Saturday, April 28, 2012

ದೊಡ್ಡಗೌಡರು!


                      ಹಣಮ್ಯಾ[ಹಣಮಂತ] ಮತ್ ಶರಣ್ಯಾ[ಶರಣಯ್ಯಾ] ಇಬ್ಬ್ರು ಚೆಡ್ಡಿ ದೊಸ್ತ್ರು! ಮುಂಜೆಲಿಯಿಂದ ಸಂಜಿತನಾ ಏನ ಮಾಡಿದ್ರೂ ಕೂಡೇ ಮಾಡ್ತಿದ್ರು. ಬಸವಣ್ಣನ ಗುಡ್ಯಾಗಿಂದ ಎದ್ದು ಬಗಲಾಗ್ ಮಡಚಿದ ಹಾಸಿಗಿ ಹಿಡ್ಕೊಂಡು ಮನಿಗೆ ಹೊಂಟರು ಹಣಮ್ಯಾ ಮತ್ ಶರಣ್ಯಾ... ಲೇ ಹಣಮ್ಯಾ ಹೆಂಡಿಕಸಾ ಲಗುಣ ಮಾಡ್ಕೊಂಡು ಬಾ ಲೇ ಇವತ್ತ ಸನಿವಾರೈತಿ ಸಾಲಿಗಿ ಲಗು ಹೊಗ್ಬೆಕ್ ಅಂತ  ಹಣಮ್ಯಾ ಅಂದ$ ತಮ್ಮ ಮನಿಗೆ ಹ್ಯೋದ.. ಇನ್ನೆನು ತನ್ನ ಮನಿ ಸಂದ್ಯಾಗ ಹೊಳ್ಳಬೆಕನ್ನುವಸ್ಟರಾಗ ಮೂಲಿಮನಿ ಮೆಳ್ಳಗನ್ನ ಮಲ್ಲಕ್ಕ ಹನಮ್ಯಾನ್ನ ನೊಡಿ ಹಲ್ಲಕಿಸದಳು... ಅಲಾ ಇವನೌನ್ ಮುಂಜ ಮುಂಜಾನೆ ಇಕೀ ನೊಡಿ ಹಲ್ಲಕಿಸದಳಲ್ಲಪಾ! ಇವತ್ತ ಏನ ಕಾದೈತ್ಯೊ ಯೆನೊ... ಅನಕೊತ ಮನಿಗೆ ಹೊದಾ... ಬಾಗಲ್ದಾಗ ಮುಸರಿ ತಿಕ್ಕಾಕತ್ತಿದ್ದ ಹನಮ್ಯಾನ ಅವ್ವ ಅಂಜವ್ವ ಯಾಕ್ಲಾ ನಿನಗ ಸ್ವಲ್ಪರ ಮಯ್ಯಾಗ ಕಬರೈತ್ಯೊ ಇಲ್ಲೊ ಯೆಸ್ಟೊತ್ತನ ಮಕ್ಕೊಳುದು ಹಂಗ ಇವತ್ ಸನಿವಾರ ಐತಿ ಸಾಲಿಗಿ ಲಗು ಹೊಗಬೆಕನ್ನುದ ಗೊತ್ತೈತಿಲ್ಲ..ಮತ್ ಮನೀ ಹೆಂಡಿಕಸಾ ಯಾರ್ ನಿಮ್ಮಪ್ಪ ಮಾಡ್ತಾನೆನ್ ಅಂತ್ ಬಯ್ಯಕತ್ತ್ಲು.. ಏ ಬಿಡ ಬೆ ಮುಂಜ ಮುಂಜಾನೆ ಬಯಬ್ಯಾಡ ನಾ ಏಲ್ಲಾ ಕೆಲ್ಸಾ ಮಾಡೀನ$$.. ಸಾಲಿಗಿ ಹೊಕ್ಕಿನಿ ಆತಿಲ್ಲೊ ಅಂದ ಮನಿ ಒಳಗ ಹೊದ.. ಎನ ಮಾಡ್ತಿ ನೊಡು ಹಂಗ ಹೊಗುಮುಂದ ದೊಡ್ಡ ಗೌಡರ ಮನಿಗೆ ಹಾಲಿನ ಚರಗಿ ಕೊಟ್ಟಹೊಗು ನಾನು ದನಕ್ಕ ಸ್ವಲ್ಪ ಹುಲ್ಲತೊಗೊಂಡ ಬರಾಕ ಹೊಂಟಿನಿ ಅಂತ ಅಂದು ಅಂಜವ್ವ ಕೆಲಸಾ ಮುಂದವರಿಸಿದ್ಲು...
