸ ಬೇಕು.... ಕೆಲಸ ಬೇಕು
ಎಂದು 'ಸರ್ಕಾರಿ'ದೇವರುಗಳಿಗೆ ಕೋಟಿ ಕೊಡುಗೆಗಳ ವಿಶೇಷ!
 ಲಂಚ ಲಂಚ ... ಲಂಚ!

Monday, May 2, 2011

'ಕಾಪ' ಪಂಚಾಯಿತಿ!


ಸುನೀತಾ(21) ಮತ್ತು 'ಜಸ್ಸಾ' ಉರ್ಫ್ ಜಸ್ಬೀರ್ ಸಿಂಗ(22) ಒಬ್ಬರನ್ನೊಬ್ಬರು ಪ್ರೀತಿಸಿ.. ’ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು’ ಅಂದು ಕೊಂಡು ಮನೆಯವರ ಮತ್ತು ಊರಿನವರ ವಿರೋಧದ ನಡುವೆ ಮದುವೆಯಾಗಿದ್ದರು! ತಮ್ಮ ಪುಟ್ಟ ಸಂಸಾರ, ಪುಟ್ಟ ಮನೆ ಮತ್ತೆ ತಮಗೆ ಒಂದು ಪುಟ್ಟ ಮಗುವಿನ ಬರುವಿಗೆ ಕಾಯ್ತಾ ಹಾಯಾಗಿದ್ದರು ಅಂದರೆ ಸುನೀತಾ ೫ ತಿಂಗಳ ಗರ್ಬಿಣಿ!.
ಹೀಗೆ ಎಲ್ಲವೂ ಚೆನ್ನಾಗಿರುವಾಗ ಒಂದು ದಿನ ಮುಂಜಾನೆ ಸುನಿತಾಳ ತಂದೆಯ ಮನೆ ಮುಂದೆ ಅತೀ ಕ್ರೂರತನಕ್ಕೆ ಸಾಕ್ಷಿಯಾಗಿ ಎರಡು ದೇಹಗಳು ಬಿದ್ದಿದ್ದವು! ಅಬ್ಬಾ ಎಂತಹ ರಾಕ್ಷಸರು ಅಂತೀರಾ ಗರ್ಬಿಣಿಯ ಹೊಟ್ಟೆಗೆ ಒದ್ದಿದ್ದರು, ಮುಖಕ್ಕೆ ಗುದ್ದಿದ್ದರು ಮತ್ತು ಎರಡು ದೇಹಗಳಿಗೆ ಇರಿದಿದ್ದರು!

ಇತ್ತೀಚಿಗ ನಮ್ಮ ಸರ್ವೋಚ್ಚ ನ್ಯಾಯಾಲಯ 'ಕಾಪ' ಪಂಚಾಯಿತಿಗಳನ್ನ ಬೇರು ಸಮೇತ ಕಿತ್ತುಹಾಕಿ ಅಂತಾ ಅತೀ ಕಠಿಣವಾದ ಎಚ್ಚರಿಕೆಯನ್ನ ಎಲ್ಲ District Magistrate ಮತ್ತು SP ಗಳಿಗೆ ಕೊಟ್ಟಿದೆ! ಅದಾಗ್ಯೂ ಇ 'ಕಾಪ' ಪಂಚಾಯತಿಗಳು ನಮ್ಮ ಸರ್ವೋಚ್ಚ ನ್ಯಾಯಾಲಯವೆ ತಪ್ಪು ಅನ್ನೋತರಹದಲ್ಲಿ ಹೇಳಿಕೆಗಳನ್ನು ನೀಡುತ್ತ ಇದ್ದಾವೆ. ಹಾಗಿದ್ದರೆ ಏನಿದು ಇ 'ಕಾಪ' ಪಂಚಾಯತಿಗಳ ಪಂಚಾಯಿತಿ?

ಉತ್ತರ ಭಾರತದ ರಾಜ್ಯಗಳಾದ ಹರ್ಯಾಣಾ, ಉತ್ತರ ಪ್ರದೇಶ, ರಾಜಸ್ತಾನ ಮುಂತಾದ ರಾಜ್ಯಗಳಲ್ಲಿ ಕಂಡು ಬರುವ 'ಕಾಪ್' ಪಂಚಾಯಿತಿಗಳು ಮೇಲ್ನೋಟಕ್ಕೆ ನಮ್ಮ ಹಿಂದಿನ ಕಾಲದಲ್ಲಿದ್ದ ಪಂಚಾಯತಿ ಕಟ್ಟೆಗಳ ತರಃ ಕೆಲಸ ಮಾಡುತ್ತವೆ. ಸುಮಾರು ೧೪ನೇ ಶತಮಾನದಿಂದ ನಡೆಯುತ್ತಾ ಬಂದಿರುವ 'ಕಾಪ' ಪಂಚಾಯತಿಗಳು ಜಾತಿ, ಗೋತ್ರ ಮತ್ತು ಸ್ಥಳಗಳಿಂದ ಒಗ್ಗೂಡಿದಂತ ಹಳ್ಳಿಗಳಲ್ಲಿ ಪ್ರಚಲಿತದಲ್ಲಿವೆ. ಹಿಂದಿನ ಕಾಲದಲ್ಲಿ ಮೇಲಾಗಿ ಉನ್ನತ ಜಾತಿಯವರು ತಮ್ಮ ಅಧಿಕಾರ ಮತ್ತು ಶಕ್ತಿಯ ಉಳಿವಿಗಾಗಿ ಇ ಪಂಚಾಯತಿಗಳನ್ನ ನಿರ್ಮಿಸಿದರು.
ಒಂದೇ ಗೊತ್ರಗಳನ್ನು ಹೊಂದಿರುವ ಹಳ್ಳಿಗಳ 'ಕಾಪ' ಪಂಚಾಯತಿಗಳ ಪ್ರಕಾರ ಆ ಹಳ್ಳಿಗಳಲ್ಲಿ ಇರುವ ಎಲ್ಲರೂ ಅಣ್ಣತಮ್ಮಂದಿರು ಮತ್ತು ಅಕ್ಕತಂಗಿಯರು. ಇಂತ ಪಂಚಾಯತಿಗಳ ಅಡಿಯೇಲ್ಲಿ ಬರುವ ಎಲ್ಲ ಹಳ್ಳಿಗಳಲ್ಲಿ Love marriage ಗಳು ನಿಶಿದ್ದ! ಇ ಪಂಚಾಯತಿಗಳ ಒಳಗೆ ಬರುವ ಬೇರೆ ಬೇರೆ ಹಳ್ಳಿಗಳ ನಡುವೆಯೂ ಮದುವೆ ನಿಶಿದ್ದ! ಇದನ್ನೆನಾದರು ಮೀರಿ ಯಾರಾದರು ನಡೆದುಕೊಂಡರೆ ಅವರಿಗೆ ಮೃತ್ಯುವೇ ಗತಿ!
ಇ 'ಕಾಪ' ಪಂಚಾಯತಿಗಳು ತಪ್ಪು ಮಾಡಿದವರಿಗೆ ಕೊಡುವ ಶಿಕ್ಷೆಗಳು ಅತೀಯಾದ ದಂಡ, ಸಮಾಜದಿಂದ ಬಹಿಷ್ಕಾರ ಮತ್ತು ಹೆಚ್ಚಾಗಿ ಕೊಲೆಗಳಿಂದ ಅಥವಾ ಆತ್ಮಹತ್ತೆ ಮಾಡಿಕೊಳ್ಳುವ ಹಾಗೆ ಒತ್ತಡದಿಂದ ಕೊನೆಗೊಳ್ಳುತ್ತವೆ.

ಸುನೀತಾ ಮತ್ತು ’ಜಸ್ಸಾ’ಗೂ ಆಗಿದ್ದು ಇದೆ! ಇಬ್ಬರನ್ನು ರಾತ್ರಿ ಮನೆಯಿಂದ ಹೊರಗೆಳೆದುಕೊಂಡು ಹೋಗಿ ಮುಂಜಾನೆ ಅವರ ದೇಹಗಳನ್ನು ಸುನಿತಾಳ ಮನೆಯ ಮುಂದೆ ಎಸೆದು ಹೋಗಿದ್ದರು ಯಾಕೆಂದರೆ ಅದೂ ಇಡೀ ಊರಿಗೆ ಗೊತ್ತಾಗಬೇಕು ಮತ್ತು ಉಳಿದವರಿಗೆ ಎಚ್ಚರಿಕೆ ಯಾಗಬೇಕು! ಅವರಿಬ್ಬರೂ ಮಾಡಿದ ತಪ್ಪು ಏನೆಂದರೆ ಒಂದೇ ಊರಿನವರಾಗಿ ಪ್ರೀತಿಸಿ ಮದುವೆಯಾಗಿದ್ದು!
ಇದು ನಡೆದದ್ದು ೨೦೦೮ ಮೇ ೯ ರಂದು ಹರ್ಯಾಣಾ ರಾಜ್ಯದ ಬಲ್ಲಾ ಎಂಬ ಹಳ್ಳಿಯೆಲ್ಲಿ! ವಿಚಿತ್ರ ಎಂದರೆ ಇ ಗಟನೆಗೆ ಇಡೀ ಹಳ್ಳಿಯೇ ಹೆಮ್ಮೆಯಿಂದ Support ಆಗೀ ನಿಂತಿತ್ತು... ಆದರೆ ಕೊಲೆಗಡುಕರ ಪರವಾಗಿ! ಇದೇ ಕಾಪ ಪಂಚಾಯತಿಗಳ ವಿಶೇಷ! ಇದೇ Honour Killing!
ಇ ಕಾಪ ಪಂಚಾಯತಿಗಳು ಇಂದಿಗೂ ಇಷ್ಟು ಬಲಿಷ್ಠವಾಗಿ ಬೆಳೆದಿವೆ ಅಂದರೆ ಇದಕ್ಕೆ ಮುಖ್ಯ ಕಾರಣ ನಮ್ಮ ದುರ್ಬಲ ಪಂಚಾಯತ್ ರಾಜ್ ವ್ಯವಸ್ತೆ ಅಂದರೆ ತಪ್ಪಾಗಲಾರದು. ಜನರು ಕಾಪ ಪಂಚಯತಿಗಳಲ್ಲಿ ವಿಶ್ವಾಸವೆಕೆ ಇಟ್ಟಿದ್ದಾರೆ ಅಂತ ಅದರ ಹಿಂದೆ ಹೋದರೆ
೧) ಇಲ್ಲಿ ಯಾವುದೇ ವ್ಯಾಜ್ಯಗಳನ್ನ ಪ್ರಮುಕರಾದ ೧೦ ರಿಂದ ೧೫ ಜನರು ಕುಳಿತಲ್ಲಿಯೇ ಒಂದೇ ದಿನದಲ್ಲಿ ಬಗೆ ಹರಿಸುತ್ತಾರೆ ... ಅದನ್ನ ನಮ್ಮ ಕೊರ್ಟಗಳಿಗೆ ಒಯ್ಯದರೆ ಕನಿಷ್ಠ ೪ ರಿಂದ ೫ ವರ್ಷ! ಅಥವಾ ಇನ್ನೂ ಹೆಚ್ಚು!
೨) ಕೊರ್ಟಗಳಿಗೆ ತಮ್ಮ ಕೆಲಸಗಳನ್ನ ಬಿಟ್ಟು ಅಲೆಯುದು ಮತ್ತು ಪೋಲಿಸರಿಂದ ಕಿರುಕಳ ಅನುಭವಿಸುವುದು ಇರುವುದಿಲ್ಲ.
ಆದರೆ ಇ ಕೆಲುವೊಂದು ಉಪಯೋಗಗಳನ್ನು ಬಿಟ್ಟರೆ ಇದೊಂದು ಅತೀ ಕ್ರೂರ ವ್ಯವಸ್ತೆಯೇ ಸರಿ ಇಲ್ಲಿ ಮಹಿಳೆಯರಿಗೆ ಯಾವುದೇ ಅಧಿಕಾರ ಇಲ್ಲಾ, ಕೆಲೋವೊಮ್ಮೆ ಗಂಡು ಮಕ್ಕಳಿಗೆ ಶಿಕ್ಷೆಯಿಂದ ವಿನಾಯತಿ ಸಿಗುತ್ತೆ ಆದರೆ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಸಿಗುವುದಿಲ್ಲ, ಇ ಪಂಚಾಯತಿಗಳ ವಿರುದ್ದ ಯಾರಾದರು ಮಕ್ಕಳಿಗೆ Support ಮಾಡಿದರೆ ಇಡೀ ಮನೆತನವನ್ನು ಬಹಿಸ್ಕಾರ ಮಾಡಲಾಗುತ್ತೆ ! ಲಕ್ಷಾಂತರ ರೂಪಾಯಿಗಳ ದಂಡವನ್ನು ವಿದಿಸಲಾಗುತ್ತೆ.