                        ಹಣಮ್ಯಾ ಮತ್   ಶರಣ್ಯಾ ಇಬ್ಬರು ಹೆಂಡಿಕಸಾ ನ ತಿಪ್ಪಿಗೆ ಚೆಲ್ಲಿ ಅಲ್ಲೆ ಇದ್ದ ಬೆನ ಗಿಡದ ಕಡ್ಡಿಲೆ ಹಲ್ಲತಿಕ್ಕೊತ ಮನಿಗಿ ಬಂದ್ರು...  ಹಣಮ್ಯಾ ಮನಿ ಸಂದಿಕಡೆ ತಿರುಗು ಮುಂದ ಮತ್ ಅದ ಮೆಳ್ಳಗನ್ನ ಮಲ್ಲಕ್ಕನ  ನೊಡಿದಾ..!  ಹಣಮ್ಯಾ ಬಡ ಬಡ ಜಳಕಾ ಮಾಡಿ ಸಾಲಿಗಿ ಹೊಗಾಕ ರೆಡಿ ಆದ.. ಇನ್ನೆನ ಬಗಲಿಗೆ ಪಾಟಿಚಿಲಾ ಹಾಕ್ಕೊಂಡು ಸಾಲಿಕಡೆ ಒಡಬೆಕನ್ನುವಸ್ಟರಾಗ ಅವನ ಅವ್ವ ಅಂಜವ್ವ ಯಾಕ್ಲಾ ಹಾಲಿನ ಚೆರಿಗಿ ಮರತಿಯೆನ್ ಅಂದ್ಲು ಅಲಾ ಅದು ಒಂದ ಐತಿಲಾ ಅಂದ ಹಾಲಿನ ಚೆರಿಗಿ ತೊಗೊಂಡು ಗೌಡರ ಮನಿಕಡೆ ಒಡಿದಾ... ದೊಡ್ಡಗೌಡರು ಅಂದರೆ ಅನ್ನಪ್ಪಗೌಡರು ಆ ಹಳ್ಳಿಗೆ ದೊಡ್ಡವರು ಅಂದರೆ ಶ್ರಿಮಂತರು ನ್ಯಾಯಾ ಪಂಚಾಯತಿ ಮಾಡೊರು! ತುಂಬಾ ಒಳ್ಳೆಯವರು ಆದರೆ ಸಿಕ್ಕಾಪಟ್ಟಿ ಸಿಟ್ಟಿನೌರು! ಹರೆದಾಗ ಊರ ಗರಡ್ಯಾಗ ಗುಂಡಾ ಯತ್ತುದು ಕುಸ್ತಿ ಹಿಡಿದು ಮಾಡಿದೌರು ಮಸ್ತ ಕಟ್ಟಮಸ್ತ ದೇಹ ಬೆಳಿಸಿದೌರು! ಆದರ ಇಗ ಅದನ್ಯಲ್ಲಾ ಬಿಟ್ಟಮ್ಯಾಗ ಸಿಕ್ಕಾಪಟ್ಟಿ ಬೊಜ್ಜು ಬೆಳದು ಸುದ್ದ ೩೦೦ ಕೆ ಜಿ ತುಕತಾರ :) ಸರಿಯಾಗಿ ಅಡ್ಡ್ಯಾಡಾಕ್ ಬರಲಾರದ ಇವಾಗ ಮನ್ಯಾಗಿಂದ ಹೊರಗ ಬರುದಿಲ್ಲಾ ಅವರಿಗೆ ಇಗ ಎಲ್ಲಾ ಕುಂತಲ್ಲೆ ಆಗಬೆಕು! ಅಂದರ ಊಟಾ ಉಪಚಾರ ನಿದ್ದಿ ಮಾತು ಕತಿ ಏಲ್ಲಾ ಕುಂತಲ್ಲೆ! ಕೈಗೊಂದು ಕಾಲಿಗೊಂದು ಆಳ ಇದ್ದಿದ್ದರಿಂದ ಗೌಡರದು ಏಲ್ಲಾ ಚೆಲೊ ಹೊಂಟಿತ್ತು :) ಗೌಡರ ಮನಿ ದೊಡ್ಡ ಅರಮನಿ ತರಾ ಇತ್ತು ಆದರ ಅದ್ಯಾಕೊ ಗೊತ್ತಿಲ್ಲಾ ಅದರ ಬಾಗಲ ಮಾತ್ರ ಸನ್ನದಿತ್ತು!