ದುರ್ದೈವದ ಸಂಗತಿ ಎಂದರೆ ಕಾಪ ಪಂಚಾಯತಿಗಳ ಅಡಿಯೇಲ್ಲಿ ಬರುವ ಎಲ್ಲ ಹಳ್ಳಿಗಳು ಇವುಗಳ ಮೇಲೆ ಪ್ರಶ್ನಾತೀತ ವಿಶ್ವಾಸವನ್ನು ಇಟ್ಟಿರುವುದು! ಮತ್ತು ಇವುಗಳಲ್ಲಿ ಮಹಿಳೆಯರಿಗೆ ಯಾವುದೇ ಹಕ್ಕುಗಳಿರದೆ ಇರುವುದು. ಇವಗಳನ್ನು ಹತ್ತಿಕ್ಕಲು ಯಾವುದೇ ರಾಜಕೀಯ ನಾಯಕರಾಗಲಿ, ಪಕ್ಷಗಳಾಗಲಿ ಪ್ರಯತ್ನಿಸುತ್ತಿಲ್ಲಾ ಏಕೆಂದರೆ ವೋಟು ಬ್ಯಾಂಕ್! ಮತ್ತು ಕಾಪ ಪಂಚಾಯತಿಗಳ ಒಗ್ಗಟ್ಟು!

ಇನ್ನೂ ನಮ್ಮ ಸಮಾಜದಲ್ಲಿ ಇಂತಹ ವ್ಯವಸ್ತೆಗಳು ಇರುವುದು ಒಂದು ಕಳಂಕ. ಕಾಪ್ ಪಂಚಾಯತಿಗಳ ಕ್ರೂರ ವರ್ತನೆಗಳು, ಕೆಲೋವೊಮ್ಮೆ ನಗೆಪಾಟಲಿಗೆ ಇಡಾಗುವ ಫ್ಹತ್ವಾಗಳು, ಇನ್ನು ಕೆಲವು ಪ್ರಚಲಿತವಿರುವ parallel ನ್ಯಾಯಸ್ತಾನಗಳು ಇವುಗಳೆಲ್ಲವನ್ನು ಒಂದೇ ವ್ಯವಸ್ತೆಯ ಅಡಿಯಲ್ಲಿ ತರುವುದು ಈಗಿನ ಅವಶ್ಯಕತೆಯಾಗಿದೆ. ಎನಂತಿರಿ?

Thursday, April 21, 2011

ಫೇಲ ಆದರೆ ಊರು... ಪಾಸ್ ಆದರೆ ಊರಿಂದ ದೂರು!!!

ಮೊದಲ ಬಾರಿಗೆ ಮನೆಯಿಂದ ಧೀರ್ಘಕಾಲ ದೂರವಾಗಿ ಮೈ ಮನಸ್ಸೆಲ್ಲಾ ಊರು ಊರು ಅಂತಾ ಇದೆ ! ಅಂತಹದರ ನಡುವೆ ಇ ಸಂದರ್ಶನ!
ನನ್ನ ಕಾಲೇಜು ಜೀವನದಲ್ಲಿ ವಾರಕ್ಕೆ ಎರಡು ಬಾರಿ ಮನೆಗೆ ಓಡಿ ಹೋಗುತ್ತಾ ಇದ್ದ ನಾನು ಎಲ್ಲರಿಂದಲೂ ಹೋಂ ಸಿಕ್ ಅನ್ನಿಸಿಕೊಳ್ಳುತ್ತಾ ಇದ್ದೆ. ಆದರೂ ಯಾರು ಏನೆ ಅಂದರು ನಾನು ಮನೆಗೆ ಹೋಗಿ ಅಮ್ಮನ ಮುಖ ನೋಡುವವರೆಗೂ, ತಂದೆ ಅಕ್ಕ ತಮ್ಮಂದಿರ ಜೊತೆ ಮಾತನಾಡದೆ ಸಮಾಧಾನ ಇರ್ತಿರಲಿಲ್ಲ ಮತ್ತು ಚಡ್ಡಿ :) ಗೆಳೆಯರ ಜೊತೆ ಕಾಲಕಳೆಯದೆ ಆಗುತ್ತಿರಲಿಲ್ಲ. ಮುಂದೆ ಕಾಲಕ್ರಮೇಣ ನನ್ನ ಕಾಲೇಜು ಜೀವನ ಮುಂದುವರೆದಂತೆ ಸ್ವಲ್ಪ ಮನೆಯಿಂದ ದೂರ ಇದ್ದು ಬದುಕಲು ಕಲಿತೆ ಆದರೂ ಕನಿಷ್ಠ ೧೫ ದಿನಗಳಿಂದ ಒಂದು ತಿಂಗಳಲ್ಲಿ ಒಮ್ಮೆ ಯಾದರು ಮನೆಗೆ ಹೋಗಲೇಬೇಕು! ಇದು ನನ್ನ ಮನಸ್ಸು!


ಆದರೆ ಒಮ್ಮೆಲೇ ನಾನು ಹೊರದೇಶಕ್ಕೆ ಹೋಗಬೇಕಾದ ಅನಿವಾರ್ಯತೆಯಿಂದಲೋ ಅಥವಾ ಒಮ್ಮೆ ಯಾದರು ಹೊರದೇಶಕ್ಕೆ ಹೋಗಬೇಕೆನ್ನುವ ಅಪೇಕ್ಷೆಯಿಂದಲೋ ಅಂತಹ ಪರಿಸ್ತಿತಿ ಬಂದಿತು. ನಾನು ದ್ವಂದ್ವ ನಿಲುವಿನಲ್ಲಿ ಎಷ್ಟು ದಿನಗಳವರೆಗೆ ಅಂತ ನನ್ನ ಮ್ಯಾನೇಜರ್ ಗೆ ಕೇಳಿ ಕೇವಲ ೩ ತಿಂಗಳು ಹೇಗಾದರೂ ಮಾಡಿ ಕಳೆಯಬಹುದು ಅನ್ನೋ ಯೋಚನೆಯಿಂದ ಒಪ್ಪಿಕೊಂಡು ಬಿಟ್ಟೆ. ಹೀಗೆ ನಾನು ಸ್ವೀಡನ್ ತಲುಪಿದೆ. ಇಲ್ಲಿಗೆ ಬಂದು ಮೊದಲ ಒಂದು ವಾರದವರೆಗೆ ಏನೋ ಹೊಸ ಸ್ತಳ, ಹೊಸ ಜನರು, ಹೊಸ ವಾತಾವರಣ ಅಂಥಾ ದೂಡಿದೆ ಅಲ್ಲಿಂದ ಮುಂದೆ ಪ್ರಾರಂಭವಾಯಿತು ನೋಡಿ ಮರಳಿ ಸ್ವದೇಶಕ್ಕೆ ಹೋಗುವ ದಿನಗಳ ಗಣನೆ [ಅದ್ಹೇನೋ ಹೇಳಲಿಕ್ಕೆ ಆಗದಿರುವಂತ ಒಂದು ಭಾವನೆ !]... ಅಂತು ಇಂತೂ ಕೆಲವು ಫೆಸಬುಕ್ ಗೆಳೆಯರ ಸಲಹೆಗಳಿಂದ ಮೊದಲು ಮೊದಲು ಹೀಗೆ ಆಗುತ್ತೆ ಚಿಂತೆ ಮಾಡಬೇಡ ಕೇವಲ ೩ ತಿಂಗಳು ತಾನೇ ಅನ್ನೋ ಮಾತುಗಳಿಂದ ಹೇಗೋ ದಿನಗಳನ್ನ ದೂಡುತ್ತಾ ಇದ್ದೆ.. ಆವಾಗಲೇ ಇಲ್ಲಿನ ಮ್ಯಾನೇಜರ್ ನನಗೆ ಒಂದು ಶಾಕ್ ಕೊಡುವ ಸುದ್ದಿಯೊಂದಿಗೆ ಬಂದಾ! ಅದೇನೆಂದರೆ ' your stay has been extended for 3 more months' ಅಂತ! ಇದನ್ನ ಕೇಳಿ ನನಗೆ ಇನ್ನೂ ಚಿಂತೆ ಅನ್ನಬೇಕೋ, ದುಃಖ ಅನ್ನಬೇಕೋ ಇಲ್ಲ ಊರಿನ ಸೆಳೆತ ಅನ್ನಬೇಕೋ ಒಟ್ಟಿನಲ್ಲಿ ನನ್ನ ಮನಸ್ಸು ಸದಾ ಗೊಂದಲಗಳ ಗೂಡಾಗಿಬಿಟ್ಟಿತು. ಯಾವಾಗಲು ಒಂದು ತರಹದ ವಿಚಿತ್ರ ಭಾವನೆಗಳಿಂದ ಕೊರಗುತ್ತಾ ಇದ್ದೀನಿ ಅನ್ನಿಸತೊಡಗಿತು! ಇನ್ನೂ ಹೀಗೆ ಮುಂದುವರೆದರೆ ಒಳ್ಳೆಯದಲ್ಲ ಅಂತ ತಿಳಿದು ಒಂದು ದಿನ ಧೈರ್ಯವಾಗಿ ಇಲ್ಲಿನ ಮ್ಯಾನೇಜರ್ ಗೆ ನನಗೆ ಇಲ್ಲಿ ಮುಂದುವರೆಯುವುದು ಕಷ್ಟ ಆಗುತ್ತಾ ಇದೆ ನಾನು ಮರಳಿ ನನ್ನ ದೇಶಕ್ಕೆ ಹೋಗುತ್ತೇನೆ ಅಂತ ತಿಳಿಸಿದೆ! ಅದಕ್ಕೆ ಆ ಆಸಾಮಿ ಒಪ್ಪಿಗೆಯೇನ್ನೂ ಕೊಡದೆ ಒಪ್ಪಿಗೆಯಿಲ್ಲ ಅಂತಾನು ಹೇಳದೆ ನೋಡೋಣ ಅಂತ ಅರ್ಧ ಗೋಡೆಯ ಮೇಲೆ ದೀಪವನ್ನು ಇಟ್ಟಂತೆ ಹೇಳಿದ!