                          ಹಣಮ್ಯಾ ಸಾಲಿಗಿ ಟೈಮ ಆಕೈತಿ ಅಂತೆಳಿ ಒಡಕೊತ ಗೌಡರ ಮನಿಗೆ ಬಂದ.. ಸಾಲಿಗಿ ಹೊಗಾಕತ್ತಿದಾಗಿನಿಂದ  ಹಣಮ್ಯಾ ವಟ್ಟ ಗೌಡರ ಮನಿಕಡೆ ಬಂದಿದ್ದಿಲ್ಲಾ ಬಂದವನ ಗೌಡರ ಮನಿವಳಗ ಹೊಗಿ ಗೌಡಶ್ಯಾನರ ಅಂತ ಕೂಗಿ ಹಾಲಿನ ಚೆರಗಿ ತೊಗೊರಿ ಅಂದ.. ಅಸ್ಟರಾಗ ಗೌಡರ ಕುಂತಲ್ಲಿಂದ ಲೆ ಹುಡಗಾ ಅಲ್ಲೆ ಬಿಸುಕಲ್ಲತ್ತೆಕಿನ ಕಟ್ಟಿಮ್ಯಾಗ ಇಡ್ ಅಂದರು  ಹಣಮ್ಯಾ ಇವರ ಯಾರಪ ಅನಕೊತ ಗೌಡರನ ನೊಡಿ ದಂಗಬಡದ ನಿಂತಾ! ಏಲಾ ಇವನೌನ ಏಸ್ಟದಪ್ಪ ಅದಾರೊ ಮರಾಯ ಅಂತ ಮನಸ್ನ್ಯಾಗ ಅನ್ಕೊಳಾಕತ್ತ ಹಾಲಿನ ಚೆರಿಗಿ ಅಲ್ಲಿ ಇಟ್ಟು ಸಾಲಿಟೈಮನು ಮರತ ಗೌಡರನ ಒಂದ ಸಮನ ನೊಡಕೊತ ನಿಂತ.. ಮದಲ ಹುಡಗ ಬುದ್ದಿ ಏನೆನೊ ವಿಚಾರ ಮಾಡ್ಕೊತ ಗೌಡರು ಹಂಗ ಇರುದನ್ನ ನೊಡಿ ಮನಸ್ನ್ಯಾಗ ನಕ್ಕಾ! ಆತು ಇನ್ನೆನ ಹೊರಗ ಹೊಗಬೆಕು ಅನ್ನುವಸ್ಟರಾಗ ಗೌಡರ ಮನಿ ಬಾಕಲಾ ನೊಡಿದಾ ಅದು ಸನ್ನದಿತ್ತು!  ಹಣಮ್ಯಾ ಸಾಲಿನ ಅಲ್ಲೆ ಬಿಟ್ಟು ಗೌಡರ ಬಗ್ಗೆ ಒಂದ ಚಿಂತಿ ಮಾಡಾಕತ್ತ! ಅದೆನಪಾ ಅಂದರ ಗೌಡರರ ಇಸ್ಟ ದಪ್ಪ ಅದಾರ ಬಾಕಲರ ಇಸ್ಟ ಸನ್ನದೈತಿ.. ನಾಳೆ ಗೌಡರೆನರ ಶಿವನಪಾದಾ ಸೆರಿದರ ಹೆಂಗ! ಅನ್ನುದು. ಅಸ್ಟ ವಿಚಾರ ಮಾಡಿ ಸುಮ್ನ ಹೊಗುದು ಬಿಟ್ಟು  ಹಣಮ್ಯಾ ಮಗಾ ಅಲ್ಲೆ ಹೊರಗ ಗೌಡರ ಏತ್ತಿನ ಮೈ ತೊಳ್ಯಾಕತ್ತಿದ್ದ ಭಜಂತ್ರಿ ಯಮನಪ್ಪನ ಹತ್ರ ಕೆಳೆ ಬಿಟ್ಟ! ಅದೆನೊ ಅಂತಾರಲ್ಲ  ತಡಕೊಳಲಾರದಕ್ಕ ಜಿಗದ ಗೊಡ್ಯಾನ ಗುಟಕ್ ಕುಂತರಂತ! :) ಹಂಗಾತ  ಹಣಮ್ಯಾನ ಬಾಳೆ.. ಯಾಕಂದರ ಅವರ ಗೌಡ್ರ ಬಗ್ಗೆ ಹಂತಾ ಮಾತ ಅಂದಿದ್ದಕ್ಕ ಯಮನಪ್ಪಗ ಸಿಕ್ಕಾಪಟ್ಟೆ ಸಿಟ್ಟಬಂತು ಸೀದಾ  ಹಣಮ್ಯಾನ ಹಿಡಕೊಂಡ ಗೌಡರ ಹತ್ರ ಹೊಗೆಬಿಟ್ಟಾ.. ಮೊದಲ ಗೌಡರ ಸಿಟ್ಟ ಹೆಂತಾದು ಅಂದರ ಮುಗಿನಮ್ಯಾಲಿಕಿಂತ ಒಂದಿಸ್ಟ ಮುಂದ ಇತ್ತು! ಇನ್ನ ಹಿಂಗ ಅಂದಿದ್ದನ್ ಕೆಳಿ ಅವರಿಗೆ ಕುಂತ ಕಾಟಾದ ಕಾಲಿನಿಂದ ತಲಿಮ್ಯಾಗಿನ ಜಂತಿ ಮಟಾ ಉರದೊತು! ಹತ್ತಿ$$ ಉರಕೊಂಡ ಗೌಡರು  ಹಣಮ್ಯಾನ ಅಲ್ಲೆ ಕಂಬ ಕಟ್ಟಿ.. ಸೂ.. ಮ..  ಬಾರಕೊಲಲೆ ಯಾಡ್ ಕಟಿರಲೆ ಅಂತ ಆಳ ಮನಶ್ಯಾರಿಗೆ ಆದ್ನೆ ಮಾಡಿಬಿಟ್ಟರುಇಕಾಡೆ ನಸಕನ್ಯಾಗ ಹೊಲಕ್ಕ ಹೊಗಿ ರೆಂಟಿ ಹೊಡ್ಯಾಕತ್ತಿದ್ದ  ಹಣಮ್ಯಾನ ಅಪ್ಪಾ ಶಂಕರಪ್ಪಗ ಸುದ್ದಿತಿಳದ ಒಂದ ಉಸಿರನ್ಯಾಗ ಒಡಕೊತ ಗೌಡರ ಮನಿಗೆ ಬಂದ ಗೌಡರ ಕಾಲಿಗಿ ಬಿದ್ದ ಯಾಕರಿ ಏಪ್ಪಾ ಯಾಕ ನನ್ನ ಮಗನ್ನ ಹಿಂಗ ಹೊಡ್ಯಾಕತ್ತಿರಿ ಅಂತ ಕೆಳಿದ, "ಯಾಕಾ.. ಅವನೌನ ಸನ್ನ ಹುಡಗದಾನಂತ ಸುಮ್ಮ ಬಿಟ್ಟಿನಿ.. ಕೆಳ್ ಅವನಿಗೆ ಅವಾ ನನಗ ಏನ್ ಅಂದಾನಂತ" ಅಂತ ಗೌಡರು ಗುಡಗಿದರು..