ಸ್ವಲ್ಪ ದಿನಗಳ ನಂತರ ಒಂದು ವಿಚಿತ್ರ ಸನ್ನಿವೇಶ ಎದುರಾಯಿತು ! ನನ್ನ ಇಲ್ಲಿನ ಮ್ಯಾನೇಜರ್ ಬಂದು ಮುಂದಿನ ವಾರ ಒಂದು ಕ್ಲೈಂಟ್ ಸಂದರ್ಶನ ಇದೆ ಅದರಲ್ಲಿ ನೀನು ಸೆಲೆಕ್ಟ್ ಆದರೆ ಇನ್ನೂ ೩ ತಿಂಗಳು ಇಲ್ಲೇ ಇರಬೇಕಾಗುತ್ತೆ ಅಲ್ರೆಡಿ ನಿನ್ನ ಸಿವಿ ಸೆಲೆಕ್ಟ್ ಆಗಿದೆ ಅಂತ ಹೇಳಿದಾ... ಈಗೇನು ಮಾಡೋದು ಸಂದರ್ಶನದಲ್ಲಿ ಪಾಸ್ ಆದರೆ ಇಸ್ಟಾ ಇಲ್ಲದೆ ಇಲ್ಲೇ ಇರಬೇಕಾಗುತ್ತೆ ಫೆಲ ಆದರೆ ಮನೆಗಾದರೂ ಹೋಗಬಹುದು! ಜೀವನದಲ್ಲಿ ಇಲ್ಲಿವರೆಗೆ ಸಂದರ್ಶನಗಳಲ್ಲಿ ಪಾಸ್ ಅಗೊದು ಹೇಗೆ ಅಂತ ವಿಚಾರ ಮಾಡುತ್ತ ಇದ್ದರೆ ಇವಾಗ ಫೇಲ್ ಹೇಗೆ ಆಗಬೇಕು ಅನ್ನೋದೇ ಒಂದು ದೊಡ್ಡ ಸಮಸ್ಸೆಯಾಯಿತು! ಅದ್ಹೇಗೆ.. ಸರಿಯಾಗಿ ಉತ್ತರಗಳನ್ನ ನೀಡದೆ ಇದ್ದರಾಯಿತು ಅಂತಿರಾ ? ಅಲ್ಲಿ ಒಂದು ಸಮಸ್ಸೆ ಇದೆ ಅದೇನಂದರೆ ಸಂದರ್ಶನದ ವೇಳೆ ನನ್ನ ಜೊತೆ ಮ್ಯಾನೇಜರ್ ನಾನು ಬರುತ್ತೇನೆ ಅಂತ ಹೇಳಿ ಹೋಗಿದ್ದಾ...!