ಶಂಕರಪ್ಪಾ ಹಣಮ್ಯಾನಂತೆಕ ಬಂದು ಯಾಕ್ಲೆ ಏನ ಅಂದಿ ಗೌಡರಿಗೆ ಅಂತ ಬಯ್ಯಾಕತ್ತಿದಾ "ಏಪ್ಪಾ... ನಾನ ಏನು ಅಂದಿಲ್ಲಾ.. ಗೌಡರರ ಇಸ್ಟ ದಪ್ಪ ಅದಾರ ಆದರ ಗೌಡರ ಮನಿ ಬಾಕಲರ ಹಿಂಗ ಸನ್ನದೈತಿ ನಾಳೆ ಗೌಡರು ಸತ್ತರಂದರ ಅವರನ್ನ ಹೊರಗ ಹೆಂಗತರತಿರಿ ಅಂತ ಯಮನಪ್ಪನ ಕೆಳಿದ್ಯಾ ಅಸ್ಟ!" ಅಂದ. ಇದನ್ನ ಕೆಳಿ ಶಂಕರಪ್ಪಗು ನಗು ಬಂದ ಬಾಯಾನ ಮಾತ ತಡಕೊಳಾಲರದ "ಅಲ್ಲಲೆ ಅದಕ್ಕ್ಯಾಕ ಚಿಂತಿ ಮಾಡತಿ ಗೌಡರನ್ನ ಅಲ್ಲೆ ಮನ್ಯಾಗ ಸನ್ನಂಗ ಕೊಡ್ಲಿಲೆ ಕಡದ [ಕತ್ತರಿಸಿ] ಹೊರಗ ತಂದರಾತಪಾ" ಅಂತ ಅಂದ ಬಿಟ್ಟಾ!! ಹಣಮ್ಯಾರಪ್ಪ ಅಂದಿದ್ದ ಮಾತ ಕೆಳಿದ ಗೌಡರಿಗೆ ಹಸಿ ಮೆನಸಿನಕಾಯಿ ಶಿಕರಣಿ ಕುಡದಂಗಾತು :) ಸಿಟ್ಟ ತಡಕೊಳಲಾರದ ಕುಂತಲ್ಲೆ ಲೆ ಯಮನ್ಯಾ ತಾರಲೆ ಇಲ್ಲಿ ಬಾರಕೊಲ ತಾಲೆ ಇಲ್ಲಿ ಇವರಿಬ್ಬರ್ದು ಚೆರಮಾ ಸುಲದ ಬಿಡತಿನಿ ಇವತ್ತು ಅಂದು ಜೊರ ಬಾಯಿ ಮಾಡಿ ಒದರಾಡಕತ್ತರು.. ಇಬ್ಬರನ್ನು ಕಂಬಕ್ಕ ಕಟ್ಟಿಸಿ ಹೊಡ್ಯಾಕ ಹಚ್ಚಿದ್ರು.. ಯಮನ್ಯಾಗು ಇಸ್ಟ ಬೆಕಾಗಿತ್ತು ಯಾಕಂದರ ಶಂಕರಪ್ಪನ ಮ್ಯಾಗ ಹಳೆ ಸಿಟ್ಟು ಇತ್ತು ಅದೆನಂದರ... ಹಿಂದಕ ಯಮನ್ಯಾ ಶಂಕರಪ್ಪಾರ ಹೊಲದಾಗ ಸುಲಗಾಯಿ ಕಿತ್ತಿದ್ದರ ಸಮಂದ ಶಂಕರಪ್ಪನ ಕೈಲೆ ಹಿಗ್ಗಾ ಮುಗ್ಗಾ ಹೊಡಸಕೊಂಡಿದ್ದಾ.. ಇದ ಚಾನ್ಸ ನಿಂದರಂತ ಯಮನ್ಯಾ ಒಂದ ಕೈ ಹೆಚ್ಚಿಗೆನ ಹೊಡದ!
                       ಇಬ್ಬರು ಅಪ್ಪಾ ಮಗನ್ನ ಗೌಡರ ಹೊಡಸಾಕತ್ತಿದ್ದ ಸುದ್ದಿ ಶಂಕರಪ್ಪಾರ ಅಪ್ಪಾ ಬಸಪ್ಪಗ ಮುಟ್ಟಿತು.. ರಾತ್ರಿ ಅಲ್ಲೆ ಮಸುತ್ಯಾಗ ಮಕ್ಕೊಂದು ಇಗ ಏದ್ದು ಅಲ್ಲೆ ತನ್ನ ಹಳೆ ಮನಸಿನ ದೊಸ್ತರ ಜೊಡಿ ಹರಟಿ ಹೊಡಕೊತ ಕುಂತಿದ್ದ ಬಸಪ್ಪಾ.. ಇ ಸುದ್ದಿ ಕೆಳಿ ದಿಗಲ ಬಡದಂಗಾಗಿ ಏದ್ನ್ಯೊ ಬಿದ್ನ್ಯೊ ಅಂತ ಗೌಡರ ಮನಿಕಡೆ ಒಡಿದಾ.. ಹೊಗಿ ಅಪ್ಪಾರ ಯಾಕರಿ ಹಿಂಗ ಹೊಡಸಾಕತ್ತಿರಿ ನನ್ನ ಮಕ್ಕಳನ್ನ ಅದು ಮುಂಜಾನೆ ಮುಂಜನೆನ ಯಾಕರಿ ಅಪ್ಪಾರ ಅಂತ ಕೆಳಿದಾ... ಗೌಡರಿಗೆ ಅವರಂದಿದ್ದ ಮಾತ ಇವನ ಮುಂದ ಹೆಳಾಕಾಗಲಾರದ ನಿನ ಕೆಳ್ ಹೊಗು ಅಂತ ಅಂದರು. ಬಸಪ್ಪಾ ಮಗಾ ಶಂಕರಪ್ಪಾ ಮತ್ ಮೊಮ್ಮಗ ಹಣಮ್ಯಾನತ್ರ ಬಂದು ಯಾಕಲ್ರೆ ಯೆನ್ ಅಂದಿರಿ ಅಂದ.. ಶಂಕರಪ್ಪ ತಾವು ಅಂದಿದ್ದನ್ನ ಮತ್ತ ನಡದಿದ್ದನ್ನ ಹೆಳಿದಾ.. ಇವರಂದಿದ್ದನ್ನ ಕೆಳಿ ಬಸಪ್ಪಗು ಸಿಕ್ಕಾಪಟ್ಟಿ ಸಿಟ್ಟಬಂತು " ಅಲ್ಲರ್ಲೆ.. ಸೂ..ಮ.. ಗೌಡರ ಸಾಯು ವಿಚಾರ ನಿಮಗ್ಯಾಕ ಬೆಕಲ್ರೆ ನಿಮ್ಮ ಕೆಲಸಾ ನಿಮಗ ನೊಡಾಕ ಬರ್ತೈತಿಲ್ಲ.. ಅಸ್ಟಕ್ಕೂ ಹಂಗೆನರ ಗೌಡರು ಸತ್ತ ಹೊದರಪಾ ಅಂದರ ಇಲ್ಲೆ ಮನ್ಯಾಗ ಸಾಗವಾನಿ ಕಿಡಕಿ .. ಬಾಕಲಾ.. ಅದಾವು ಅವನ್ನೆಲ್ಲಾ ತೊಗೊಂಡು ಇಲ್ಲೆ ಮನ್ಯಾಗ ಗೌಡರನ್ನ ಸುಟ್ಟರಾತು ಅದೆಲ್ಲಾ ನಿಮಗ್ಯಾಕಲ್ರೆ" ಅಂತ ಅಂದ. ಇನ್ನ ಗೌಡರಗೆ ಇ ಮಾತ ಕೆಳಿ ಇವರನ್ನ ಏನ ಮಾಡಬೆಕಂತ ತಿಳಿಲಿಲ್ಲಾ ಆದರ ಸಿಟ್ಟರ ಏಸ್ಟ ಬಂದೈತಿ ಅಂದರ... ಸಿಟ್ಟಿಲೆ ಇ ಮೂರು ಮಂದಿ ಸೂ... ಮಕ್ಕಳನ್ನ ಒಳಗ ಕತ್ತಲ ಕೊಣ್ಯಾಗ ಹಾಕಿ ಬಿಡರಲೆ ಅನ್ನಾ ನಿರ ಏನು ಕೊಡಬ್ಯಾಡರಿ ಅಂತ ಆಳ ಮನ್ಯಶ್ಯಾರಿಗೆ ಹೆಳಿದರು. ಮದ್ಯಾನ ಆತು.. ಸಂಜಿ ಆತು.. ಗೌಡರ ಸಿಟ್ಟ ಇನ್ನು ಹಂಗ ಇತ್ತು ಇ ಸುದ್ದಿ ಇಡೀ ಊರಿಗೆ ಗೊತ್ತಾತು..
                        ಹಣಮ್ಯಾನ ದೊಸ್ತ  ಶರಣ್ಯಾನ  ಅ ಪ್ಪಾ ಮತ್ತ ಶಂಕರಪ್ಪಾ ಇಬ್ಬರು ದೊಸ್ತರು,ಮೂರು ಮಂದಿನ ಕತ್ತಲ ಕೊನ್ಯಾಗ ಹಾಕಿದ ಸುದ್ದಿನ  ಶರಣ್ಯಾ ಅವರಪ್ಪಗ ಹೆಳಿದಾ.. ಇದನ್ನ ಕೆಳಿ  ಶರಣ್ಯಾರಪ್ಪ ಗೌಡರತ್ತೆಕ ಬಂದು "ಗೌಡರ ಮೂರೂ ಮಂದಿದು ತಪ್ಪ ಆಗೈತಿರಿ ಇದೊಂದ ಸಲಾ ಬಿಟ್ಟಬಿಡರಿ ಅವರಿಗೆ ನಾನು ಒದ್ದು ಬುದ್ದಿ ಹೆಳತಿನಿರಿ ಅಂತ ಗೌಡರ ಕಾಲಿಗಿ ಬಿದ್ದ ಕೆಳಕೊಂಡ ಅಸ್ಟೊತ್ತಿಗೆ ಗೌಡರದು ಸಿಟ್ಟ ಸ್ವಲ್ಪ ಕಡಿಮಿ ಆಗಿತ್ತು.. "ಆತು ನಿನ ಹೆಳಾಕತ್ತಿ ಅಂತ ಹೆಳಿ ಬಿಡತಿನಿ ಇ ಸೂ.. ಮ.. ಇಲ್ಲಾ ಅಂದರ ಇಲ್ಲೆ ಮನ್ನ ಮಾಡತಿದ್ದಿನಿ" ಅಂತ ಅಂದು ಗೌಡರು ಸ್ವಲ್ಪ ತನ್ನಗಾದರು ಮೂರೂ ಮಂದಿನ ಬಿಟ್ಟರು!
                   ಗೌಡರ ಮನಿಯಿಂದ ಹೊರಗಹೊಗುಮುಂದ ನಡದಿದ್ದನ್ನ ಶಂಕರಪ್ಪ  ಶರಣ್ಯಾರಪ್ಪಗ ಹೆಳಿದಾ.. ಇದನ್ನ ಕೆಳಿದ ಹಣಮ್ಯಾನ  ದೊಸ್ತ  ಶರಣ್ಯಾ.. ಪ್ರಶ್ನೆಯೆಲ್ಲಾ ಕರೆಕ್ಟ್ ಐತಿ.. ಗೌಡರು ಸತ್ತರಂದರ ಇಡೀ ಮನಿಗೆ ಉ .... ಅಂತ ಮನಸ್ನ್ಯಾಗ ಏನ ಅನಕೊತ ಹೊದಾ!!!.


1 comment:

Munish said...

nice blog dear i am also join your site please also join my. sites